ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಇತಿಹಾಸ: ಚೀನಾ-ಕೊರೊನಾ ನಂಟು ಬಿಚ್ಚಿಟ್ಟವರೆಲ್ಲ ನಾಪತ್ತೆ!

|
Google Oneindia Kannada News

ಬೀಜಿಂಗ್, ಏಪ್ರಿಲ್.17: ವಿಶ್ವಕ್ಕೆ ವ್ಯಾಪಿಸಿದ ಕೊರೊನಾ ವೈರಸ್ ಕುರಿತು ಚೀನಾ ಮೇಲಿಂದ ಮೇಲೆ ಸುಳ್ಳುಗಳ ಸರಮಾಲೆಯನ್ನೇ ಹೆಣೆಯುತ್ತಿದೆ. ಸತ್ಯ ಹುಡುಕಿ ಹೊರಟವರಿಗೆ ಶಿಕ್ಷೆ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಾ ಮತ್ತೊಂದು ಅಂಶ ಇದೀಗ ಹೊರ ಬಿದ್ದಿದೆ.

ಕೊರೊನಾ ವೈರಸ್ ಕೇಂದ್ರ ಸ್ಥಾನ ಚೀನಾದ ವುಹಾನ್ ನಗರದಲ್ಲಿ ಸೋಂಕು ಹರಡುವುದರ ಹಿಂದಿನ ರಹಸ್ಯ ಬಿಚ್ಚಿಡಲು ಮುಂದಾಗಿದ್ದ ಮೂವರು ಕಳೆದ ಎರಡು ತಿಂಗಳಿನಿಂದಲೂ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿಅಮೆರಿಕಾಗೆ ತಲುಪಿತು ಭಾರತ ಕಳುಹಿಸಿದ ಕೊರೊನಾ ವೈರಸ್ ಔಷಧಿ

ಕಳೆದ ಫೆಬ್ರವರಿಯಿಂದಲೂ ವುಹಾನ್ ನಗರ ನಿವಾಸಿಗಳಾದ ಚೆನ್ ಕ್ಯೂಶಿ, ಫಾಂಗ್ ಬಿಂಗ್, ಹಾಗೂ ಲೀ ಜೆಹು ನಾಪತ್ತೆಯಾಗಿದ್ದಾರೆ. ಹೀಗಿದ್ದರೂ ಚೀನಾ ಸರ್ಕಾರದ ಅಧಿಕಾರಿಗಳು ಸಾರ್ವಜನಿಕವಾಗಿ ಎಲ್ಲಿಯೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.

ಕೊರೊನಾ ಮತ್ತು ವುಹಾನ್ ಸ್ಥಿತಿಯ ಬಗ್ಗೆ ವಿಡಿಯೋ

ಕೊರೊನಾ ಮತ್ತು ವುಹಾನ್ ಸ್ಥಿತಿಯ ಬಗ್ಗೆ ವಿಡಿಯೋ

ಚೆನ್ ಕ್ಯೂಶಿ, ಪ್ಯಾಂಗ್ ಬಿಂಗ್, ಹಾಗೂ ಲೀ ಜೆಹು ಚೀನಾದ ಪತ್ರಕರ್ತರಾಗಿದ್ದು ವುಹಾನ್ ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೇಗೆ ಹರಡುತ್ತಿದೆ. ಇದರ ಹಿಂದಿನ ರಹಸ್ಯ ಏನು ಎಂಬುದರ ಬಗ್ಗೆ ವಿಡಿಯೋ ಮೂಲಕ ಯೂಟ್ಯೂಬ್ ಮತ್ತು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಇದನ್ನು ಅರಿತ ಸರ್ಕಾರವೇ ಸ್ವತಃ ಆ ವಿಡಿಯೋಗಳನ್ನು ಡಿಲೀಟ್ ಮಾಡಿಸಿತ್ತು. ಅಲ್ಲದೇ ಎರಡು ತಾಣಗಳನ್ನು ಚೀನಾದಲ್ಲಿ ನಿರ್ಬಂಧಿಸಲಾಯಿತು.

ವುಹಾನ್ ನಲ್ಲಿ ವರದಿಗೆ ತೆರಳಿದ್ದ ಪತ್ರಕರ್ತ ನಾಪತ್ತೆ

ವುಹಾನ್ ನಲ್ಲಿ ವರದಿಗೆ ತೆರಳಿದ್ದ ಪತ್ರಕರ್ತ ನಾಪತ್ತೆ

ಚೀನಾದ ವುಹಾನ್ ನಗರ ಲಾಕ್ ಡೌನ್ ಆಗುವುದಕ್ಕಿಂತ ಮುನ್ನ ದಿನ ಅಂದರೆ ಫೆಬ್ರವರಿ.06ರಂದು 34 ವರ್ಷದ ಚೆನ್ ಕ್ಯೂಶಿ ಕೊರೊನಾ ವೈರಸ್ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿದ್ದರು. ವಾಸ್ತವ ಸ್ಥಿತಿಯನ್ನು ವಿಶ್ವದ ಮುಂದೆ ತೆರೆದಿಡಲು ಮುಂದಾದರು. ಕೊರೊನಾ ವೈರಸ್ ನಿಂದ ನಗರದಲ್ಲಿ ಸೃಷ್ಟಿಯಾಗಿರುವ ಭಯಾನಕ ಸನ್ನಿವೇಶಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ವರದಿ ಮಾಡಿದ್ದರು.

ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?

ಕಣ್ಮರೆಯಾದ ಪುತ್ರನಿಗೆ ತಾಯಿಯ ವಿಡಿಯೋ ಸಂದೇಶ

ಕಣ್ಮರೆಯಾದ ಪುತ್ರನಿಗೆ ತಾಯಿಯ ವಿಡಿಯೋ ಸಂದೇಶ

ವುಹಾನ್ ನಗರದ ಅಸಲಿ ಚಿತ್ರಣವನ್ನು ಜಗತ್ತಿನ ಎದುರು ತೆರೆದಿಡುತ್ತೀನಿ ಎಂದು ಹೊರಟ ಚೆನ್ ಕ್ಯೂಶಿ ಕಣ್ಮರೆ ಆಗಿರುವ ಬಗ್ಗೆ ಆತನ ಗೆಳೆಯ ಮಾಡಿದ ಟ್ವೀಟ್ ನಿಂದ ತಿಳಿದು ಬಂದಿತು. ಚೆನ್ ಕ್ಯೂಶಿ ಟ್ವಿಟರ್ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಗೆಳಯನೇ ಈ ಕುರಿತು ಟ್ವೀಟ್ ಮಾಡಿದ್ದನು. ಅಲ್ಲದೇ ಚೆನ್ ಕ್ಯೂಶಿ ತಾಯಿ ಕೂಡಾ ತನ್ನ ಮಗ ಸುರಕ್ಷಿತವಾಗಿ ಹಿಂತಿರುಗಲಿ ಎಂದು ವಿಡಿಯೋ ಸಂದೇಶವನ್ನು ನೀಡಿದ್ದರು.

ಚೆನ್ ಕ್ಯೂಶಿ ಕುರಿತು ಚೀನಾ ಸರ್ಕಾರಕ್ಕೆ ಪ್ರಶ್ನೆ

ಚೆನ್ ಕ್ಯೂಶಿ ಕುರಿತು ಚೀನಾ ಸರ್ಕಾರಕ್ಕೆ ಪ್ರಶ್ನೆ

ವುಹಾನ್ ನಗರಕ್ಕೆ ವರದಿ ಮಾಡುವುದಕ್ಕಾಗಿ ತೆರಳಿದ ಚೆನ್ ಕ್ಯೂಶಿ ಕಳೆದ 68 ದಿನಗಳಿಂದ ಕಾಣುತ್ತಿಲ್ಲ. ಚೆನ್ ಕ್ಯೂಶಿ ಎಲ್ಲಿದ್ದಾನೆ ಎಂದು ನಾವು ಯಾರನ್ನು ಕೇಳಬೇಕು. ಆತನ ಜೊತೆಗೆ ಮತ್ತೊಮ್ಮೆ ಮಾತನಾಡುವುದಾದರೂ ಯಾವಾಗ, ಅದು ಸಾಧ್ಯವಿದೆ ತಾನೇ ಎಂದು ಚೀನಾ ಸರ್ಕಾರವನ್ನು ಚೆನ್ ಕ್ಯೂಶಿ ಸ್ನೇಹಿತರೊಬ್ಬರು ಪ್ರಶ್ನೆ ಮಾಡಿದ್ದಾರೆ.

ಕೊರೊನಾ ಭೀತಿ ನಡುವೆ ಮತ್ತೊಂದು ನಡುಕ ಹುಟ್ಟಿಸಿದ ಉತ್ತರ ಕೊರಿಯಾ!ಕೊರೊನಾ ಭೀತಿ ನಡುವೆ ಮತ್ತೊಂದು ನಡುಕ ಹುಟ್ಟಿಸಿದ ಉತ್ತರ ಕೊರಿಯಾ!

ಕೊರೊನಾ ಕುರಿತು ವಿಡಿಯೋ ಸರಣಿ ಬಿಡುಗಡೆ

ಕೊರೊನಾ ಕುರಿತು ವಿಡಿಯೋ ಸರಣಿ ಬಿಡುಗಡೆ

ಚೀನಾ ವುಹಾನ್ ನಗರದ ನಿವಾಸಿ ಫಾಂಗ್ ಬಿಂಗ್ ಕೊರೊನಾ ವೈರಸ್ ಕುರಿತು ಯುಟ್ಯೂನ್ ನಲ್ಲಿ ವಿಡಿಯೋ ಸರಣಿಯನ್ನು ಅಪ್ ಲೋಡ್ ಮಾಡುತ್ತಿದ್ದರು. ಈ ವ್ಯಕ್ತಿ ಕೂಡಾ ಕಳೆದ ಫೆಬ್ರವರಿ.09ರಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗುವ ಮೊದಲು ಪೊಲೀಸರು ಇವರನ್ನು ಬಂಧಿಸಿದ್ದರು ಎಂದು ಆರೋಪಿಸಲಾಗುತ್ತಿದೆ. ವೈದ್ಯಕೀಯ ತಪಾಸಣೆಗೆ ಆಗಮಿಸಿದ ವೈದ್ಯರ ತಂಡವು ಇವರ ಮನೆ ಬಾಗಿಲನ್ನು ಬಡೆದ ವಿಡಿಯೋ ಫಾಂಗ್ ಬಿಂಗ್ ಅಪ್ ಲೋಡ್ ಮಾಡಿರುವ ಕೊನೆಯ ವಿಡಿಯೋ ಆಗಿದೆ.

ಚೀನಾದ ಪ್ರಸಿದ್ಧ ಯುವ ಪತ್ರಕರ್ತ ಲೀ ಜೆಹು ನಾಪತ್ತೆ

ಚೀನಾದ ಪ್ರಸಿದ್ಧ ಯುವ ಪತ್ರಕರ್ತ ಲೀ ಜೆಹು ನಾಪತ್ತೆ

ಚೀನಾದ ಪ್ರಸಿದ್ಧ ಯುವ ಪತ್ರಕರ್ತರಲ್ಲಿ ಒಬ್ಬರಾದ 25 ವರ್ಷದ ಲೀ ಜೆಹು ಕೂಡಾ ಫೆಬ್ರವರಿ.26ರಿಂದ ಇಲ್ಲಿಯವರೆಗೂ ನಾಪತ್ತೆಯಾಗಿದ್ದಾರೆ. ಚೀನಾದಲ್ಲಿ ಇರುವ ಸಿಸಿಟಿವಿ ಸುದ್ದಿ ವಾಹಿನಿಯ ಪತ್ರಕರ್ತರಾಗಿದ್ದ ಲೀ ಜೆಹು, ವುಹಾನ್ ನಗರದಲ್ಲಿ ಸ್ವತಂತ್ರ್ಯ ವರದಿ ಮಾಡುವುದಕ್ಕಾಗಿ ತೆರಳಿದ್ದರು. ನಾಪತ್ತೆಯಾಗುವ ಮೊದಲು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಹೇಗೆಲ್ಲ ನಡೆಸಿಕೊಳ್ಳಲಾಗುತ್ತದೆ. ಮೃತರ ಅಂತ್ಯ ಸಂಸ್ಕಾರದ ಪ್ರಕ್ರಿಯೆಗಳು ಹೇಗೆ ನಡೆಸುತ್ತಿವೆ ಎಂಬುದರ ಬಗ್ಗೆ ವರದಿ ಮಾಡಿದ್ದರು.

ಭಾರತದಲ್ಲಿ 3 ದಿನಗಳಲ್ಲಿ ಕೊರೊನಾ ವೈರಸ್‌ನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಳಭಾರತದಲ್ಲಿ 3 ದಿನಗಳಲ್ಲಿ ಕೊರೊನಾ ವೈರಸ್‌ನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಳ

ಚೀನಾ ಪೊಲೀಸರ ವಕ್ರದೃಷ್ಟಿಗೆ ಬಿದ್ದರಾ ಪತ್ರಕರ್ತ ಲೀ ಜೆಹು?

ಚೀನಾ ಪೊಲೀಸರ ವಕ್ರದೃಷ್ಟಿಗೆ ಬಿದ್ದರಾ ಪತ್ರಕರ್ತ ಲೀ ಜೆಹು?

ವುಹಾನ್ ನಗರದಲ್ಲಿನ ಪರಿಸ್ಥಿತಿ ಬಗ್ಗೆ ಸಾಲು ಸಾಲು ವರದಿಗಳನ್ನು ಮಾಡಿದ ಪತ್ರಕರ್ತ ಲೀ ಜೆಹು ಸಾಂಕ್ರಾಮಿಕರ ರೋಗಶಾಸ್ತ್ರಜ್ಞರ ಇನ್ಸ್ ಟಿಟ್ಯೂಟ್ ಗೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರಿಂದ ಚೀನಾ ಗುಪ್ತಚರ ಇಲಾಖೆ ಪೊಲೀಸರ ಕೆಂಗಣ್ಣಿಗೆ ಲೀ ಜೆಹು ಗುರಿಯಾದರಾ ಎಂಬ ಶಂಕೆ ವ್ಯಕ್ತವಾಗಿದೆ.

ನಾಪತ್ತೆಯಾದ ಪತ್ರಕರ್ತರ ಪತ್ತೆಗೆ ಅಮೆರಿಕಾ ವಾದ

ನಾಪತ್ತೆಯಾದ ಪತ್ರಕರ್ತರ ಪತ್ತೆಗೆ ಅಮೆರಿಕಾ ವಾದ

ಚೀನಾದಲ್ಲಿ ನಾಪತ್ತೆಯಾದ ಮೂವರು ಪತ್ರಕರ್ತರ ಕುರಿತು ತನಿಖೆ ನಡೆಸುವಂತೆ ಅಮೆರಿಕಾ ವಕ್ತಾರರು ಆಗ್ರಹಿಸಿದ್ದರು. ಚೀನಾವನ್ನು ಪ್ರಶ್ನೆ ಮಾಡುವಂತೆ ಮಾರ್ಚ್.31ರಂದು ರಿಪಬ್ಲಿಕನ್ ಪ್ರತಿನಿಧಿ ಜಿಮ್ ಬ್ಯಾಂಕ್ ಪತ್ರ ಬರೆದಿದ್ದರು. ಚೆನ್ ಕ್ಯೂಶಿ, ಫಾಂಗ್ ಬಿಂಗ್, ಹಾಗೂ ಲೀ ಜೆಹು ಕೊರೊನಾ ವೈರಸ್ ಕುರಿತು ವುಹಾನ್ ನಲ್ಲಿ ವರದಿ ಮಾಡುವುದಕ್ಕಾಗಿ ತೆರಳಿದ್ದವರು, ದಿಢೀರನೇ ಕಣ್ಮರೆಯಾಗಿದ್ದಾರೆ. ಇವರನ್ನು ಸರ್ಕಾರವೇ ದಿಗ್ಬಂಧನದಲ್ಲಿ ಇರಿಸಿದೆಯೇ ಅಥವಾ ಎಲ್ಲಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಚೀನಾಗೆ ಅಮೆರಿಕಾ ತಿಳಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಚೀನಾ ಸರ್ಕಾರಕ್ಕೆ ಪ್ರಶ್ನಿಸಿದ ಬಹುತೇಕ ಜನರು ಕಣ್ಮರೆ

ಚೀನಾ ಸರ್ಕಾರಕ್ಕೆ ಪ್ರಶ್ನಿಸಿದ ಬಹುತೇಕ ಜನರು ಕಣ್ಮರೆ

ಚೆನ್ ಕ್ಯೂಶಿ, ಫಾಂಗ್ ಬಿಂಗ್, ಹಾಗೂ ಲೀ ಜೆಹು ಅಷ್ಟೇ ಅಲ್ಲ. ಚೀನಾದಲ್ಲಿ ಇದುವರೆಗೂ ಸರ್ಕಾರವನ್ನು ಪ್ರಶ್ನೆ ಮಾಡಿದ ಸಾಕಷ್ಟು ಮಂದಿ ಇದೇ ರೀತಿ ನಾಪತ್ತೆಯಾಗಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಪ್ರಶ್ನಿಸಿದ ಕಮ್ಯುನಿಷ್ಟ್ ಪಕ್ಷದ ಪ್ರಾಮಾಣಿತ ಸದಸ್ಯ ರೆನ್ ಝಿಂಗಿಯಂಗ್ ಕಣ್ಮರೆಯಾಗಿದ್ದು, ಕಾನೂನು ನಿಯಮಗಳನ್ನು ಉಲ್ಲಂಸಿದ ಹಿನ್ನೆಲೆ ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ ಅಧ್ಯಕ್ಷರನ್ನು ಪ್ರಶ್ನಿಸಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಂಸೆ

ಚೀನಾ ಅಧ್ಯಕ್ಷರನ್ನು ಪ್ರಶ್ನಿಸಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಂಸೆ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕೊರೊನಾ ವೈರಸ್ ನಿಯಂತ್ರಿಸುವಷ್ಟು ಬುದ್ಧಿವಂತ ನಾಯಕರಲ್ಲ. ಕೂಡಲೇ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ವಾದಿಸಿದ ಮಾಜಿ ಕಾನೂನು ಪ್ರಾಧ್ಯಾಪಕ 47 ವರ್ಷದ ಕ್ಸು ಜಿಯಾಂಗ್ ರನ್ನು ಫೆಬ್ರವರಿ.15ರಂದು ಪೊಲೀಸರು ವಶಕ್ಕೆ ಪಡೆದರು. ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಬಂಧಿಸಿ ಹಿಂಸೆ ನೀಡಲಾಗುತ್ತಿದ್ದು, ಚಿಕಿತ್ಸೆಯನ್ನೂ ನೀಡುತ್ತಿಲ್ಲ ಎಂದು ತಜ್ಞರು ಆರೋಪಿಸುತ್ತಿದ್ದಾರೆ.

ಚೀನಾದಲ್ಲಿ ಕೊರೊನಾ ಕುರಿತು ಎಚ್ಚರಿಕೆ ನೀಡಿದ್ದ ವೈದ್ಯೆ ಅರೆಸ್ಟ್

ಚೀನಾದಲ್ಲಿ ಕೊರೊನಾ ಕುರಿತು ಎಚ್ಚರಿಕೆ ನೀಡಿದ್ದ ವೈದ್ಯೆ ಅರೆಸ್ಟ್

ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಅಪಾಯಕಾರಿ ಸೋಂಕು ಎಂಬ ಎಚ್ಚರಿಕೆಯನ್ನು ನೀಡಿದ್ದ ಐಫೆನ್ ರನ್ನು ಬಂಧಿಸಲಾಗಿತ್ತು. ಸೋಮವಾರವಷ್ಟೇ ಈ ವೈದ್ಯೆ ಸುರಕ್ಷಿತವಾಗಿದ್ದಾರೆ ಎಂದು ಇಆರ್ ಡಾಕ್ಟರ್ ಅವರು ಪುಟ್ಟ ವಿಡಿಯೋ ಮೂಲಕ ತಿಳಿಸಿದ್ದರು.

ಚೀನಾ ವಿರುದ್ಧ ಅಮೆರಿಕಾ ಅಧ್ಯಕ್ಷರ ಪರೋಕ್ಷ ವಾಗ್ದಾಳಿ

ಚೀನಾ ವಿರುದ್ಧ ಅಮೆರಿಕಾ ಅಧ್ಯಕ್ಷರ ಪರೋಕ್ಷ ವಾಗ್ದಾಳಿ

ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ ನಿರ್ವಹಣೆಯಲ್ಲಿ WHO ಸೋತಿದ್ದು, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಚೀನಾದ ವುಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಕುರಿತು ಸ್ವತಃ WHO ಸುಳ್ಳು ಹೇಳಿತು. ವಿಶ್ವದ ಎದುರಿಗೆ ಜನವರಿ.14, 2020ರಂದು ಕೊರೊನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಾದಿಸಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ.

ಕೊರೊನಾ ಸೋಂಕು ಪತ್ತೆ ಬಗ್ಗೆ WHO ಮಾಹಿತಿ

ಕೊರೊನಾ ಸೋಂಕು ಪತ್ತೆ ಬಗ್ಗೆ WHO ಮಾಹಿತಿ

ಡಿಸೆಂಬರ್.31: ಚೀನಾದಲ್ಲಿ ನಿಮೋನಿಯಾ ಲಕ್ಷಣಗಳನ್ನು ಹೊಂದಿರುವ ಸಾಲು ಸಾಲು ಪ್ರಕರಣಗಳು ಕಂಡು ಬಂದಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು.

ಜನವರಿ.04: ಚೀನಾದಲ್ಲಿ ನಿಮೋನಿಯಾ ರೀತಿಯ ಸೋಂಕಿತ ಪ್ರಕರಣಗಳು ಸಾಲು ಸಾಲಾಗಿ ಕಂಡು ಬಂದರೂ ಸಾವಿನ ಬಗ್ಗೆ ಇದುವರೆಗೂ ವರದಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಟ್ವೀಟ್ ಮಾಡಿತ್ತು.

ಜನರಿಂದ ಜನರಿಗೆ ಕೊರೊನಾ ವೈರಸ್ ಹರಡುವುದಿಲ್ಲ

ಜನರಿಂದ ಜನರಿಗೆ ಕೊರೊನಾ ವೈರಸ್ ಹರಡುವುದಿಲ್ಲ

ಜನವರಿ.05: ನಿಮೋನಿಯಾಗಿಂತ ವಿಭಿನ್ನವಾಗಿರುವ ಸೋಂಕು 44 ಜನರಲ್ಲಿ ಪತ್ತೆಯಾಗಿದ್ದು, 11 ಮಂದಿ ಸ್ಥಿತಿ ಗಂಭೀರವಾಗಿದೆ. ಪ್ರಾಥಮಿಕ ಹಂತದಲ್ಲಿ ಸೋಂಕಿತರಲ್ಲಿ ಜ್ವರದ ಲಕ್ಷಣ ಕಂಡು ಬರುತ್ತದೆ. ಹಲವರಲ್ಲಿ ಉಸಿರಾಟ ತೊಂದರೆ ಹೆಚ್ಚಾಗಿ ಕಂಡು ಬಂದಿದೆ ಎಂದು WHO ಮೊದಲ ಮಾರ್ಗಸೂಚಿಯಲ್ಲಿ ತಿಳಿಸಿತು.

ಪ್ರಾಥಮಿಕ ಹಂತದಲ್ಲಿ ಈ ಅಪರಿಚಿತ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡಿರುವ ಬಗ್ಗೆ ಯಾವುದೇ ಉದಾಹರಣೆಗಳಿಲ್ಲ. ವೈದ್ಯಕೀಯ ಸಿಬ್ಬಂದಿಯಲ್ಲಿ ಯಾವುದೇ ರೀತಿಯ ಸೋಂಕಿತ ಲಕ್ಷಣಗಳು ಕಂಡು ಬಂದಿಲ್ಲ ಎಂದು WHO ತಿಳಿಸಿತ್ತು.

ಸೋಂಕಿಗೆ ನೊವೆಲ್ ಕೊರೊನಾ ವೈರಸ್ ಎಂಬ ಹೆಸರು

ಸೋಂಕಿಗೆ ನೊವೆಲ್ ಕೊರೊನಾ ವೈರಸ್ ಎಂಬ ಹೆಸರು

ಜನವರಿ.07: ಆರಂಭದಲ್ಲಿ ನಿಮೋನಿಯಾ ಎಂದುಕೊಂಡಿದ್ದ ವಿಭಿನ್ನ ಲಕ್ಷಣಗಳಿರುವ ಸೋಂಕನ್ನು ನೊವೆಲ್ ಕೊರೊನಾ ವೈರಸ್ ಎಂದು ಚೀನಾ ಸರ್ಕಾರವು ಗುರುತಿಸಿತು.

ಜನವರಿ.09: ಚೀನಾದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾರಕ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪ್ರದೇಶಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಯಿತು.

ಜನವರಿ.13: ಥೈಲ್ಯಾಂಡ್ ನಲ್ಲಿ ಕಾರ್ಯಕಾರಿ ಅಧಿಕಾರಿಗಳ ಜೊತೆಗೆ ತುರ್ತು ಸಮಿತಿ ಸಭೆ ನಡೆಸಲಾಯಿತು.

ಮನುಷ್ಯರಿಗೆ ಸೋಂಕು ಹರಡಲ್ಲ ಎಂದು ಪುನರ್ ಉಚ್ಛಾರ

ಮನುಷ್ಯರಿಗೆ ಸೋಂಕು ಹರಡಲ್ಲ ಎಂದು ಪುನರ್ ಉಚ್ಛಾರ

ಜನವರಿ.14: ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು WHO ಟ್ವೀಟ್ ಮಾಡಿತ್ತು. ನಂತರ ಒಂದು ಕುಟುಂಬದಲ್ಲಿ ಈ ಸೋಂಕು ಹರಡುವ ಸಾಧ್ಯತೆಗಳಿವೆ ಎಂದು ಸ್ಪಷ್ಟನೆ ನೀಡಿತು.

ಕೊರೊನಾ ಕೇಂದ್ರಸ್ಥಾನಕ್ಕೆ WHO ತಂಡ ಭೇಟಿ

ಕೊರೊನಾ ಕೇಂದ್ರಸ್ಥಾನಕ್ಕೆ WHO ತಂಡ ಭೇಟಿ

ಜನವರಿ.20-21: ಕೊರೊನಾ ವೈರಸ್ ಕೇಂದ್ರ ಸ್ಥಾನದ ಚೀನಾದ ವುಹಾನ್ ನಗರಕ್ಕೆ WHO ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜನವರಿ.21: ಅಮೆರಿಕಾದ ವಾಶಿಂಗ್ ಟನ್ ನಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಪ್ರಕರಣ ಪತ್ತೆಯಾಗಿತ್ತು. ಸೋಂಕಿತ ವ್ಯಕ್ತಿ ಒಂದು ವಾರದ ಹಿಂದೆಯಷ್ಟೇ ವುಹಾನ್ ನಗರಕ್ಕೆ ಭೇಟಿ ನೀಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿತು.

ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುವುದು ಪಕ್ಕಾ

ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುವುದು ಪಕ್ಕಾ

ಜನವರಿ.22: ಕೊರೊನಾ ವೈರಸ್ ಎಂಬ ಮಹಾಮಾರಿ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು WHO ತಂಡವು ತಿಳಿಸಿತು. ಆದರೆ ಸೋಂಕಿನ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆಯಬೇಕಿದೆ. 16 ಸೋಂಕಿತರನ್ನು ತಪಾಸಣೆಗೆ ನಡೆಸಿದಾಗ ಈ ಅಂಶವು ಬೆಳಕಿಗೆ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವುದು. ಸಾಮೂಹಿಕ ಸಭೆ ಸಮಾರಂಭಗಳು ನಡೆಯದಂತೆ ಎಚ್ಚರಿಕೆ ವಹಿಸುವುದು, ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಪದೇ ಪದೆ ಕೈಗಳನ್ನು ತೊಳೆದುಕೊಳ್ಳುವಂತೆ ಸೂಚನೆ ನೀಡಲಾಯಿತು.

ವಿಶ್ವ ತುರ್ತು ಪರಿಸ್ಥಿತಿ ಘೋಷಿಸಲು WHO ಹಿಂದುಮುಂದು

ವಿಶ್ವ ತುರ್ತು ಪರಿಸ್ಥಿತಿ ಘೋಷಿಸಲು WHO ಹಿಂದುಮುಂದು

ಜನವರಿ.23: WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ನೇತೃತ್ವದ ತುರ್ತು ಸಮಿತಿ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಗೆ ನಿರಾಕರಣೆ ಮಾಡಿತು. ಅದರ ಬದಲು ವುಹಾನ್ ನಗರ ಲಾಕ್ ಡೌನ್ ಮಾಡಲು ಕಟ್ಟಪ್ಪಣೆ ಹೊರಡಿಸಲಾಯಿತು. ಆದಷ್ಟು ಬೇಗ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬಹುದು ಅದಕ್ಕಾಗಿ ಚೀನಾ ಸರ್ಕಾರದ ಸಹಕಾರ ಬೇಕು ಎಂದು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ತಿಳಿಸಿದ್ದರು.

ಕೊರೊನಾ ಸೋಂಕಿತರ ಹತ್ತಿರದವರಿಗೆ ಮಾತ್ರ ಅಪಾಯ

ಕೊರೊನಾ ಸೋಂಕಿತರ ಹತ್ತಿರದವರಿಗೆ ಮಾತ್ರ ಅಪಾಯ

ಮನುಷ್ಯರಿಂದ ಮನುಷ್ಯರಿಗೆ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದಕ್ಕೆ ಅದಾಗಿಯೂ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ನಂಬುವುದಕ್ಕೆ ತಯಾರ್ ಇರಲಿಲ್ಲ. ಬದಲಿಗೆ ಸೋಂಕಿತರ ಸಂಬಂಧಿಕರು ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರಲ್ಲಿ ಮಾತ್ರ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದೆ. ಬೇರೆಯವರಿಗೆ ಸೋಂಕು ಹರಡಿವ ಬಗ್ಗೆ ಯಾವುದೇ ಖಚಿತ ಉದಾಹರಣೆಗಳು ಸಿಕ್ಕಿಲ್ಲ ಎಂದು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ವಾದಿಸಿದ್ದರು. ವಿಶ್ವದಾದ್ಯಂತ ಅಂದು ಕೊರೊನಾ ವೈರಸ್ ನಿಂದ 17 ಮಂದಿ ಪ್ರಾಣ ಬಿಟ್ಟಿದ್ದು, 584 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಚೀನಾ ಹೊರತುಪಡಿಸಿ ವಿಯೆಟ್ನಾ, ದಕ್ಷಿಣ ಕೊರಿಯಾ, ಜಪಾನ್, ಥೈಲ್ಯಾಂಡ್ ಮತ್ತು ಅಮೆರಿಕಾದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿತ್ತು.

ಕೊರೊನಾ ಹರಡುವಿಕೆ ಬಗ್ಗೆ ಕ್ಸಿ ಜಿನ್ ಪಿಂಗ್ ಜೊತೆ ಚರ್ಚೆ

ಕೊರೊನಾ ಹರಡುವಿಕೆ ಬಗ್ಗೆ ಕ್ಸಿ ಜಿನ್ ಪಿಂಗ್ ಜೊತೆ ಚರ್ಚೆ

ಜನವರಿ.28: ಕೊರೊನಾ ವೈರಸ್ ಹರಡುವಿಕೆ ಹಾಗೂ ಪರಿಸ್ಥಿತಿ ಗಂಭೀರತೆ ಬಗ್ಗೆ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಸೇರಿದಂತೆ ಅಧಿಕಾರಿಗಳ ತಂಡವು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆಗೆ ಚರ್ಚೆ ನಡೆಸಿದರು.

ಜನವರಿ.29: ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ವುಹಾನ್ ನಗರವನ್ನು ಲಾಕ್ ಡೌನ್ ಮಾಡುವ ಮೂಲಕ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಿದ ಚೀನಾ ಸರ್ಕಾರವನ್ನು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಹಾಡಿ ಹೊಗಳಿದ್ದರು. ಚೀನಾದಿಂದ ಹೊರದೇಶಗಳಲ್ಲಿ ಸೋಂಕಿತರ ಮೇಲೆ ಲಕ್ಷ್ಯ ವಹಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಜನವರಿ.30: ಜರ್ಮನಿ, ಜಪಾನ್, ವಿಯೆಟ್ನಾ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾ ವೈರಸ್ ಜನರಿಂದ ಜನರಿಗೆ ಹರಡಿರುವುದು ಪತ್ತೆಯಾದ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆಯು ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.

ಜನವರಿ.31: ಚೀನಾದಿಂದ ಆಗಮಿಸುವ ಪ್ರಯಾಣಿಕರು ಅಮೆರಿಕಾ ಪ್ರವೇಶಿಸುವಂತಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.

ಡ್ರ್ಯಾಗನ್ ರಾಷ್ಟ್ರದಲ್ಲಿ ಸಾವಿನ ಸರಣಿ ಶುರು

ಡ್ರ್ಯಾಗನ್ ರಾಷ್ಟ್ರದಲ್ಲಿ ಸಾವಿನ ಸರಣಿ ಶುರು

ಫೆಬ್ರವರಿ.03: ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಮಾತನಾಡಿ ಚೀನಾದಲ್ಲಿ ಕೊರೊನಾಗೆ ಈವರೆಗೂ 361 ಮಂದಿ ಪ್ರಾಣ ಬಿಟ್ಟಿದ್ದಾರೆ. 17,238 ಜನರಿಗೆ ಸೋಂಕು ತಗಲಿದೆ ಎಂದು ಸ್ಪಷ್ಟನೆ ನೀಡಿದರು. ಚೀನಾ ಹೊರತಾದ ರಾಷ್ಟ್ರಗಳಲ್ಲಿ ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿ ಆರೋಗ್ಯ ರಂಗದಲ್ಲಿ ಹಿಂದುಳಿದ ರಾಷ್ಟ್ರಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸಾರಿಗೆ ವ್ಯವಸ್ಥೆ ಸಡಿಲಿಸಲಾಯಿತು.
ಫೆಬ್ರವರಿ.07: ಕೊರೊನಾ ವೈರಸ್ ಸೋಂಕು ತಗಲಿದ ಚೀನಾದ ಮೊದಲ ವೈದ್ಯ ಡಾ.ಲೀ ವೆನ್ ಲಿಯಾಂಗ್ ಪ್ರಾಣ ಬಿಟ್ಟರು.

ಫೆಬ್ರವರಿ.10: ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಚೀನಾಗೆ WHO ತಂಡವು ಭೇಟಿ ನೀಡಿತು.

ಕೊವಿಡ್19 ಎಂಬ ಹೆಸರನ್ನು ಇರಿಸಿದ ಚೀನಾ

ಕೊವಿಡ್19 ಎಂಬ ಹೆಸರನ್ನು ಇರಿಸಿದ ಚೀನಾ

ಫೆಬ್ರವರಿ.11: ಕೊರೊನಾ ವೈರಸ್ ಸೋಂಕಿಗೆ WHO ಹೊಸ ಹೆಸರಿನಿಂದ ಗುರುತಿಸಿತು. Co-ಕೊರೊನಾ, Vi- ವೈರಸ್, D- ರೋಗ, 2019ರಲ್ಲಿ ಮೊದಲು ಕಾಣಿಸಿಕೊಂಡಿದ್ದಕ್ಕೆ Covid-19 ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೆಸರಿಸಿತು.

ಫೆಬ್ರವರಿ.12: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗಿದ್ದರೂ ಚೀನಾದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ ಎಂದು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ತಿಳಿಸಿದರು.

ಮೊದಲು ಚೀನಾ ಸಿದ್ಧಪಡಿಸಿದ್ದ ಸೋಂಕಿತರ ಕುರಿತ ವರದಿ

ಮೊದಲು ಚೀನಾ ಸಿದ್ಧಪಡಿಸಿದ್ದ ಸೋಂಕಿತರ ಕುರಿತ ವರದಿ

ಫೆಬ್ರವರಿ.16-24: ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಅಧಿಕ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಅಂಕಿ-ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಿ ನೀಡುವಂತೆ WHO ತಜ್ಞರ ತಂಡವು ಚೀನಾದ ಮನವೊಲಿಸಿತು. ಚೀನಾ ಸರ್ಕಾರ ನೀಡಿದ ವರದಿ ಪ್ರಕಾರ 44,000 ಕೊರೊನಾ ವೈರಸ್ ಸೋಂಕಿತರಿದ್ದು, ಶೇ.80ರಷ್ಟು ಸೋಂಕಿತ ಪ್ರಕರಣಗಳು ಪ್ರಾಥಮಿಕ ಹಂತದಲ್ಲಿವೆ. ಶೇ.14ರಷ್ಟು ಜನರಲ್ಲಿ ಕೆಲವು ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಶೇ.02ರಷ್ಟು ಸೋಂಕಿತರ ಅಪಾಯಕಾರಿ ಹಂತದಲ್ಲಿದ್ದಾರೆ. ಇನ್ನು, ಸೋಂಕು ಯುವಕರಿಂದ ಹೆಚ್ಚಾಗಿ ಹರಡುತ್ತಿದ್ದು, ಇಳಿವಯಸ್ಸಿನವರು ಹೆಚ್ಚಾಗಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಫೆಬ್ರವರಿ.26: ಅಮೆರಿಕಾದಲ್ಲಿ ಕೊರೊನಾ ವೈರಸ್ ನಿಯಂತ್ರಣ ತಂಡದ ಜವಾಬ್ದಾರಿಯನ್ನು ಮೈಕ್ ಪೆನ್ಸ್ ನೋಡಿಕೊಳ್ಳುತ್ತಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.

ಕೊರೊನಾ ಸೋಂಕಿತರಲ್ಲಿ ಜ್ವರ ಮತ್ತು ಕೆಮ್ಮಿನ ಲಕ್ಷಣ

ಕೊರೊನಾ ಸೋಂಕಿತರಲ್ಲಿ ಜ್ವರ ಮತ್ತು ಕೆಮ್ಮಿನ ಲಕ್ಷಣ

ಫೆಬ್ರವರಿ.28: ಕೊರೊನಾ ವೈರಸ್ ಸೋಂಕು ಬಾವಲಿಗಳಿಂದ ಹುಟ್ಟಿಕೊಂಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿತ್ತು. ಸೋಂಕಿತರ ಜೊತೆಗಿನ ಸಂಪರ್ಕದಿಂದ ಕೊರೊನಾ ವೈರಸ್ ಹರಡುತ್ತಿದ್ದು, ಸೋಂಕಿತರಲ್ಲಿ ಜ್ವರ, ಒಣಕೆಮ್ಮು ಹಾಗೂ ಉಸಿರಾಟ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು WHO ತಿಳಿಸಿತು.

ಇಟಲಿಗೆ ಇಟಲಿಯೇ ಸಂಪೂರ್ಣ ಲಾಕ್ ಡೌನ್

ಇಟಲಿಗೆ ಇಟಲಿಯೇ ಸಂಪೂರ್ಣ ಲಾಕ್ ಡೌನ್

ಮಾರ್ಚ್.09: ಕೊರೊನಾ ವೈರಸ್ ಹಾವಳಿಗೆ ಸಾವಿರಾರು ನಲುಗಿದರು. ಇಟಲಿಯಲ್ಲಿ ಸಾವಿರ ಸಾವಿರ ಜನರಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಳ್ಳುತ್ತಿದ್ದಂತೆ ದೇಶದ ಚಿತ್ರಣವೇ ಬದಲಾಗಿ ಹೋಯಿತು. ಇಟಲಿಗೆ ಇಟಲಿಯನ್ನೇ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.

ಕೊವಿಡ್-19 ಒಂದು ಸಾಂಕ್ರಾಮಿಕ ಪಿಡುಗು ಎಂದು ಘೋಷಣೆ

ಕೊವಿಡ್-19 ಒಂದು ಸಾಂಕ್ರಾಮಿಕ ಪಿಡುಗು ಎಂದು ಘೋಷಣೆ

ಮಾರ್ಚ್.11: ಕೊರೊನಾ ವೈರಸ್ ಸೋಂಕನ್ನು ಸಾಂಕ್ರಾಮಿಕ ಪಿಡುಗು(Pandemic) ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿತು. ಅಲ್ಲಿಯವರೆಗೂ ಕೊರೊನಾ ವೈರಸ್ ನ್ನು ಒಂದು ಸಾಂಕ್ರಾಮಿಕ ರೋಗ(Epidemic) ಎಂದು ಭಾವಿಸಲಾಗಿತ್ತು. ಅಸಲಿಗೆ ಸಾಂಕ್ರಾಮಿಕ ರೋಗಕ್ಕೂ ಸಾಂಕ್ರಾಮಿಕ ಪಿಡುಗಿಗೂ ಸಾಕಷ್ಟು ವ್ಯತ್ಯಾಸಗಳಿವೆ.

ಸಾಂಕ್ರಾಮಿಕ ರೋಗ ಒಂದು ನಿರ್ದಿಷ್ಟ ಪ್ರದೇಶದೊಳಗೆ ನಿರ್ದಿಷ್ಟ ಅವಧಿಯಲ್ಲಿ 15000ಕ್ಕೂ ಕಡಿಮೆ ಜನರಿಗೆ ಹರಡಿದಲ್ಲಿ ಅದನ್ನು ಸಾಂಕ್ರಾಮಿಕ ರೋಗ ಎಂದು ಕರೆಯಲಾಗುತ್ತದೆ. ಆದರೆ ಸಾಂಕ್ರಾಮಿಕ ಪಿಡುಗು ಹಾಗಲ್ಲ. ಒಂದು ಪ್ರದೇಶವನ್ನು ದಾಟಿ ವಿಶ್ವವ್ಯಾಪಿ ಹರಡಿರುವ ನಿಯಂತ್ರಣಕ್ಕೆ ಬಾರದೇ ನಿರ್ದಿಷ್ಟ ಅವಧಿಯಲ್ಲಿ 15,000ಕ್ಕೂ ಅಧಿಕ ಜನರಿಗೆ ಅಂಟಿಕೊಂಡಿರುವ ರೋಗವನ್ನು ಸಾಂಕ್ರಾಮಿಕ ಪಿಡುಗು ಎಂದು ಕರೆಯಲಾಗುತ್ತದೆ.

ಚೀನಾಕ್ಕಿಂತ ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚು ಸೋಂಕು

ಚೀನಾಕ್ಕಿಂತ ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚು ಸೋಂಕು

ಮಾರ್ಚ್.13: ಚೀನಾಗಿಂತಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚಾಯಿತು. ಯುರೋಪ್ ರಾಷ್ಟ್ರಗಳು ಕೊರೊನಾ ವೈರಸ್ ಕೇಂದ್ರ ಸ್ಥಾನವಾಗುತ್ತಿವೆ ಎಂದು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ತಿಳಿಸಿದರು.

ಮಾರ್ಚ್.19: ಚೀನಾದಲ್ಲಿ ಕೊರೊನಾ ವೈರಸ್ ಹುಟ್ಟಿಕೊಂಡ ಬಳಿಕ ಇದೇ ಮೊದಲ ದಿನ ಒಂದೇ ಒಂದು ಸೋಂಕಿತ ಪ್ರಕರಣವೂ ವರದಿಯಾಗಲಿಲ್ಲ.

ಅತಿಹೆಚ್ಚು ವೃದ್ಧರನ್ನೇ ಕೊಲ್ಲುತ್ತಿರುವ ಕೊರೊನಾ ವೈರಸ್

ಅತಿಹೆಚ್ಚು ವೃದ್ಧರನ್ನೇ ಕೊಲ್ಲುತ್ತಿರುವ ಕೊರೊನಾ ವೈರಸ್

ಮಾರ್ಚ್.20: ಕೊರೊನಾ ವೈರಸ್ ಸೋಂಕಿತರು ಮತ್ತು ಸಾವಿನ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಯುವಕರಿಗಿಂತಲೂ ಮೃತಪಟ್ಟವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ ಎಂದು WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಎಚ್ಚರಿಕೆ ನೀಡಿದರು.

ಕೊರೊನಾ ವಿರುದ್ಧ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕಿನ್ ಬಳಕೆ

ಕೊರೊನಾ ವಿರುದ್ಧ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕಿನ್ ಬಳಕೆ

ಮಾರ್ಚ್.25: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಯಾವುದೇ ಔಷಧಿ ಅಥವಾ ಲಸಿಕೆಯನ್ನು ಕಂಡು ಹಿಡಿದಿಲ್ಲ. ಹೀಗಾಗಿ ಸೋಂಕಿತರ ಚಿಕಿತ್ಸೆಗೆ ಹೈಡ್ರೋಕ್ಸಿ ಕ್ಲೋರೊಕಿನ್ ಬಳಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.

ಏಪ್ರಿಲ್.03: ಸಾಂಕ್ರಾಮಿಕ ಪಿಡುಗಿನಿಂದ ನಿರುದ್ಯೋಗಿಗಳಾದ ಲಕ್ಷಾಂತರ ಜನರನ್ನು ಗುರುತಿಸಿ ಸಾಲ ಪರಿಹಾರ ನೀಡುವಂತೆ ಐಎಂಎಫ್ ಹಾಗೂ WHO ಮುಖ್ಯಸ್ಥ ಡಾ.ತೆಡ್ರೋಸ್ ಅಧನೊಮ್ ಗೆಬ್ರಿಸಸ್ ಗೆ ಮನವಿ ಸಲ್ಲಿಸಿದರು.

ಹೊಸ ಮಾರ್ಗಸೂಚಿ ಹೊರಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ಹೊಸ ಮಾರ್ಗಸೂಚಿ ಹೊರಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ಏಪ್ರಿಲ್.06: ಕೊರೊನಾ ವೈರಸ್ ನ್ನು ಪರಿಣಾಮಕಾರಿಯಾಗಿ ಎದುರಿಸಲು ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು WHO ಹೊರಡಿಸಿತು.

ಏಪ್ರಿಲ್.08: ಸಾಂಕ್ರಾಮಿಕ ಪಿಡುಗು ಹರಡುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣವನ್ನು ಮಾಡುವುದು ಒಳಿತಲ್ಲ ಎಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ WHOನ ಪಕ್ಷಪಾತ ನಿಲುವಿನ ವಿರುದ್ಧ ಕಿಡಿ ಕಾರಿದರು.

English summary
China Double Game Plan: Many Peoples Missing Who Report About Covid-19 In Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X