ಮೆಕ್ಸಿಕೋ: ಮಕ್ಕಳ ಬರ್ತ್‌ಡೇ ಪಾರ್ಟಿ ಮೇಲೆ ದಾಳಿ, 11 ಜನರ ಕಗ್ಗೊಲೆ

Subscribe to Oneindia Kannada

ಮೆಕ್ಸಿಕೊ, ಜುಲೈ 14: ಮಕ್ಕಳ ಬರ್ತ್‌ಡೇ ಪಾರ್ಟಿ ಮೇಲೆ ಮುಸುಕುಧಾರಿಯೊಬ್ಬ ದಾಳಿ ಮಾಡಿ 11 ಜನರನ್ನು ಬಲಿ ಪಡೆದ ಘಟನೆ ಮೆಕ್ಸಿಕೋದ ಹಿಡಾಲ್ಗೊ ರಾಜ್ಯದಲ್ಲಿ ನಡೆದಿದೆ.

ವಿಮಾನ ಪ್ರಯಾಣಿಕರನ್ನು ನಡುಗಿಸಿದ 'ಜಿಹಾದಿ ಲಂಡನ್' ವೈಫೈ!

ಪೊಲೀಸರು ಬರುವ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮೂರು ಮಕ್ಕಳು ಮಾತ್ರ ಬದುಕುಳಿದಿದ್ದರು. ಉಳಿದ 11 ಜನ ವಯಸ್ಕರನ್ನೂ ಬಂದೂಕುಧಾರಿ ಹತ್ಯೆಗೈದಿದ್ದಾನೆ.

Masked men burst into a children's birthday party in Mexico killed 11

ವಸತಿ ಪ್ರದೇಶವೊದರಲ್ಲಿ ಬರ್ತ್‌ಡೇ ಆಚರಣೆಗೆ ಮನೆ ಹೊರಗೆ ಟೆಂಟ್ ಹಾಕಲಾಗಿತ್ತು. ಈ ಟೆಂಟ್ ಮೇಲೆ ದಾಳಿ ನಡೆಸಿದ ಮುಸುಕುಧಾರಿಯೊಬ್ಬ ಮಾರಣಹೋಮ ನಡೆಸಿದ್ದಾನೆ.

ಇತ್ತೀಚೆಗೆ ಮೆಕ್ಸಿಕೋದಲ್ಲಿ ಡ್ರಗ್ ಕಾರ್ಟೆಲ್ ಗಳ ಮಧ್ಯೆ ಕದನ ಏರ್ಪಟ್ಟಿದೆ. ಮಕ್ಕಳನ್ನೂ ಸೇರಿಸಿ ಕುಟುಂಬಕ್ಕೆ ಕುಟುಂಬವನ್ನೇ ಬಲಿಪಡೆಯುವ ಟ್ರೆಂಡ್ ಬೆಳೆಯುತ್ತಿದೆ.

ಮೇ ತಿಂಗಳೊಂದರಲ್ಲೇ 2,186 ಕೊಲೆಗಳು ಮೆಕ್ಸಿಕೋದಲ್ಲಿ ನಡೆದಿವೆ. ಅಂದರೆ ದಿನಕ್ಕೆ 70 ಕೊಲೆಗಳು; ಡ್ರಗ್ ಕಾರ್ಟೆಲ್ ಗಳ ನಡುವಿನ ಕದನದ ಭೀಕರತೆಗೆ ಈ ಅಂಕಿ ಸಂಖ್ಯೆಗಳು ಕನ್ನಡಿ ಹಿಡಿಯುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Masked men burst into a children's birthday party in the Mexican city of Tizayuca in central Hidalgo state, killing 11.
Please Wait while comments are loading...