ಭಾರತಕ್ಕೆ ಭರ್ಜರಿ ಲಾಭ, ಅಮೆರಿಕ ಜೊತೆಗಿನ ಒಪ್ಪಂದದ ಪರಿಣಾಮ ಭರ್ಜರಿ ಲಾಟರಿ... India And America
ಭಾರತ ಮತ್ತು ಅಮೆರಿಕ ನಡುವೆ ನಡೆದಿರುವ ಬೃಹತ್ ವ್ಯಾಪಾರ ಒಪ್ಪಂದ ಇದೀಗ ದೊಡ್ಡ ಲಾಭಕ್ಕೆ ನಾಂದಿ ಹಾಡಿದೆ. ಸುಮಾರು 500 ಬಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದ ಭವಿಷ್ಯದಲ್ಲಿ ಭಾರತ ಹಾಗೂ ಅಮೆರಿಕ ಎರಡೂ ದೇಶಗಳಿಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡಲಿದೆ. ಇದರ ಜೊತೆ ವ್ಯಾಪಾರ ಮಾಡುವವರಿಗೆ ಕೂಡ ಇದರಿಂದ ಪ್ರಾಫಿಟ್ ಗ್ಯಾರಂಟಿ. ಜಾಗತಿಕ ಮಟ್ಟದಲ್ಲಿ ಭಾರತದಿಂದ ಸಾಲು ಸಾಲು ವ್ಯಾಪಾರ ಒಪ್ಪಂದ ಏರ್ಪಡುತ್ತಿರುವ ಸಮಯದಲ್ಲೇ, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಫಂದದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ. ಹಾಗಾದರೆ ಏನೆಲ್ಲಾ ಲಾಭ ಆಗಲಿದೆ ಈಗ ಭಾರತಕ್ಕೆ? ಹಾಗೂ ಭಾರತದ ವ್ಯಾಪಾರಸ್ಥರಿಗೆ?
ಯುರೋಪ್ ಜೊತೆಗೆ ಯಾವಾಗ ಭಾರತ ಒಪ್ಪಂದ ಮಾಡಿಕೊಂಡಿತ್ತೋ, ಆ ನಂತರ ತಕ್ಷಣವೇ ಅಮೆರಿಕ ಕೂಡ ಓಡೋಡಿ ಬಂದು ಭಾರತದ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕವಾಗಿ ಭಾರತದ ಜೊತೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಅಮೆರಿಕ ಮುಂದಾಗಿದೆ. ಭಾರತ ಮತ್ತು ಅಮೆರಿಕ ನಡುವೆ ನಡೆದ ಮಹತ್ವದ ವ್ಯಾಪಾರ ಒಪ್ಪಂದ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದೆ. ಭಾರತವು ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೇಶಗಳ ಪೈಕಿ ಒಂದಾಗಿದ್ದರೆ, ಇನ್ನೊಂದು ಕಡೆ ಅಮೆರಿಕ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದಿದೆ. ಇಷ್ಟೆಲ್ಲದರ ಮಧ್ಯೆ ಭಾರತಕ್ಕೆ ಈ ಒಪ್ಪಂದ ದೊಡ್ಡ ಲಾಭ ತಂದುಕೊಡುವ ನಿರೀಕ್ಷೆ ಮೂಡಿದೆ.

ಅಮೆರಿಕದ ವಸ್ತುಗಳ ಭರ್ಜರಿ ಡಿಸ್ಕೌಂಟ್?
ಫೆಬ್ರವರಿ 7 ಶನಿವಾರ ಅಂದ್ರೆ ಇಂದು ಭಾರತ ಮತ್ತು ಅಮೆರಿಕ ಮಹತ್ವದ ಜಂಟಿ ಹೇಳಿಕೆಯನ್ನ ನೀಡಿ, ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಒಂದು ಚೌಕಟ್ಟನ್ನು ತಲುಪಿರುವುದಾಗಿ ಘೋಷಿಸಿವೆ. ಈ ಮೂಲಕ ಎರಡೂ ದೇಶಗಳ ವ್ಯಾಪಾರ ಒಪ್ಪಂದ ಒಂದು ಮಹತ್ವದ ಹಂತವನ್ನ ತಲುಪಿದ್ದು, ಭಾರತದ ವಸ್ತುಗಳ ಮೇಲೆ ಹಾಕುವ ಸುಂಕ ಶೇಕಡಾ 18ಕ್ಕೆ ಇಳಿಕೆ ಮಾಡಲಾಗಿದೆ. ಹೊಸ ಒಪ್ಪಂದದ ಪ್ರಕಾರ ಮುಂದೆ, ಅಮೆರಿಕದ ಕೈಗಾರಿಕಾ ಸರಕು ಮತ್ತು ಡಿಸ್ಟಿಲರ್ ಧಾನ್ಯಗಳು, ಪಶು ಆಹಾರ, ಮರದ ಬೀಜ, ತಾಜಾ & ಸಂಸ್ಕರಿಸಿದ ಹಣ್ಣು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಸೇರಿದಂತೆ ಹಲವು ವಸ್ತು ಮೇಲೆ ಇರುವ ಸುಂಕವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications