'ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಲಿದೆ'
ವಿಶ್ವಸಂಸ್ಥೆ, ಅಕ್ಟೋಬರ್ 17: ಉತ್ತರಕೊರಿಯಾದ ವಿಶ್ವಸಂಸ್ಥೆಯ ಉಪ ರಾಯಭಾರಿಯೊಬ್ಬರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಕೊರಿಯಾ ಪ್ರಸ್ಥಭೂಮಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಅಣು ಯುದ್ಧ ಸಂಭವಿಸುವ ಸಾಧ್ಯತೆಯಿದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಸಮಿತಿಯ ಸಭೆಯೊಂದರಲ್ಲಿ ಉತ್ತರ ಕೊರಿಯಾದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಕಿಮ್ ಇನ್ ರಿಯಾಂಗ್ ಅವರು ಯುನೈಟೆಡ್ ಸ್ಟೇಟ್ಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಯುಎಸ್ ನ ಮುಖ್ಯ ಭೂಪ್ರದೇಶಗಳು ನಮ್ಮ ಟಾರ್ಗೆಟ್ ರೇಂಜ್ ನಲ್ಲಿವೆ. ನಮ್ಮ ಪವಿತ್ರ ಗಡಿಭಾಗದ ಒಂದಿಂಚು ಭೂಮಿಯನ್ನು ಯುಎಸ್ ಅತಿಕ್ರಮಣ ಮಾಡುವ ಸಾಹಸಕ್ಕೆ ಕೈ ಹಾಕಿದರೆ, ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.
1970ರ ನಂತರ ಯುಎಸ್ ಈಗ ತೆಗೆದುಕೊಂಡಿರುವ ನಿರ್ಣಯ ಅತ್ಯಂತ ಗಂಭೀರವಾಗಿದ್ದು, ಅಣ್ವಸ್ತ್ರ ಬಳಕೆ, ಅಣು ಯುದ್ಧಕ್ಕೆ ನಾಂದಿ ಹಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಪ್ರತಿ ದೇಶಗಳು ಸ್ವಯಂ ರಕ್ಷಣೆಗಾಗಿ ಅಣ್ವಸ್ತ್ರ ಹೊಂದುವುದರಲ್ಲಿ ತಪ್ಪೇನಿಲ್ಲ' ಎಂದು ಹೇಳಿದರು.












Click it and Unblock the Notifications