ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ ಭೂಕಂಪ, 36 ಸಾವು

|
Google Oneindia Kannada News

ರೋಮ್, ಆಗಸ್ಟ್ 24 : ಇಟಲಿಯ ಅಮಟ್ರೈಸ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪ್ರಬಲ ಭೂಕಂಪದಿಂದಾಗಿ 38 ಜನರು ಮೃತಪಟ್ಟಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಬುಧವಾರ ಮುಂಜಾನೆ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಹಲವಾರು ಕಟ್ಟಡಗಳು ಧರೆಗುರುಳಿದ್ದು, ಹಲವು ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.[ಮಯನ್ಮಾರಿನಲ್ಲಿ ಭಾರೀ ಭೂಕಂಪ, ನಡುಗಿದ ಪೂರ್ವ ಭಾರತ]

ಭೂ ಕಂಪದ ತೀವ್ರತೆಗೆ ನಗರದ ರಸ್ತೆಗಳು ಎರಡು ಭಾಗಗಳಾಗಿದ್ದು, ಅರ್ಧ ನಗರಕ್ಕೆ ಹಾನಿಯಾಗಿದೆ. ಮುಂಜಾನೆ 3.30ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ.[ಭೀಕರ ಭೂಕಂಪಕ್ಕೆ ತುತ್ತಾಗಲಿದೆಯೇ ಭಾರತ-ಬಾಂಗ್ಲಾ?]

earthquake

ಹಲವಾರು ಕಟ್ಟಡಗಳು ಧರೆಗುರುಳಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೂ ಹಾನಿಯಾಗಿದೆ. ಅವಶೇಷಗಳಡಿ ಹಲವಾರು ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

English summary
The central Italian town of Amatrice was badly damaged by a 6.2 magnitude earthquake that struck early on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X