ಗಂಡನನ್ನು ಕೊಲ್ಲಲು ಹೋಗಿ, ಆಕೆ ಕುಟುಂಬದ 13 ಸದಸ್ಯರನ್ನು ಕೊಂದಳು!

Posted By:
Subscribe to Oneindia Kannada

ಇದು ಪಾಕಿಸ್ತಾನದಿಂದ ಬಂದಿರುವ ವರದಿ. ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಲ್ಲುವ ಪ್ರಯತ್ನದಲ್ಲಿ ಕುಟುಂಬದ ಹದಿಮೂರು ಮಂದಿಯ ಸಾವಿಗೆ ಕಾರಣಳಾಗಿದ್ದಾಳೆ. ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಆಕೆಯ ಮದುವೆಯಾಗಿತ್ತು.

ರಜನಿ ಸಿನಿಮಾ ಪ್ರೇರಣೆಯಿಂದ ಮಾಡಿದ ಕೆಲಸಕ್ಕೆ ಕಂಬಿ ಹಿಂದೆ ಖಾನ್

ತನಗೆ ಇಷ್ಟವಿಲ್ಲದ ಮದುವೆ ಮಾಡಿದರು ಎಂಬ ಸಿಟ್ಟಿಗೆ ಅಸಿಯಾ ತನ್ನ ಗಂಡನನ್ನು ಕೊಲ್ಲಲು ಈ ರೀತಿ ಸಂಚು ರೂಪಿಸಿದ್ದಳು. ಅದಕ್ಕೂ ಮುನ್ನ ತನ್ನ ತವರು ಮನೆಗೆ ವಾಪಸ್ ಹೋಗಬೇಕು ಎಂಬ ಆಕೆ ಪ್ರಯತ್ನ ವಿಫಲವಾಗಿತ್ತು. ಆ ನಂತರ ಆಕೆಯ ಗೆಳೆಯ ವಿಷವನ್ನು ತಂದುಕೊಟ್ಟಿದ್ದ.

Pakistan bride accidentally poisons 13 family members in failed bid to kill husband

ಆದರೆ, ಅಸಿಯಾ ತಂದುಕೊಟ್ಟ ಹಾಲನ್ನು ಪತಿ ಅಮ್ಜದ್ ಕುಡಿದಿಲ್ಲ. ವಿಷವಿದ್ದ ಆ ಹಾಲನ್ನು ಮಾರನೇ ದಿನಕ್ಕೆ ಬೆಣ್ಣೆ ಹಾಗೂ ಲಸ್ಸಿ ಮಾಡುವ ಸಲುವಾಗಿ ಬಳಸಿದ್ದಾರೆ. ಅದನ್ನು ಸೇವಿಸಿದ ಕುಟುಂಬದ ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ. ತನಿಖೆಯ ಪ್ರಾರಂಭದಲ್ಲಿ ಹಲ್ಲಿ ಬಿದ್ದು ಹೀಗಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆ ನಂತರ ವಿಚಾರಣೆ ವೇಳೆ ಅಸಿಯಾಳೇ ತಪ್ಪೊಪ್ಪಿಕೊಂಡಿದ್ದಾಳೆ.

ಅಕ್ರಮ ಸಂಬಂಧ ಬಯಲು: ಗುಪ್ತಾಂಗ ಕಟ್ ಮಾಡ್ಕೊಂಡ ಸ್ವಾಮೀಜಿ!

ಪಾಕಿಸ್ತಾನದಲ್ಲಿ ಈಚೆಗೆ ಬಾಲ್ಯ ವಿವಾಹ ವಿರೋಧಿ ಮತ್ತು ಬಲವಂತ ಮತಾಂತರ ವಿರೋಧಿ ಕಾನೂನು ಪ್ರಬಲವಾಗಿದೆ. ಪೋಷಕರು ನೋಡಿದ ಹುಡುಗನನ್ನೇ ಮದುವೆಯಾಗುವಂತೆ ಬಲವಂತ ಮಾಡುವಂತೆಯೂ ಇಲ್ಲ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಿಷ ಹಾಕಿ ಕೊಲ್ಲುವ ಪ್ರಕರಣಗಳು ಹೆಚ್ಚಾಗಿವೆ. ಕಳೆದ ತಿಂಗಳು ನವ ವಿವಾಹಿತರಿಗೆ ಹೆಣ್ಣಿನ ಕಡೆಯವರೇ ವಿಷವಿಟ್ಟು ಕೊಂದಿದ್ದಾರೆ. ವಿಚಿತ್ರ ಏನೆಂದರೆ, ಅದಕ್ಕೆ ಕಾರಣವೂ ಬೆಳಕಿಗೆ ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Pakistani woman has been arrested after a plot to murder her husband with a poisoned glass of milk led to the death of 13 family members.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ