ಲೆಬನಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್ ಸೇನೆ, ಇರಾನ್ ಜೊತೆಗೆ ಹೊಸ ತಲೆನೋವು ಶುರು... Israel And Lebanon

ಮಧ್ಯಪ್ರಾಚ್ಯದ ಹಣೆಬರಹವೇ ಸರಿ ಇಲ್ಲ ಅಂತಾ ಕಾಣುತ್ತದೆ, ಏಕೆಂದರೆ ಇಡೀ ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಪತ್ತು ಹೊಂದಿದ್ದರೂ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲ. ಪದೇ ಪದೇ ಅಲ್ಲಿ ನಡೆಯುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಈಗಾಗಲೇ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ತಲೆನೋವು ಶುರುವಾಗಿದೆ. ಇರಾನ್ ಮತ್ತು ಅಮೆರಿಕ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯುವ ಸಾಧ್ಯತೆ ಕೂಡ ದಟ್ಟವಾಗಿದೆ. ಹೀಗಿದ್ದಾಗ ದಿಢೀರ್ ಲೆಬನಾನ್ ಮೇಲೆ ದಾಳಿ ಆರಂಭಿಸಿದ ಇಸ್ರೇಲ್ ಸೇನೆ ತನ್ನ ಶತ್ರುಗಳ ಸಂಹಾರಕ್ಕೆ ಮುಂದೆ ನುಗ್ಗಿದೆ.

ಇಸ್ರೇಲಿ ಸೇನೆಯು ಲೆಬನಾನ್ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ನಡೆಸಿರುವ ದಾಳಿಯಲ್ಲಿ ಕನಿಷ್ಠ 12 ಜನ ಜೀವ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಹಿಜ್ಬುಲ್ಲಾ ಜೊತೆಯಲ್ಲಿ 2024ರ ಸಮಯದಲ್ಲಿ, ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ದಿಢೀರ್ ಇಸ್ರೇಲ್ ಸೇನೆ ದಾಳಿ ಮಾಡಿ ತಮ್ಮ ಶತ್ರುಗಳನ್ನು ಹೊಸಕಿ ಹಾಕಲು ಮುಂದಾಗಿದೆ, ಇನ್ನು ಲೆಬನಾನ್‌ನ ಅಧಿಕೃತ ರಾಷ್ಟ್ರೀಯ ಸುದ್ದಿ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ.

Israel And Lebanon

25ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

ಸಾವಿನ ಜೊತೆಗೆ ಗಾಯಗೊಂಡವರ ಸಂಖ್ಯೆ ಕೂಡ ಹೆಚ್ಚಾಗಿದೆ, 25ಕ್ಕೂ ಹೆಚ್ಚು ಜನ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಜಾ ಜೊತೆಗೂ ಸಂಘರ್ಷ ನಡೆಸುತ್ತಿರುವ ಇಸ್ರೇಲ್ ಸೇನೆ ಈಗ ದಿಢೀರ್ ಲೆಬನಾನ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿದೆ. ಹೀಗಾಗಿ ಲೆಬನಾನ್ ಜನರು ಕೂಡ ಯುದ್ಧ ಭಯದಲ್ಲಿ ಇದ್ದು, ಕಳೆದ ವರ್ಷ ಭೀಕರ ತಿಕ್ಕಾಟ ನಡೆದಿತ್ತು. ಎಲ್ಲವನ್ನೂ ಮರೆತು ಹೊಸ ಜೀವನ ಶುರು ಮಾಡುವ ಸಮಯದಲ್ಲೇ ಮತ್ತೆ ಗಲಾಟೆ ಶುರುವಾಗಿದೆ. ಹಿಜ್ಬುಲ್ಲಾ ಮಾಡಿರುವ ತಪ್ಪಿಗೆ ಸಾಮಾನ್ಯ ಜನರು ನರಳುವಂತೆ ಆಗಿದೆ.

ದಾಳಿ ಮಾಡಿದ್ದು ಏಕೆ ಇಸ್ರೇಲ್?

ಇಸ್ರೇಲ್ ಸೇನೆ ಇದೀಗ ನೀಡಿರುವ ಮಾಹಿತಿ ಪ್ರಕಾರ, ಲೆಬನಾನ್ ದೇಶದ ಬಾಲ್ಬೆಕ್ ಪ್ರದೇಶದಲ್ಲಿ ಇದ್ದ ಹಿಜ್ಬುಲ್ಲಾ ಕಮಾಂಡ್ ಸೆಂಟರ್ಸ್ ಗುರಿಯಾಗಿಸಿ ಈ ದಾಳಿಯನ್ನ ನಡೆಸಲಾಗಿದೆ ಅಂತೆ. ಈ ದಾಳಿಯ ವೇಳೆ ಒಬ್ಬ ಹಿಜ್ಬುಲ್ಲಾ ಕಮಾಂಡರ್ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಕೂಡ ವರದಿಯಾಗಿದೆ. ಲೆಬನಾನ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯ ಕೂಡ ಈ ವಿಚಾರವಾಗಿ ಮಾಹಿತಿ ನೀಡಿದ್ದು, ದಾಳಿ ಬಗ್ಗೆ ತಿಳಿಸಿದೆ. ಇನ್ನು ಹಿಜ್ಬುಲ್ಲಾ ವಿರುದ್ಧ ರೊಚ್ಚಿಗೆದ್ದಿರುವ ಇಸ್ರೇಲ್, ಈ ರೀತಿ ಪದೇ ಪದೇ ದಾಳಿ ಮಾಡುತ್ತಾ ತಮ್ಮ ಶತ್ರುಗಳನ್ನು ನಾಶ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+