Nepal Protest: ಓಡೋ.. ಓಡೋ.. ಓಡೋಲೇ... ನೇಪಾಳ ರಾಜಕಾರಣಿಗಳು ದೇಶ ಬಿಟ್ಟು ಎಸ್ಕೇಪ್!
ನೇಪಾಳ ಧಗಧಗ ಅಂತಿದೆ, ನೇಪಾಳ ದೇಶ ಇದೀಗ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗುತ್ತಿದೆ. ನೋಡ ನೋಡುತ್ತಲೇ ಭಾರತದ ನೆರೆಯ ದೇಶದಲ್ಲಿ ಯುವಕರು ಸಂಸತ್ ಕಟ್ಟಡಕ್ಕೇ ಬೆಂಕಿಯನ್ನ ಹಚ್ಚಿದ್ದಾರೆ. ಮಾಜಿ ಪ್ರಧಾನಿಗೆ ಏಟು ಕೊಟ್ಟು, ರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಸಚಿವರು & ಅಧಿಕಾರಿಗಳನ್ನ ನದಿಗೆ ತಳ್ಳಿದ್ದಾರೆ. ಹೀಗೆ ನೇಪಾಳ ದೇಶದ ಹೋರಾಟ ಕೈಮೀರಿ ಹೋಗಿದ್ದು, ಈ ಗಲಾಟೆಯಲ್ಲಿ ಮುಂದೆ ಏನೇನೋ ಆಗುತ್ತೆ ಅನ್ನೋ ಭಯ ಕೂಡ ಆವರಿಸಿದೆ. ಇದೇ ವೇಳೆ ದಿಢೀರ್ ನೇಪಾಳ ರಾಜಕಾರಣಿಗಳು ದೇಶ ಬಿಟ್ಟು ಎಸ್ಕೇಪ್ ಆಗುತ್ತಿದ್ದಾರೆ!
ನೇಪಾಳದಲ್ಲಿ ಹೊಸ ಯುಗ ಆರಂಭವಾಗಿದೆ, ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ಈಗ ದಿಢೀರ್ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲ್ ಕರ್ಕಿ ಅವರ ಬೆನ್ನಿಗೆ ನಿಂತಿದ್ದಾರೆ. ಈ ಮೂಲಕ ಅವರನ್ನೇ ನೇಪಾಳದ ಮುಂದಿನ ಪ್ರಧಾನಿ ಮಾಡಿ ಅಂತಾ ಒತ್ತಾಯ ಮಾಡುತ್ತಿದ್ದಾರೆ. ಈ ಮೂಲಕ ಇದೀಗ ನೇಪಾಳ ನೆಲದಲ್ಲಿ ಮತ್ತೊಂದು ಕ್ರಾಂತಿಯ ಕಹಳೆ ಮೊಳಗಿದೆ. ಇನ್ನೊಂದು ಕಡೆ ಪ್ರತಿಭಟನೆಯ ಹಿಂಸೆಗೆ ಹೆದರಿ ಮಾಜಿ ಸಚಿವರು ಹಾಗೂ ನಾಯಕರು ನೇಪಾಳ ಬಿಟ್ಟು ಓಡಿ ಹೋಗುತ್ತಿದ್ದಾರೆ.

ಹೆಲಿಕಾಪ್ಟರ್ ಮೂಲಕ ಸಚಿವ ಎಸ್ಕೇಪ್?
ನೇಪಾಳ ಪರಿಸ್ಥಿತಿ ಯಾವ ಮಟ್ಟಿಗೆ ಇದೆ ಎಂದರೆ, ಸ್ವತಃ ತಮ್ಮ ದೇಶದ ರಾಜಕೀಯ ನಾಯಕರ ಮನೆಗಳಿಗೆ ನುಗ್ಗಿ ಅವರನ್ನ ಹೊರಗೆ ಕರೆದುಕೊಂಡು ಬಂದು ಥಳಿಸುತ್ತಿದ್ದಾರೆ ಅಲ್ಲಿನ ಯುವಕರು. ಹೀಗಾಗಿ ಭೀಕರ ಪ್ರತಿಭಟನೆಗೆ ಹೆದರಿ ನೇಪಾಳ ಸಚಿವನೊಬ್ಬ ಸೇನಾ ಹೆಲಿಕಾಪ್ಟರ್ ಮೂಲಕವೇ ದೇಶ ಬಿಟ್ಟು ಎಸ್ಕೇಪ್ ಆಗಿರುವ ಆರೋಪ ಕೇಳಿ ಬಂದಿದೆ. ಇನ್ನು ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಜಗತ್ತಿನ ಮೂಲೆ ಮೂಲೆಯಲ್ಲೂ ವೈರಲ್!
ಹೌದು, ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಿಂಸಾಚಾರ ಪೀಡಿತ ನೇಪಾಳದ ಸಚಿವ ತನ್ನ ಕುಟುಂಬ ರಕ್ಷಣೆ ಮಾಡಿಕೊಳ್ಳಲು ನೇಪಾಳ ಸೇನೆಯ ಮೊರೆ ಹೋಗಿರುವುದು ಕಂಡು ಬಂದಿದೆ. ಇದೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಂದಹಾಗೆ ನೇಪಾಳ ದೇಶದ ಕಠ್ಮಂಡು ನಗರದ ಹೋಟೆಲ್ ಮೇಲಿಂದ ಸಚಿವರೊಬ್ಬರ ಕುಟುಂಬವನ್ನು, ನೇಪಾಳ ಸೇನೆಗೆ ಸೇರಿರುವ ಹೆಲಿಕಾಪ್ಟರ್ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುತ್ತಿರುವ ದೃಶ್ಯ ಜಗತ್ತಿನ ಮೂಲೆ ಮೂಲೆಯಲ್ಲೂ ವೈರಲ್ ಆಗುತ್ತಿದೆ. ಹಾಗೇ ಭ್ರಷ್ಟ ರಾಜಕಾರಣಿಗಳಿಗೆ ಇದು ಎಚ್ಚರಿಕೆ ಗಂಟೆಯಾಗಬೇಕು ಎಂಬ ಅಭಿಪ್ರಾಯವನ್ನು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications