ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯ ಕಚೇರಿ ಮೇಲೆ ಬೆಂಕಿಯ ಸುರಿಮಳೆ: ಇರಾನ್ ಮೇಲುಗೈ? ಪರಮಾಣು ದಾಳಿಯತ್ತ ಮಹಾಯುದ್ಧ?
ಇಸ್ರೇಲ್-ಇರಾನ್ ಸಂಘರ್ಷ ಅಪಾಯಕಾರಿ ಹಂತಕ್ಕೆ ತಲುಪಿದೆ. ಉಭಯ ದೇಶಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ಆರಂಭಿಸಿವೆ. ಇರಾನ್ ರಾಜಧಾನಿ ಟೆಹರಾನ್ ಅನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ 200 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಸೇರಿದಂತೆ ಪ್ರಮುಖ ನಗರಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ 30 ಕ್ಕೂ ಹೆಚ್ಚು ಯಹೂದಿಗಳು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬೆಳವಣಿಗಗಳ ನಡುವೆಯೇ ಇಸ್ರೇಲ್‌ಗೆ ಭಾರೀ ಆಘಾತವೊಂದನ್ನು ಇರಾನ್ ನೀಡಿದೆ. ಇಂದು ಇರಾನ್ ಹಾರಿಸಿದ ಕ್ಷಿಪಣಿಗಳು ನೇರವಾಗಿ ಮೊಸಾದ್ (ಇಸ್ರೇಲ್‌ನ ಗುಪ್ತಚರ ಸಂಸ್ಥೆ) ಮುಖ್ಯ ಕಚೇರಿಯನ್ನು ಹೊಡೆದು ಉರುಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಇಸ್ರೇಲ್ ದೇಶವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಈ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಲವಾರು ಜನರು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೊಗಳಲ್ಲಿ ಮೊಸಾದ್ ಕಚೇರಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ಮೊಸಾದ್ ಕಚೇರಿ ಸುತ್ತಮುತ್ತ ಬಿದ್ದ ಬಾಂಬ್‌ಗಳು ಆಕಾಶದೆತ್ತರಕ್ಕೆ ಹೊಗೆಯನ್ನು ಉಗುಳುತ್ತಿರುವುದನ್ನು ಈ ವಿಡಿಯೊಗಳಲ್ಲಿ ಗಮನಿಸಬಹುದಾಗಿದೆ.
ಇಸ್ರೇಲ್‌ನ ಹೆಮ್ಮೆಯಾಗಿರುವ ಮೊಸಾದ್‌ನ ಮುಖ್ಯ ಕಚೇರಿಯ ಮೇಲೆ ಇರಾನ್ ದಾಳಿ ಮಾಡಿದ್ದು ನಿಜವೇ ಆಗಿದ್ದಲ್ಲಿ, ಇದು ಯಹೂದಿಗಳ ಆಕ್ರೋಶವನ್ನು ಮತ್ತಷ್ಟು ಹೆಚ್ಚು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಆಕ್ರೋಶ ಪರಮಾಣು ದಾಳಿಯಂತಹ ಬೆಳವಣಿಗೆಗಳಿಗೂ ಕಾರಣವಾಗಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ.
ಜೂನ್ 13ರಂದು ಬೆಳಗಿನ ಜಾವ, ಇಸ್ರೇಲ್ ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ಇರಾನ್‌ನ ಸೇನಾ ಮುಖ್ಯಸ್ಥ ಮೊಹಮ್ಮದ್ ಬಾಗೇರಿ, ಐಆರ್‌ಜಿಸಿ ಮುಖ್ಯಸ್ಥ ಹುಸೇನ್ ಸಲಾಮಿ ಸೇರಿದಂತೆ ಹಲವಾರು ಹಿರಿಯ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದರು. ಒಟ್ಟು ಒಂಬತ್ತು ಅಣು ವಿಜ್ಞಾನಿಗಳು ಮತ್ತು ಹಲವು ಹಿರಿಯ ಅಧಿಕಾರಿಗಳು ಈ ದಾಳಿಯಲ್ಲಿ ಮೃತರಾಗಿದ್ದರು.
ಇಸ್ರೇಲ್‌ನ ಅಪ್ರಚೋದಿತ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿಗಳನ್ನು ಮಾಡಿದೆ. ಜೂನ್ 13ರ ರಾತ್ರಿಯಂದೇ 150ಕ್ಕೂ ಹೆಚ್ಚು ಬಾಲಿಸ್ಟಿಕ್ ಕ್ಷಿಪಣಿಗಳು ಮತ್ತು 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಟೆಲ್ ಅವಿವ್ ಸೇರಿದಂತೆ ಇತರ ಪ್ರಮುಖ ನಗರಗಳ ಮೇಲೆ ಇರಾನ್ ಹಾರಿಸಿದೆ.
ಇರಾನ್ ನಡೆಸಿದ ಪ್ರತಿಕಾರದ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರ ಪ್ರಾಣಹಾನಿಯಾಗಿದೆ. 300 ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರಿ ಪ್ರಮಾಣದ ಆಸ್ತಿ ನಾಶವಾಗಿದೆ. ಹಲವಾರು ಕಟ್ಟಡಗಳು ಧ್ವಂಸವಾಗಿವೆ ಮತ್ತು ಹಲವಾರು ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇರಾನ್‌ನ ನಡೆಸಿದ ಪ್ರತಿಕಾರದ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳನ್ನು ನಡೆಸಲಿದೆ ಎಂದು ಪ್ರಧಾನಿ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಇರಾನಿನ ದಾಳಿಗಳು ತೀವ್ರಗೊಳ್ಳಲಿವೆ ಎಂದು ಇರಾನ್ ಸರ್ಕಾರ ಹೇಳಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರು ಶರಣಾಗಬೇಕು. ಇಲ್ಲದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಲಿ ಖಮೇನಿ ಇರಾನ್ ಯಾವುದೇ ಕಾರಣಕ್ಕೂ ಶರಣಾಗುವುದಿಲ್ಲ. ನಾವು ಎಲ್ಲವನ್ನು ಎದುರಿಸಲಿದ್ದೇವೆ. ಇಸ್ರೇಲ್ ಈ ಯುದ್ಧವನ್ನು ಆರಂಭಿಸಿದೆ. ನಾವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications