ಇಂಡೋ-ಅಫ್ಘನ್ ನಡುವೆ 'ಅಣೆಕಟ್ಟು' ಬಂಧನ

Written By:
Subscribe to Oneindia Kannada

ನವದೆಹಲಿ, ಜೂನ್ 04 : ಭಾರತ ಮತ್ತು ಅಫ್ಘಾನಿಸ್ತಾನದ ಸ್ನೇಹ ಬಾಂಧವ್ಯಕ್ಕೆ ನರೇಂದ್ರಮೋದಿ ಹೊಸ ಭಾಷ್ಯ ಬರೆದಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ಸ್ನೇಹದ ಪ್ರತೀಕವಾಗಿ ನಿರ್ಮಾಣಗೊಂಡಿರುವ ಸಲ್ಮಾ ವಿದ್ಯುತ್ ಉತ್ಪಾದನಾ ಜಲಾಶಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಶನಿವಾರ ಉದ್ಘಾಟಿಸಿದರು.

ಇಂಡಿಯಾ ಅಫ್ಘಾನಿಸ್ತಾನದ ಸ್ನೇಹದ ಪ್ರತೀಕವಾಗಿರುವ ಜಲಾಶಯವನ್ನು ಉದ್ಘಾಟನೆ ಮಾಡುತ್ತಿರುವುದು ನನಗೆ ಹೆಮ್ಮೆ ಆಗುತ್ತಿದೆ. ಇದೊಂದು ಐತಿಹಾಸಿಕ ಸಾಧನೆ. ಈ ಯೋಜನೆಯಿಂದ ಜನರ ಮನೆಗೆ ಬೆಳಕು ಸಿಗಲಿದೆ ಎಂದು ಮೋದಿ ತಿಳಿಸಿದರು.[ಇರಾನ್ ಜತೆ ಕರಾರು, ಈಗ ಪಾಕ್ ಮಾಡಲಿ ತಕರಾರು?]

modi

17 ಸಾವಿರ ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡ ಈ ಯೋಜನೆ 75 ಸಾವಿರ ಹೆಕ್ಟೆರ್ ಪ್ರದೇಶಕ್ಕೆ ನೀರು ನೀಡಲಿದೆ. ಅಷ್ಟೇ ಅಲ್ಲೇ 42 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.

ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೀರತ್ ಪ್ರಾಂತ್ಯದಲ್ಲಿರುವ ಹರಿ ನದಿಗೆ ಅಡ್ಡಲಾಗಿ ಸಲ್ಮಾ ಜಲಾಶಯವನ್ನು ಕಟ್ಟಲಾಗಿದೆ. ಈ ಯೋಜನೆಯ ನಿರ್ಮಾಣ ಕಾಮಗಾರಿ 1976ರಲ್ಲೇ ಆರಂಭವಾದರೂ ಆಂತರಿಕ ಕಲಹದಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. 1988ರಲ್ಲಿ ಭಾರತದ ವಾಪ್ಕೋ ಕಂಪೆನಿ ಗುತ್ತಿಗೆಯನ್ನು ಪಡೆದುಕೊಂಡು ನಿರ್ಮಾಣ ಆರಂಭಿಸಿತು. ಆದರೆ ತಾಲಿಬಾನ್ ಉಗ್ರರ ಉಪಟಳದಿಂದಾಗಿ ಈ ಯೋಜನೆಯನ್ನು ಅರ್ಧದಲ್ಲೇ ಕೈಬಿಡಲಾಗಿತ್ತು.[ಲೀಟರ್ ಪೆಟ್ರೋಲ್ ಗೆ 23 ರು. ಕೊಟ್ಟರೆ ಸಾಕು]

-
-
-
-

ಒಟ್ಟು 107.5 ಮೀಟರ್ ಎತ್ತರದ, 551 ಮೀಟರ್ ಉದ್ದದ ಡ್ಯಾಂ ನಿರ್ಮಾಣ ಯೋಜನೆ 2014ರಲ್ಲಿ ಪೂರ್ಣಗೊಳ್ಳಬೇಕಿದ್ದರೂ 2 ವರ್ಷ ತಡವಾಗಿ ಪೂರ್ಣಗೊಂಡಿದ್ದು ಎರಡು ದೇಶದ ಪ್ರಮುಖರು ಐತಿಹಾಶಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮೋದಿ 5 ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಅಫ್ಘಾನಿಸ್ತಾನದ ನಂತರ ಕತಾರ್, ಸ್ವಿಟ್ಜರ್ಲೆಂಡ್, ಅಮೆರಿಕ ಹಾಗೂ ಮೆಕ್ಸಿಕೋಗೆ ಭೇಟಿ ಕೊಡಲಿದ್ದಾರೆ. ಆಫ್ಘಾನಿಸ್ತಾನದಿಂದ ಮೋದಿ ಪ್ರವಾಸ ಆರಂಭವಾಗಿದೆ.

ಇರಾನ್ ಗೆ ಭೇಟಿ ನೀಡಿದ್ದ ಪ್ರಧಾನಿ ಅಲ್ಲಿನ ಅಧ್ಯಕ್ಷ ಹಸನ್ ರೂಹಾನಿ ಅವರೊಂದಿಗೆ ಮಾತುಕತೆ ನಡೆಸಿ 12 ಒಪ್ಪಂದಗಳಿಗೆ ಸಹಿ ಹಾಕಿದ್ದರು. ಎಲ್ಲದಕ್ಕಿಂತ ಪ್ರಮುಖವಾಗಿ ಚಾಬಹಾರ್ ಬಂದರು ನಿರ್ಮಾಣಕ್ಕೆ 500 ಮಿಲಿಯನ್ ಡಾಲರ್ ವಿನಿಯೋಗ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಇದೀಗ ಮೋದಿ ಪಕ್ಕದ ಅಪ್ಘಾನಿಸ್ತಾನದೊಂದಿದೂ ಬಾಂಧವ್ಯ ವೃದ್ಧಿ ಮಾಡಿಕೊಂಡು ಮುಂದೆ ಸಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Marking another major success in India's reconstruction efforts in Afghanistan, Prime Minister Narendra Modi along with Afghan President Ashraf Ghani on Saturday jointly inaugurated the Afghan-India Friendship Dam, earlier known as Salma Dam, built with Indian aid. Speaking at the inauguration ceremony, Ghani said that with India's help a longstanding dream of Afghanistan has been realised after 40 years.
Please Wait while comments are loading...