ನಮಗೆ ಎದುರಾದರೆ ದಕ್ಷಿಣದ ಮೇಲೆ ಪರಮಾಣು ದಾಳಿ: ಉತ್ತರ ಕೊರಿಯಾ!
ಪ್ಯೊಂಗ್ಯಾಂಗ್, ಏಪ್ರಿಲ್ 5: ಉತ್ತರ ಕೊರಿಯಾ ಯುದ್ಧವನ್ನು ವಿರೋಧಿಸುತ್ತದೆ, ಆದರೆ ದಕ್ಷಿಣ ಕೊರಿಯಾ ಮಿಲಿಟರಿ ಮುಖಾಮುಖಿ ನಡೆಸಲು ಮುಂದಾದರೆ, ದಾಳಿಯನ್ನು ನಡೆಸಿದರೆ ನಾವು ದಕ್ಷಿಣದ ಮೇಲೆ ಪರಮಾಣು ದಾಳಿ ಮಾಡಬೇಕಾಗುತ್ತದೆ ಎಂದು ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಮಂಗಳವಾರ ಹೇಳಿದ್ದಾರೆ.
ಈ ನಡುವೆ ಸರ್ಕಾರ ಮತ್ತು ಆಡಳಿತ ಪಕ್ಷದ ಹಿರಿಯ ಅಧಿಕಾರಿ ಕಿಮ್ ಯೋ ಜೊಂಗ್, ದಕ್ಷಿಣ ಕೊರಿಯಾದ ರಕ್ಷಣಾ ಸಚಿವರು ಉತ್ತರದ ಮೇಲಿನ ದಾಳಿಯ ಕುರಿತು ಚರ್ಚಿಸುವ ಇತ್ತೀಚಿನ ಹೇಳಿಕೆಗಳನ್ನು "ಬಹಳ ದೊಡ್ಡ ತಪ್ಪು" ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸುಹ್ ವೂಕ್ ಶುಕ್ರವಾರ ತಮ್ಮ ದೇಶದ ಮಿಲಿಟರಿಯು ಸುಧಾರಿತ ಪಡೆಯನ್ನು ಹೊಂದಿದೆ. ಸುಧಾರಿತ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇದೆ. ವಿವಿಧ ಕ್ಷಿಪಣಿಗಳನ್ನು ಹೊಂದಿದೆ ಎಂದು ಹೇಳಿದರು. ಹಾಗೆಯೇ "ಉತ್ತರ ಕೊರಿಯಾದಲ್ಲಿ ಯಾವುದೇ ಪ್ರದೇಶದ ಮೇಲೆ ನಿಖರವಾಗಿ ಮತ್ತು ತ್ವರಿತವಾಗಿ ದಾಳಿ ನಡೆಸುವ ಸಾಮರ್ಥ್ಯ ನಮ್ಮಲ್ಲಿ ಇದೆ," ಎಂದಿದ್ದಾರೆ.

ಈ ವರ್ಷ ಹೆಚ್ಚು ಶಕ್ತಿಶಾಲಿ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ
ಉತ್ತರ ಕೊರಿಯಾ ಈ ವರ್ಷ ಹೆಚ್ಚು ಶಕ್ತಿಶಾಲಿ ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಈ ಹಿನ್ನೆಲೆಯಿಂದಾಗಿ ಸಿಯೋಲ್ ಮತ್ತು ವಾಷಿಂಗ್ಟನ್‌ನ ಅಧಿಕಾರಿಗಳು ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ದಕ್ಷಿಣವು ಪೂರ್ವಭಾವಿ ದಾಳಿಯಂತಹ ಯಾವುದೇ "ಅಪಾಯಕಾರಿ ಮಿಲಿಟರಿ ಕ್ರಮ" ವನ್ನು ತೆಗೆದುಕೊಂಡರೆ ಪ್ಯೊಂಗ್ಯಾಂಗ್ ಸಿಯೋಲ್‌ನಲ್ಲಿನ ಪ್ರಮುಖ ಗುರಿಗಳನ್ನು ನಾಶಪಡಿಸುತ್ತದೆ ಎಂದು ಕಿಮ್ ಮತ್ತು ಇನ್ನೊಬ್ಬ ಉತ್ತರ ಕೊರಿಯಾದ ಅಧಿಕಾರಿ ಎಚ್ಚರಿಸಿದ್ದಾರೆ.

ತನ್ನ ಎರಡನೇ ಹೇಳಿಕೆಯಲ್ಲಿ, ಮಂಗಳವಾರ, ಕಿಮ್ ಯೋ ಜೊಂಗ್ ಪ್ಯೊಂಗ್ಯಾಂಗ್ ಯುದ್ಧವನ್ನು ವಿರೋಧಿಸುತ್ತದೆ, ಅದು ಪರ್ಯಾಯ ದ್ವೀಪವನ್ನು ಅದರಷ್ಟಕ್ಕೆ ಬಿಡುತ್ತದೆ, ದಕ್ಷಿಣ ಕೊರಿಯಾವನ್ನು ಅದರ ಪ್ರಮುಖ ಶತ್ರು ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು. "ಬೇರೆ ರೀತಿಯಲ್ಲಿ ಹೇಳುವುದಾದರೆ, ದಕ್ಷಿಣ ಕೊರಿಯಾದ ಸೇನೆಯು ನಮ್ಮ ರಾಜ್ಯದ ವಿರುದ್ಧ ಯಾವುದೇ ಮಿಲಿಟರಿ ಕ್ರಮವನ್ನು ತೆಗೆದುಕೊಳ್ಳದ ಹೊರತು, ಅದನ್ನು ನಮ್ಮ ದಾಳಿಯ ಗುರಿಯಾಗಿ ಪರಿಗಣಿಸಲಾಗುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದರು.
"ಇದು ಕೇವಲ ಬೆದರಿಕೆ ಅಲ್ಲ. ಇದು ದಕ್ಷಿಣ ಕೊರಿಯಾದ ಸಂಭವನೀಯ ಅಜಾಗರೂಕ ಮಿಲಿಟರಿ ಕ್ರಮಕ್ಕೆ ನಮ್ಮ ಪ್ರತಿಕ್ರಿಯೆಯ ವಿವರವಾದ ಹೇಳಿಕೆ," ಎಂದು ಕೂಡಾ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜೊಂಗ್ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಷ್ಯಾ ಉಕ್ರೇನ್ ಯುದ್ದದಲ್ಲಿ ರಷ್ಯಾವು ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಆತಂಕ ಉಂಟಾಗಿದೆ. ಈ ನಡುವೆ ಕಿಮ್ ಯೋ ಜೊಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.












Click it and Unblock the Notifications