Get Updates
Get notified of breaking news, exclusive insights, and must-see stories!

‘ಶುಕ್ರ ಗ್ರಹ’ಕ್ಕೆ ಸ್ಕೆಚ್ ಹಾಕಿದ ಯುರೋಪ್! ನಾಸಾ ಜೊತೆ ಮಹತ್ವದ ಸಾಧನೆಗೆ ಸಿದ್ಧತೆ!

ಏನೆಂದು ಹೆಸರಡಿಲಿ.. ಈ ಚೆಂದ ಅನುಭವಕೆ.. ಹೀಗೆ ರಾತ್ರಿ ಆಕಾಶ ದಿಟ್ಟಿಸುತ್ತಾ, ಕತ್ತಲೆ ನಡುವೆ ಕಳೆದೋಗಿ ಹಾಡು ಗುನುಗುವವರೆ ಹೆಚ್ಚು. ಆದ್ರೆ ರಾತ್ರಿ ಆಕಾಶದಲ್ಲಿ ಬರೀ ತಾರೆಗಳು ಮಾತ್ರ ಹೊಳೆಯುವುದಿಲ್ಲ, ಭೂಮಿ ಸುತ್ತಮುತ್ತ ತಿರುಗುವ ನಮ್ಮ ಸೌರವ್ಯೂಹದ ಅನೇಕ ಗ್ರಹಗಳು ಕೂಡ ಹೊಳೆಯುತ್ತವೆ.

ಆದರೆ ಅದರಲ್ಲಿ ಶುಕ್ರ ಗ್ರಹ ಒಂದು ಕೈ ಮೇಲೆ ಎನ್ನಬಹುದು. ಹೀಗೆ ಸಾವಿರಾರು ವರ್ಷಗಳಿಂದಲೂ ಮಾನವನ ಕುತೂಹಲಕ್ಕೆ ಕಿಚ್ಚು ಹಚ್ಚುತ್ತಿರುವ ಶುಕ್ರ ಗ್ರಹದ ಮೇಲೆ, ಮಾನವನಿಗೆ ಇತ್ತೀಚೆಗೆ ವ್ಯಾಮೋಹ ಹೆಚ್ಚಾದಂತೆ ಕಾಣುತ್ತಿದೆ.

ಹೀಗಾಗೇ ಶುಕ್ರ ಗ್ರಹದ ಸಂಶೋಧನೆಗೆ ಒಂದೊಂದೇ ದೇಶಗಳು ಪೈಪೋಟಿ ನಡೆಸುತ್ತಿವೆ. ಅಮೆರಿಕದ ನಾಸಾ ಶುಕ್ರ ಗ್ರಹ ಅಧ್ಯಯನಕ್ಕಾಗಿ 2 ಯೋಜನೆ ಘೋಷಣೆ ಮಾಡಿ ವಾರ ಕಳೆಯುವ ಒಳಗೆ, ಯುರೋಪ್ ಕೂಡ ಇಂತಹದ್ದೇ ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರಗ್ರಹ ಅಧ್ಯಯನಕ್ಕೆ ನೌಕೆ ಕಳಿಸುವುದಾಗಿ ಯುರೋಪ್ ಘೋಷಿಸಿದೆ.

ಆದರೆ ಇದು 'ನಾಸಾ' ಜೊತೆಗಿನ ಪೈಪೋಟಿ ಅಲ್ಲ ಎಂಬ ಮಾತನ್ನೂ 'ಯುರೋಪಿಯನ್ ಸ್ಪೇಸ್ ಏಜೆನ್ಸಿ' ಸ್ಪಷ್ಟಪಡಿಸಿದೆ. ಅಮೆರಿಕದ ನಾಸಾ ಹಾಗೂ 'ಯುರೋಪಿಯನ್ ಸ್ಪೇಸ್ ಏಜೆನ್ಸಿ' ಒಟ್ಟಾಗಿ ಈ ಯೋಜನೆಗೆ ಸಿದ್ಧವಾಗುತ್ತಿವೆ. 2030ರ ವೇಳೆಗೆ ಯುರೋಪ್ ನೌಕೆ ಶುಕ್ರ ಗ್ರಹದ ಕಡೆಗೆ ತನ್ನ ಪ್ರಯಾಣ ಆರಂಭಿಸಲಿದೆ.

 ಇಬ್ಬರೂ ಆತ್ಮೀಯ ಗೆಳೆಯರು..!

ಇಬ್ಬರೂ ಆತ್ಮೀಯ ಗೆಳೆಯರು..!

'ಯುರೋಪಿಯನ್ ಸ್ಪೇಸ್ ಏಜೆನ್ಸಿ' ನಡುವೆ ಸಂಬಂಧ ಗಟ್ಟಿಯಾಗಿದೆ. ಹಲವು ಯೋಜನೆಗಳನ್ನು ಎರಡೂ ಬಾಹ್ಯಾಕಾಶ ಸಂಸ್ಥೆ ಒಟ್ಟಾಗಿ ಮಾಡಿವೆ. ಈಗಲೂ ಹತ್ತಾರು ಯೋಜನೆಗಳಲ್ಲಿ 'ಯುರೋಪಿಯನ್ ಸ್ಪೇಸ್ ಏಜೆನ್ಸಿ' ಮತ್ತು ನಾಸಾ ಒಟ್ಟಾಗಿ ಕೆಲಸ ಮಾಡುತ್ತಿವೆ. ಮಂಗಳನ ಮೇಲೆ ಇತ್ತೀಚೆಗೆ ನಾಸಾ ಇಳಿಸಿದ ರೋವರ್‌ಗೆ ಬೆನ್ನೆಲುಬಾಗಿ ನಿಂತಿದ್ದು ಇದೇ ಯುರೋಪ್. ಹಾಗೇ ಶುಕ್ರ ಗ್ರಹದ ಅಧ್ಯಯನಕ್ಕೆ ಯುರೋಪ್ ನೌಕೆ ಉಡಾಯಿಸಲು ನಿರ್ಧರಿಸಿದ್ದು, ನಾಸಾ ಸಪೋರ್ಟ್ ಮಾಡಲಿದೆ. ಯೋಜನೆಗೆ ಬೇಕಾದ ಪೂರ್ವ ತಯಾರಿಯಲ್ಲಿ ಎರಡೂ ಸಂಸ್ಥೆಗಳ ನಡುವೆ ಮಾತುಕತೆ ನಡೆಯುತ್ತಿದೆ.

ಬಾಹ್ಯಾಕಾಶದಲ್ಲಿ ಮನೆಯ ಮಾಡಿ..!

ಬಾಹ್ಯಾಕಾಶದಲ್ಲಿ ಮನೆಯ ಮಾಡಿ..!

ಶುಕ್ರ ಗ್ರಹದ ಬಗ್ಗೆ ಸೂಕ್ತವಾದ ಅಧ್ಯಯನ ನಡೆಸಿದರೆ ಮಾನವ 'ಬಾಹ್ಯಾಕಾಶ' ಕ್ಷೇತ್ರದ ಮೇಲೆ ಬಿಗಿಯಾದ ಹಿಡಿತ ಸಾಧಿಸೋದು ಪಕ್ಕಾ. ಏಕೆಂದರೆ ಶುಕ್ರ ಗ್ರಹ ಭೂಮಿಗೆ ಅತಿ ಸಮೀಪದ ಹಾಗೂ ಸರಿಸುಮಾರು ನಮ್ಮ ಭೂಮಿಯಷ್ಟೇ ಗಾತ್ರದಲ್ಲಿರುವ ಗ್ರಹ. ಹೀಗಾಗಿ ಇಲ್ಲಿ ಜೀವಿಗಳು ಬದುಕಿವೆಯಾ? ಎಂಬ ಅನುಮಾನ ಇಡೀ ಜಗತ್ತನ್ನು ಕಾಡುತ್ತಿದೆ. ಇತ್ತೀಚಿನ ಕೆಲವು ಅಧ್ಯಯನಗಳು ಶುಕ್ರ ಗ್ರಹದ ಮೇಲೆ ಜೀವಿಗಳು ಬದುಕಿದ್ದಾವೆ ಎಂಬ ಕುರುಹು ನೀಡಿವೆ. ತಕ್ಷಣ ಅಲರ್ಟ್ ಆಗಿರುವ ಜಗತ್ತಿನ ದೊಡ್ಡ ದೊಡ್ಡ ದೇಶಗಳು ಶುಕ್ರ ಗ್ರಹದ ಅಧ್ಯಯನಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯುತ್ತಿವೆ.

2 ನೌಕೆಗಳು ಹಾರಲಿವೆ..!

2 ನೌಕೆಗಳು ಹಾರಲಿವೆ..!

ಶುಕ್ರ ಗ್ರಹದ ಅಧ್ಯಯನಕ್ಕಾಗಿ ನಾಸಾ ಈಗ ಸಿದ್ಧಪಡಿಸಿರುವ ಯೋಜನೆ ಪ್ರಕಾರ ಒಟ್ಟು 2 ನೌಕೆಗಳು ಶುಕ್ರನ ಕಕ್ಷೆಗೆ ಹಾರಲಿವೆ. ಅದರಲ್ಲಿ ಮೊದಲ ನೌಕೆ 2028ಕ್ಕೆ ಉಡಾವಣೆಯಾಗಲಿದೆ. 2030ಕ್ಕೆ 'ನಾಸಾ' ಮತ್ತೊಂದು ನೌಕೆಯನ್ನು ಉಡಾವಣೆ ಮಾಡಲಿದೆ. ಈ ಎರಡೂ ಯೋಜನೆಗಳು ಶುಕ್ರ ಗ್ರಹದ ಅಧ್ಯಯನ ನಡೆಸುವುದಲ್ಲದೆ ಶುಕ್ರನ ಮೇಲೆ ಜೀವಿಗಳ ಕುರುಹು ಸಿಗುತ್ತಾ ಎಂದು ತಡಕಾಡಲಿವೆ. ಅಕಸ್ಮಾತ್ ಶುಕ್ರನಲ್ಲಿ ಜೀವಿಗಳ ಕುರುಹು ಪತ್ತೆ ಹಚ್ಚಿದ್ದೇ ಆದರೆ, ನಾಸಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಹೀಗಾಗಿ 30 ವರ್ಷಗಳ ಬಳಿಕ ಮಹತ್ವದ ಘೋಷಣೆ ಹೊರಡಿಸಿದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ.

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಜೀವಿಗಳ ಬಗ್ಗೆ ಸುಳಿವು..?

ಜೀವಿಗಳ ಬಗ್ಗೆ ಸುಳಿವು..?

ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್​ಫೈನ್ ಗ್ಯಾಸ್‌ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್​ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್​ಫೈನ್ ಗ್ಯಾಸ್ ಕಂಡುಬಂದಿದೆ. ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ. 3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್​ಫೈನ್ ಉತ್ಪತ್ತಿಯಾಗುತ್ತದೆ. ಆದರೆ ಮಾನವರಿಗೆ ತುಂಬಾ ವಿಷಕಾರಿಯಾಗಿರುತ್ತದೆ. ಶುಕ್ರನ ಮೇಲೆ ಕೆಲ ತಿಂಗಳ ಹಿಂದೆ ಫಾಸ್​ಫೈನ್ ಅನಿಲ ಕಂಡುಬಂದಿತ್ತು. ಇದಾದ ಬಳಿಕ ಇಡೀ ಜಗತ್ತು ಶುಕ್ರಗ್ರಹದ ಮೇಲೆ ತನ್ನ ದೃಷ್ಟಿ ನೆಟ್ಟಿದೆ.

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಭೂಮಿಗೆ ಅತ್ಯಂತ ಸಮೀಪದ ಗ್ರಹ

ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+