ಗಾಜಾ ಮೇಲೆ ಹಿಂಸಾತ್ಮಕ ದಾಳಿ ಮುಂದುವರಿಸಿದ ಇಸ್ರೇಲ್ ಪಡೆಗಳು!

ಇಸ್ರೇಲ್ ಸೇನೆ ಇದೀಗ ಗಾಜಾ ಪಟ್ಟಿ ಮೇಲೆ ತನ್ನ ಭೀಕರ ದಾಳಿ ಮುಂದುವರಿಸಿದೆ. ಕಳೆದ ಕೆಲವು ದಿನಗಳಿಂದ ಗಾಜಾ ಪಟ್ಟಿ ಒಂದಷ್ಟು ಶಾಂತವಾಗುವ ಲಕ್ಷಣ ಗೋಚರಿಸಿತ್ತು. ಆದರೆ ಮತ್ತೆ ಮತ್ತೆ ಗಾಜಾ ಪಟ್ಟಿ ಪ್ರದೇಶದಲ್ಲಿ ಹಿಂಸೆ ಹೆಚ್ಚಾಗುತ್ತಿದ್ದು, ಭಯದ ವಾತಾವರಣ ಈಗ ಗೋಚರಿಸಿದೆ. ಹಾಗಾದ್ರೆ ಇಸ್ರೇಲ್ ಇದೀಗ ದಾಳಿ ಮಾಡಿರುವ ಒಟ್ಟು ಪ್ರದೇಶಗಳು ಎಷ್ಟು?

ಇಸ್ರೇಲ್ ಸೇನೆ ಗಾಜಾ ಪಟ್ಟಿ ಪ್ರದೇಶದ ಮೇಲೆ ದಾಳಿ ಆರಂಭ ಮಾಡಿ ಬರೋಬ್ಬರಿ 10 ತಿಂಗಳು ಕಂಪ್ಲೀಟ್ ಆಗುತ್ತಿದೆ. ಹೀಗಿರುವಾಗ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಇಡೀ ಜಗತ್ತೇ ಇಸ್ರೇಲ್ & ಹಮಾಸ್ ಯುದ್ಧ ನಿಲ್ಲಿಸಲು ಪ್ರಯತ್ನ ಮಾಡಿತ್ತು. ಆದರೂ ಈ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಿದ್ದಾಗ ಹತ್ತಾರು ಸಾವಿರ ಜನ ಇದೇ ಯುದ್ಧ ದಾಹಕ್ಕೆ ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ 60 ಸ್ಥಳಗಳನ್ನ ಗುರಿಯಾಗಿ ಇಟ್ಟುಕೊಂಡು ದಾಳಿ ಮಾಡಿದೆ ಇಸ್ರೇಲ್ ಸೇನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Israel Continues Attack On Gaza By Targeting 60 Places

39,090 ಜನರು ಯುದ್ಧಕ್ಕೆ ಬಲಿ

2023ರ ಅಕ್ಟೋಬರ್ 7 ರಂದು ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾಗಿತ್ತು. ಈ ರೀತಿ ಯುದ್ಧ ಶುರುವಾದ ನಂತರ ಗಾಜಾಪಟ್ಟಿ ನೋಡಲು ಥೇಟ್ ನರಕದ ರೀತಿ ಕಾಣುತ್ತಿದೆ. ಹೀಗಾಗಿ ಗಾಜಾ ಪರಿಸ್ಥಿತಿ ಕೈಮೀರಿ ಹೋಗಿದ್ದು, ಹತ್ತಾರು ಲಕ್ಷ ಜನರ ಪರಿಸ್ಥಿತಿ ಹೀನಾಯ ಹಂತಕ್ಕೆ ತಲುಪಿದೆ. ಕುಡಿಯಲು ನೀರು ಇಲ್ಲದೆ, ತಿನ್ನಲು ಅನ್ನ ಇಲ್ಲದೆ, ಮಲಗಲು ಕನಿಷ್ಠ ಒಂದು ಟೆಂಟ್ ಕೂಡ ಇಲ್ಲದೆ ನರಳಾಡುತ್ತಿದ್ದಾರೆ ಗಾಜಾ ಪಟ್ಟಿ ಪ್ರದೇಶದ ಜನರು. ಹೀಗಾಗಿ ಗಾಜಾ ಭಾಗದಲ್ಲಿ ಪರದಾಟ ಕೂಡ ಹೆಚ್ಚಾಗಿದೆ. ಇಂತಹ ಸಮಯದಲ್ಲೇ ಮತ್ತೊಮ್ಮೆ ಇಸ್ರೇಲ್ ಸೇನೆ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಅಮೆರಿಕ ಚುನಾವಣೆ ಮೇಲೆ ಪರಿಣಾಮ?

ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ಯುದ್ಧ ದೂರದ ದೊಡ್ಡಣ್ಣ ಅಮೆರಿಕ ನೆಲದ ಮೇಲೆ ಕೂಡ ಗಾಢ ಪರಿಣಾಮ ಬೀರುತ್ತಿದೆ. ಯಾಕಂದ್ರೆ ಅಮೆರಿಕದಲ್ಲಿ ಇನ್ನೇನು ಚುನಾವಣೆ ಆರಂಭ ಆಗಲಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮೊದಲು ಇಸ್ರೇಲ್ & ಹಮಾಸ್ ಯುದ್ಧ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಮತ್ತೊಂದು ಕಡೆ ವಿಶ್ವಸಂಸ್ಥೆ ಗಾಜಾ ನಗರದ ಜನರಿಗೆ ಕೊಡಲು ಕಳುಹಿಸಿದ್ದ ಪರಿಹಾರ ಸಾಮಗ್ರಿಗಳು ವಾಪಸ್ ಬರುತ್ತಿದ್ದು, ಈ ಕೃತ್ಯಕ್ಕೆ ಇಸ್ರೇಲ್ ಕಾರಣ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇಷ್ಟೆಲ್ಲದರ ನಡುವೆಯೇ ಜಗತ್ತು ತಣ್ಣಗೆ 3ನೇ ಮಹಾಯುದ್ಧಕ್ಕೆ ಸಜ್ಜಾದಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+