ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ ಮಗಳಿಗೆ ಕ್ರೂರ ಹಿಂಸೆ, ಎನ್ನಾರೈಗೆ 15 ವರ್ಷ ಶಿಕ್ಷೆ

By Mahesh
|
Google Oneindia Kannada News

ನ್ಯೂಯಾರ್ಕ್, ಸೆ. 11: ಮಲಮಗಳಿಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಅನಿವಾಸಿ ಭಾರತೀಯ ಮಹಿಳೆಗೆ ಇಲ್ಲಿನ ಕೋರ್ಟಿನಿಂದ 15ವರ್ಷಗಳ ಕಾಲ ಕಠಿಣ ಶಿಕ್ಷೆ ಘೋಷಿಸಲಾಗಿದೆ.

ಮಲ ಮಗಳನ್ನು ಅಮಾನೀಯವಾಗಿ ಹಿಂಸೆ ನೀಡಿದ ಆರೋಪ ಹೊತ್ತ ಶೀತಲ್ ರನೊಟ್ (35) ಭಾರತೀಯ ಮೂಲದ ಮಹಿಳೆಗೆ 15 ವರ್ಷಗಳ ಕಾರಾಗೃಹ ಶಿಕ್ಷೆ ಸಿಕ್ಕಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕ್ವೀನ್ಸ್‌ ಸುಪ್ರೀಂಕೋರ್ಟ್‌ ಜಸ್ಟೀಸ್ ರಿಚರ್ಡ್‌ ಬುಚರ್‌ ಅವರು, 15 ವರ್ಷಗಳ ಕಾರಾಗೃಹ ಶಿಕ್ಷೆ ಘೋಷಿಸಿದ್ದಾರೆ.

Indian-origin woman gets 15 years in jail

ಕಳೆದ ಎರಡು ವರ್ಷಗಳಿಗೂ ಅಧಿಕ ಕಾಲದಿಂದ ಶೀತಲ್‌ ಅವರು ಮಲಮಗಳು ಮಾಯಾ (12) ಗೆ ಚಿತ್ರಹಿಂಸೆ ನೀಡುತ್ತಿದ್ದರು. ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಅಮಾನವೀಯವಾಗಿ ಹಿಂಸಿಸಿದ್ದಾರೆ. ಬಾಲಕಿ ಶಕ್ತಿ ಹೀನಗೊಂಡಿದ್ದಳು. ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಎಂದು ಆರೋಪಿಸಲಾಗಿತ್ತು. ಮಾಯಾಳ ತಂದೆ ರಾಜೇಶ್ ಅವರ ಮೇಲಿನ ಆರೋಪದ ವಿಚಾರಣೆ ಇನ್ನೂ ನಡೆದಿಲ್ಲ.

ಒಮ್ಮೆ ಮಾಯಾಳ ಮುಖಕ್ಕೆ ಕಾಲಿನಿಂದ ಒದೆಯಲಾಗಿದೆ. ಆಕೆಯ ಕಣ್ಣು ಹಾಗೂ ಮುಖದ ಮೇಲೆ ಗಾಯಗಳಾಗಿವೆ. ಪದೇ ಪದೇ ಹಿಂದೆ ನೀಡಲಾಗಿದೆ.12 ವರ್ಷದ ಬಾಲಕಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾಳೆ ಎಂದು ಕ್ವೀನ್ಸ್ ಆಸ್ಪತ್ರೆ ವರದಿ ನೀಡಿದೆ. ಇನ್ನೊಮ್ಮೆ

ಬಾಲಕಿ ಕೈ ಮೂಳೆ ಮುರಿದಿದ್ದರಿಂದ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಗಿತ್ತು. ಮಾಯಾ ತಂದೆ ರಾಜೇಶ್ ಕೂಡಾ ತನ್ನ ಮಗಳಿಗೆ ಹಿಂಸೆ ನೀಡಿದ ಆರೋಪ ಹೊತ್ತಿದ್ದಾರೆ. ಇದೆಲ್ಲವನ್ನು ಪರಿಗಣಿಸಿದ ಕೋರ್ಟ್, ಈ ರೀತಿಯ ಪರಿಸ್ಥಿತಿ ಯಾವ ಮಗುವಿಗೂ ಬರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.(ಪಿಟಿಐ)

English summary
An Indian-origin woman, found guilty of brutally abusing and starving her 12-year-old stepdaughter for more than a year and half, has been sentenced to 15 years in prison in the U.S.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X