Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ತಿರುಗಿಬೀಳುತ್ತಾ ಮಧ್ಯಪ್ರಾಚ್ಯ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಳ್ಳುತ್ತಿರುವ ಎಡವಟ್ಟು ಒಂದೊಂದಲ್ಲ, ಈ ಎಡವಟ್ಟುಗಳ ಪರಿಣಾಮ ಏನೇನೋ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂಬ ಆರೋಪವೂ ಇದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಗಾಜಾ ಪಟ್ಟಿ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿ ಟ್ರಂಪ್ ದೊಡ್ಡ ತಪ್ಪು ಮಾಡಿಬಿಟ್ರಾ? ಅನ್ನೋ ಅನುಮಾನ ಇದೀಗ ಮೂಡಿದೆ. ಮಧ್ಯಪ್ರಾಚ್ಯ ದೇಶಗಳು ಕೂಡ ಅಮೆರಿಕ ಅಧ್ಯಕ್ಷರ ವರ್ತನೆ ವಿರುದ್ಧ ಗರಂ ಆಗಿವೆ.
ಗಾಜಾ ಪಟ್ಟಿ ಪ್ರದೇಶದಲ್ಲಿ ಯುದ್ಧ ನಿಂತ ನಂತರ ಅಲ್ಲಿಂದ ಇಸ್ರೇಲ್ ಸೇನೆ ಹೊರ ಹೋಗುವ ನಿರೀಕ್ಷೆ ಇತ್ತು. ಆದರೆ ಇದೀಗ ಬೇರೆಯದ್ದೇ ಗೊಣಗಾಟ ಶುರುವಾಗಿದ್ದು, ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅಮೆರಿಕ ಕಾಯುತ್ತಿರುವಂತೆ ಗೋಚರಿಸಿದೆ. ಖುದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಹೇಳಿಕೆ ಸದ್ಯ ಮಧ್ಯಪ್ರಾಚ್ಯ ಭಾಗದ ದೇಶಗಳ ನಿದ್ದೆಯೇ ಹಾರಿ ಹೋಗುವಂತೆ ಮಾಡಿದೆ. ಹಾಗೇ ದೊಡ್ಡ ಮಟ್ಟದ ವ್ಯಾಪಾರ & ವಹಿವಾಟು ಕೂಡ ಈ ಮೂಲಕ ಹಾಳಾಗಿ ಹೋಗುವ ಲಕ್ಷಣ ಗೋಚರಿಸುತ್ತಿದೆ.

ಅಮೆರಿಕ ಜಾಗದಲ್ಲಿ ರಷ್ಯಾ ಎಂಟ್ರಿ?
ಎಲ್ಲಾ ಕಡೆಯೂ ಹೆಸರು ಕೆಡಿಸಿಕೊಂಡು ಪರದಾಡುತ್ತಿರುವ ಅಮೆರಿಕ ಮಧ್ಯಪ್ರಾಚ್ಯ ದೇಶಗಳ ಜೊತೆಗೂ ಫೈಟಿಂಗ್ ಮಾಡಿಕೊಂಡರೆ ಪರಿಸ್ಥಿತಿ ಕೈಮೀರುವುದು ಗ್ಯಾರಂಟಿ. ಈ ಕಾರಣದಿಂದ ರಷ್ಯಾಗೆ ಲಾಭ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಯಾಕಂದ್ರೆ ಮಧ್ಯಪ್ರಾಚ್ಯ ದೇಶಗಳ ಪೈಕಿ ಬಹುತೇಕ ವಹಿವಾಟು ಅಮೆರಿಕ ಮೂಲಕವೇ ನಡೆಯುತ್ತಿದೆ, ಆದರೆ ಅಮೆರಿಕ ಅಧ್ಯಕ್ಷರ ಈ ರೀತಿಯ ಹೇಳಿಕೆಗಳು ಭವಿಷ್ಯದ ಬಗ್ಗೆ ಚಿಂತೆ ಮೂಡವಂತೆ ಮಾಡಿದೆ. ಅಲ್ಲದೆ, ರಷ್ಯಾಗೆ ಇದರಿಂದ ಲಾಭ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.
ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ!
ಪ್ರಪಂಚ ಈಗಾಗಲೇ ಬೂದಿ ಮುಚ್ಚಿದ ಕೆಂಡವಾಗಿದ್ದು, ರಷ್ಯಾ & ಉಕ್ರೇನ್ ಯುದ್ಧ ಶುರು ಆದ ನಂತರ ಎಲ್ಲವೂ ಸರಿಯಾಗಿಲ್ಲ. ಇಂತಹ ಸಮಯದಲ್ಲೇ ಅಮೆರಿಕ ನೇರವಾಗಿ ಗಾಜಾ ಮೇಲೆ ಹಕ್ಕು ಸಾಧಿಸಲು ಮುಂದೆ ಬಂದರೆ ಪರಿಸ್ಥಿತಿ ಹೇಗೆ ಆಗಬೇಡ? ಎಂಬ ಚರ್ಚೆ ಈಗ ನಡೆಯುತ್ತಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯ ದೇಶಗಳು ಒಗ್ಗಟ್ಟಿನಿಂದ ಈ ನಿರ್ಧಾರವನ್ನು ವಿರೋಧ ಮಾಡಿವೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿದೆ. ಹಾಗೇ ಜಾಗತಿಕ ಆರ್ಥಿಕತೆ ಮೇಲೆ ಕೂಡ ಈ ಬೆಳವಣಿಗೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications