Get Updates
Get notified of breaking news, exclusive insights, and must-see stories!

ನೇಪಾಳ - ಆದೊಂದು ಕ್ಷಿಪ್ರ ಕ್ರಾಂತಿಯೇ, ಇದರ ಹಿಂದೆ ಅಮೆರಿಕಾ ಇದೆಯೇ ?

ನೇಪಾಳದಲ್ಲಿ ನಡೆದ ಜನರೇಷನ್ Z ಅಭಿಯಾನವು ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ಈಗಲೂ ನೇಪಾಳ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಈ ಮೂಲಕ ಭಾರತದ ಸುತ್ತಮುತ್ತಲಿನ ಐದನೇ ರಾಷ್ಟ್ರ ಈ ರೀತಿ ರಾಜಕೀಯ ಅರಾಜಕತೆಗೆ ಸಾಕ್ಷಿಯಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನೇಪಾಳದ ಬಗ್ಗೆ ಹಲವು ಗಂಭೀರ ಚರ್ಚೆಗಳು ನಡೆದಿವೆ. ಅದರಲ್ಲಿ ಕೆಲವೊಂದು ಬರಹಗಳು ಗಮನ ಸೆಳೆಯುವಂತೆ ಇವೆ. ಅದರ ವಿವರ ಇಲ್ಲಿದೆ.

ನೇಪಾಳದ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರಹಗಾರ ಹರೀಶ್ ಗಂಗಾಧರ್ ಅವರು ಹಂಚಿಕೊಂಡಿರುವ ಬರಹವು ವೈರಲ್ ಆಗುತ್ತಿದೆ. ನಿಜವಾಗಿಯು ಉಳ್ಳವರ ಹೇಸಿಗೆ ತರಿಸುವಂತಹ ಆಡಂಬರ, ಅಧಿಕಾರಸ್ಥರ ಭ್ರಷ್ಟಚಾರ, ವ್ಯಾಪಕ ನಿರುದ್ಯೋಗ ನೇಪಾಳದಲ್ಲಿ ಉದ್ಭವವಾಗಿರುವ ಕಳವಳಕಾರಿ ಬೆಳವಣಿಗೆಗೆ ಕಾರಣ ಎಂದು ನಂಬಿದ್ದರೆ ಅದರಲ್ಲಿ ಯಾವ ತಪ್ಪಿಲ್ಲ. ಆದರೆ ಜಾಗತಿಕ ರಾಜಕೀಯವನ್ನು ಗಮನಿಸುತ್ತಿರುವವರಿಗೆ ಈ ಘಟನಾವಳಿಗಳು ಬೇರೆಯದೇ ಕತೆಯನ್ನು ಸೂಚಿಸಿದರೆ ಅದರಲ್ಲೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.

Nepal s Turmoil Rapid Revolution or Shadow of U S Influence

ಚೀನಾಕ್ಕೆ ಹತ್ತಿರವಾಗಿದ್ದ ನೇಪಾಳದ ಪ್ರಧಾನಿ ಒಲಿ ಅಧಿಕಾರ ಕಳೆದುಕೊಂಡಿದ್ದಾರೆ. Gen Z ಕೋಪಕ್ಕೆ ಅವರು ತುತ್ತಾದರು, Gen Z ಕ್ರಾಂತಿ ಮಹತ್ತರವಾದುದು ಎಂದು ಮಾಧ್ಯಮಗಳು ಅಬ್ಬರಿಸುತ್ತಿವೆ. ಫೇಸ್‌ಬುಕ್‌ನಲ್ಲಿ ನನ್ನ ಗೆಳೆಯರೂ ಕೂಡ ಹಿಂಸಾತ್ಮಕ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೇಪಾಳ ಸರ್ಕಾರ ಏಕಾಏಕಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದು ಈ ತ್ವರಿತ ಕ್ರಾಂತಿಗೆ ನಾಂದಿ ಹಾಡಿತು, Gen Z ತಮ್ಮ ವಾಕ್ ಸ್ವಾತಂತ್ರ್ಯ ಮರಳಿ ಪಡೆಯಲು ರೊಚ್ಚಿಗೆದ್ದರು. ನಿರುದ್ಯೋಗದಿಂದ ಹತಾಶಗೊಂಡ, ಭ್ರಷ್ಟಾಚಾರದಿಂದ ಬೇಸತ್ತ ಯುವಜನತೆಗೆ ಸೋಶಿಯಲ್ ಮೀಡಿಯಾ ಬ್ಯಾನ್ ಒಂದು ಕಿಚ್ಚಿನಂತೆ ವರ್ತಿಸಿತು. ನೇಪಾಳದ ಸರ್ಕಾರವನ್ನು ಆಹುತಿ ತೆಗೆದುಕೊಂಡ ಭುಗಿಲೆದ್ದ ಜ್ವಾಲೆಗೆ ಈ ಕಿಚ್ಚು ಕಾರಣವಾಯಿತು ಎಂದು ನನ್ನ ಮಿತ್ರರು ನಂಬಿದ ಹಾಗಿದೆ.

ಮುಂದೆ ಸಾಗಿ ನೋಡಿದರೆ ನಮಗೆ ಮತ್ತೊಂದು ವಿಷಯ ಸ್ಪಷ್ಟವಾಗುತ್ತೆ. ಒಲಿಯವರ ಎಕ್ಸಿಟ್ ನಿಂದ ತೆರವಾದ ಪ್ರಧಾನಿ ಪಟ್ಟಕ್ಕೆ ಯುವಕ ಬಾಲೆನ್ ಶಾ ಬರುವುದು ಸಾಕಷ್ಟು ಖಚಿತವಾಗಿದೆ. (ಬಾಂಗ್ಲಾದಲ್ಲಿ ಯುನೂಸ್ ಅಧಿಕಾರಕ್ಕೆ ಬಂದಂತೆ) ನೇಪಾಳದ ಮುಂದಿನ ಪ್ರಧಾನಿ ಬಾಲೆನ್ ಶಾ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ನೇಪಾಳದಲ್ಲಿ ರ್ಯಾಪರ್ ಆಗಿ ಹೆಸರು ಮಾಡಿದವರು. ಮುಂದೆ ಕಾಟ್ಮಂಡು ಮೇಯರ್ ಆದರು ಕೂಡ. ಭಾರತದ ಬಗ್ಗೆ ಅವರಿಗೆ ಒಲವಿಲ್ಲ. ಭಾರತದ ಹಿಮಾಚಲ ಪ್ರದೇಶ, ಉತ್ತರಕಾಂಡ್, ಸಿಕ್ಕಿಂ ಒಳಗೊಂಡ ಅಖಂಡ ನೇಪಾಳದ ಕನಸು ಕಾಣುವವ ಬಾಲೆನ್, ಅಮೆರಿಕಾಕ್ಕೆ ಆಪ್ತ!

2015ರ ನೇಪಾಳ ಭಯಾನಕ ಭೂಕಂಪ ಒಂದಕ್ಕೆ ತುತ್ತಾಯಿತು. ಆಗ ಸೂರು, ಆಪ್ತರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಹಸ್ರಾರು ಸಂತ್ರಸ್ತರಿಗೆ ನೆರವು ನೀಡಿದ್ದು ಹಮಿ ನೇಪಾಳ ಎಂಬ NGO. ಸುಡಾನ್ ಗುರುಂಗ್ ಇದರ ಸ್ಥಾಪಕ. ಈ NGO ಸಣ್ಣದಾಗಿ ಶುರುವಾದರು ಮುಂದೆ ಬೃಹದಾಕಾರವಾಗಿ ಬೆಳೆಯಿತು. ಈ ಸಂಸ್ಥೆಗೆ ವಿದೇಶಿ ಫಂಡ್ ಹರಿದು ಬಂದಿದೆ ಮತ್ತು ನೇಪಾಳದ ಪರಮ ಭ್ರಷ್ಟರು, arms ಡೀಲರ್‌ಗಳು ಕೂಡ ಈ NGO ಗೆ ಬಹಳ ಧಾರಾಳವಾಗಿ ದಾನ ನೀಡಿದ್ದಾರೆ. ಪ್ರತಿಭಟನೆಗೆ ಕರೆ ನೀಡಿದ್ದು ಇದೇ ಹಮಿ ನೇಪಾಳ! Everything is so well planned. ಒಂಥರಾ ಅಣ್ಣಾ ಹಜಾರೆ ಹೋರಾಟದಂತೆ ಎಂದು ಅವರು ದೂರಿದ್ದಾರೆ.

ಸೋಶಿಯಲ್ ಮೀಡಿಯಾ ಪ್ರಪಂಚದಲ್ಲಿ ಬಹಳಷ್ಟು ಕ್ರಾಂತಿಗಳಿಗೆ ಉತ್ತೇಜನ ನೀಡಿದೆ. ಅರೇಬಿಯನ್ ಸ್ಪ್ರಿಂಗ್, ಜಾಸ್ಮಿನ್ ಕ್ರಾಂತಿ, ಬಾಂಗ್ಲಾದೇಶದ ಕ್ಷಿಪ್ರ ಕ್ರಾಂತಿಯ ಹಿಂದೆ ಸೋಶಿಯಲ್ ಮೀಡಿಯಾ ಸಕ್ರಿಯವಾಗಿದ್ದು ಎದ್ದು ಕಾಣುತ್ತದೆ. ಅದರೆ ಈ ಎಲ್ಲಾ ಕ್ರಾಂತಿಗಳು ಅಮೆರಿಕಾ ಕೈಗೊಂಬೆ ರಿಜೀಮ್‌ಗಳನ್ನು ಸ್ಥಾಪಿಸಲು ಬಳಸಿಕೊಳ್ಳಲಾಯಿತು ಎಂಬುದು ಗಮನಿಸಬೇಕಾದ ವಿಷಯ. ಈಜಿಪ್ಟ್, ಲಿಬಿಯಾ, ಟ್ಯೂನಿಶಿಯಾ, ಇರಾಕ್ ನಲ್ಲಿ ಯಶಸ್ವಿಯಾದ ಅಮೆರಿಕಾ ಇತ್ತೀಚಿಗೆ ಬಾಂಗ್ಲಾದೇಶ್, ಪಾಕಿಸ್ತಾನ ಮತ್ತೀಗ ನೇಪಾಳದಲ್ಲೂ ಯಶಸ್ಸು ಸಾಧಿಸಿದೆ.

ನಿನ್ನೆ ನಡೆದ್ದದ್ದು Gen Z ಕ್ರಾಂತಿ, ಅದು Nepo ಕಿಡ್ಸ್ ವಿರುದ್ಧದ ಹೋರಾಟ, ಸೋಶಿಯಲ್ ಮೀಡಿಯಾ ಕ್ರಾಂತಿಯ ಸಾಧನ ಎಂಬುದೆಲ್ಲಾ ತೀರಾ simplistic ನೋಟಗಳು ಎಂಬ ಅನಿಸಿಕೆ ನನ್ನದು. ಭಾರತ, ಚೀನಾ, ರಷ್ಯಾವನ್ನು ಸ್ಟ್ರಾಟೆಜಿಕ್ ಆಗಿ ನಿಯಂತ್ರಿಸಲು ಅಮೆರಿಕಾಕ್ಕೆ ಬಾಂಗ್ಲಾ, ಪಾಕಿಸ್ತಾನ ಮತ್ತು ನೇಪಾಳ ಅತ್ಯಾವಶ್ಯಕ.

ಇತ್ತೀಚಿಗೆ ಒಂದು ವಿಡಿಯೋ ತುಣುಕು ನೋಡಿದ್ದೆ. ಡೊನಾಲ್ಡ್ ಟ್ರಂಪ್, ಸುಂದರ್ ಪಿಚೈ, ಟಿಮ್ ಕುಕ್, ಸತ್ಯ ನಾದೆಲ್ಲಾ, ಬಿಲ್ ಗೆಟ್ಸ್, ಮಾರ್ಕ್ ಜಾಕರ್ಬರ್ಗ್ ಅವರನ್ನು ಅಮೆರಿಕದಲ್ಲಿ ಎಷ್ಟು ಹೂಡಿಗೆ ಮಾಡ್ತೀರಾ ಎಂದು ಧಿಮಾಕಿನಿಂದ ಕೇಳುತ್ತಿದ್ದ ತುಣುಕದು. ಈ ಸಿರಿವಂತರು ಅತಿ ವಿನಮ್ರತೆಯಿಂದ ಉತ್ತರ ಕೊಡುತ್ತಿದ್ದರು.

ಇಂತಹದೇ ಒಂದು ಮೀಟಿಂಗ್‌ಗಳಲ್ಲಿ ಪ್ರಪಂಚದ ಯಾವ ಭಾಗದಲ್ಲಿ ಕ್ರಾಂತಿ ಹುಟ್ಟಬೇಕು, ಎಲ್ಲಿ ಅದು ಯಶಸ್ವಿಯಾಗಬೇಕು, ಮತ್ತೆಲ್ಲಿಯ ಕ್ರಾಂತಿ ಕಮರಿಹೊಗಬೇಕೆಂಬುದು ನಿರ್ಧಾರವಾಗುತ್ತದೆ! ಈ ಅರಿವು ಮುಖ್ಯ. Social media can't give rise to a revolution. ಪುಟ್ಟ ಚಳವಳಿಗೆ ಅಮೆರಿಕಾ ಸಹಮತವಿದ್ದರೆ ಅದು ಬೃಹತ್ ಕ್ರಾಂತಿಯಾಗುತ್ತದೆ ಎಂಬುದಂತೂ ದಿಟ. ನಮ್ಮ ಸುತ್ತಲ ಮುತ್ತಲ ರಾಷ್ಟ್ರಗಳಲ್ಲಿ ಇಷ್ಟೆಲ್ಲಾ ಅಸ್ಥಿರತೆ, ಅರಾಜಕತೆ ತಾಂಡವವಾಡುತ್ತಿರುವಾಗ, ನಮ್ಮ ಮಿತ್ರರು ಕಾಣೆಯಾಗಿ ವೈರಿಗಳೇ ನಮ್ಮನ್ನು ಸುತ್ತುವರೆದಿರುವಾಗ ಭಾರತ ಮತ್ತಷ್ಟು ಒಳಗಿನಿಂದ ಬಲಿಷ್ಠವಾಗಬೇಕು, ಸೌಹಾರ್ದತೆಗೆ ಆದ್ಯತೆ ನೀಡಿ ದೇಶದ ಜನರು ಒಗ್ಗೂಡಬೇಕು. ಸ್ವಾಯತ್ತತೆಯ ಕಡೆಗೆ ಹೆಜ್ಜೆಯಾಕಬೇಕು. ಕೋಮುವಾದ ಗೆಲುವು ಕಂಡು, ನಮ್ಮಲ್ಲೇ ಒಡಕುಗಳು ನೂರಾರಿದ್ದರೆ... Enemy is at the gates ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+