Nobel Prize: ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರಿಗೆ ಕೈತಪ್ಪಿದ ನೋಬೆಲ್ ಪ್ರಶಸ್ತಿ
Nobel Prize: 2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಇಂದು (ಅಕ್ಟೋಬರ್ 9) ಗುರುವಾರ ಘೋಷಣೆ ಮಾಡಲಾಗಿದೆ. ಹಂಗೇರಿಯನ್ ಲೇಖಕ ಲಾಸ್ಲೊ ಕ್ರಾಸ್ನಹೊರ್ಕೈ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರಿಗೆ ಪ್ರಶಸ್ತಿ ಕೈತಪ್ಪಿದೆ.
ಸ್ವೀಡಿಷ್ ಅಕಾಡೆಮಿ ಗುರುವಾರ ಸಾಹಿತ್ಯದಲ್ಲಿ ಹೊಸ ನೊಬೆಲ್ ಪ್ರಶಸ್ತಿ ವಿಜೇತರ ವಿಜೇತರ ಹೆಸರನ್ನು ಬಹಿರಂಗಪಡಿಸಿದೆ. ಈ ಬಾರಿ ಬಂಗಾಳಿ ಲೇಖಕ ಅಮಿತಾವ್ ಘೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಇದೀಗ ಈ ಭರವಸೆ ಹುಸಿಯಾಗಿದ್ದು, ಹಂಗೇರಿಯನ್ ಲೇಖಕ ಲಾಸ್ಲೊ ಕ್ರಾಸ್ನಹೊರ್ಕೈ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಾಸ್ಲೊ ಕ್ರಾಸ್ನಹೊರ್ಕೈ ಅವರ "Herscht 07769" ಕಾದಂಬರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು 'ಸ್ವೀಡಿಷ್ ಅಕಾಡೆಮಿ' ತಿಳಿಸಿದೆ. ವಿನಾಶಕಾರಿ ಭೀತಿಯ ಮಧ್ಯೆ, ಕಲೆಯ ಶಕ್ತಿಯನ್ನು ಪುನರುಚ್ಚರಿಸುವ ಅವರ ಅಪಾರ ಮತ್ತು ದೂರದೃಷ್ಟಿಯ ಕೃತಿಗಳಿಗಾಗಿ ಕ್ರಾಸ್ನಹೊರ್ಕೈ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಘೋಷಣೆ ಮಾಡಿದೆ.
ಕಳೆದ ಬಾರಿ ಅಂದರೆ 2024ರ ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕೊರಿಯಾದ ಕಾದಂಬರಿಗಾರ್ತಿ ಹಾನ್ ಕಾಂಗ್ ಪ್ರಶಸ್ತಿ ದೊರೆತಿತ್ತು. ನೊಬೆಲ್ ಪ್ರಶಸ್ತಿಯ ಆರಂಭದಿಂದಲೂ, ಸ್ವೀಡಿಷ್ ಅಕಾಡೆಮಿಯ ನೊಬೆಲ್ ಸಮಿತಿಯು 117 ಬಾರಿ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಒಟ್ಟು 121 ಪುರಸ್ಕೃತರಿಗೆ ಈ ಗೌರವ ಸಂದಿದೆ ಎಂದು ತಿಳಿದುಬಂದಿದೆ.












Click it and Unblock the Notifications