ಹೇರ್ ಕಟ್‌ಗೆ ಬಾಳೆಹಣ್ಣು, ಟ್ಯಾಕ್ಸಿಗೆ ಸಿಗರೇಟ್ ಪ್ಯಾಕ್: ಇದು ವೆನಿಜುವೆಲಾ ಪರಿಸ್ಥಿತಿ
ಕಾರಾಕಸ್, ಜುಲೈ 6: ತಲೆಗೂದಲು ಕಟ್ ಮಾಡಿದರೆ ಹಣ ಕೊಡಬೇಡಿ, ಬಾಳೆಹಣ್ಣು ಅಥವಾ ಮೊಟ್ಟೆ ಕೊಡಿ. ಟ್ಯಾಕ್ಸಿಯಲ್ಲಿ ಬಾಡಿಗೆ ಬಂದರೂ ಹಣ ಬೇಡ. ಸಿಗರೇಟ್ ಪ್ಯಾಕ್ ನೀಡಿ.
ಇದು ಲ್ಯಾಟಿನ್ ಅಮೆರಿಕದ ಒಂದು ಕಾಲದ ಬಹು ಶ್ರೀಮಂತ ದೇಶ ವೆನಿಜುವೆಲಾದ ಈಗಿನ ಪರಿಸ್ಥಿತಿ.
ಹಣದುಬ್ಬರದಿಂದ ತತ್ತರಿಸಿರುವ ವೆನಿಜುವೆಲಾದಲ್ಲಿ ಕಂತೆಗಟ್ಟಲೆ ಹಣ ತೆತ್ತರೂ ವಸ್ತುಗಳು ಸಿಗುತ್ತಿಲ್ಲ. ಜನರೂ ಹಣದ ಬದಲು ವಸ್ತು ಮತ್ತು ಉತ್ಪನ್ನಗಳನ್ನು ಕೇಳುತ್ತಿದ್ದಾರೆ. ಒಂದು ಕಪ್ ಕಾಫಿಗೆ ಇಡೀ ತಿಂಗಳ ಸಂಬಳದ ಹಣ ಕೊಡಬೇಕಾದ ಮಟ್ಟಕ್ಕೆ ಆರ್ಥಿಕ ಪರಿಸ್ಥಿತಿ ಕುಸಿದಿದೆ.
ಹಣದುಬ್ಬರದ ವೇಗಕ್ಕೆ ಅಲ್ಲಿನ ಪ್ರಮುಖ ಕರೆನ್ಸಿ ಬೊಲಿವರ್ ತನ್ನ ಮೌಲ್ಯ ಕಳೆದುಕೊಂಡಿದೆ. ಹಣ ಇಲ್ಲಿನ ಜನರಿಗೆ ಈಗ ಬೇಡವಾಗಿದೆ. ಅದರ ಬದಲು ತಮ್ಮ ಉಳಿವಿಗಾಗಿ ವಸ್ತುಗಳ ವಿನಿಮಯ ಪದ್ಧತಿಯ ಮೊರೆ ಹೋಗಿದ್ದಾರೆ.

2008ರ ನವೆಂಬರ್ ಮಧ್ಯದಲ್ಲಿ ಜಿಂಬಾಬ್ವೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಅಲ್ಲಿ ಹಣದುಬ್ಬರದ ಪ್ರಮಾಣ ಶೇ 79.6 ಬಿಲಿಯನ್ ಎಂದು ಅಂದಾಜಿಸಲಾಗಿತ್ತು.
ನಗರಗಳಲ್ಲಿ ಬಹುತೇಕ ವಹಿವಾಟು ಬ್ಯಾಂಕ್ ವರ್ಗಾವಣೆ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ನಡೆಯುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ.
ವಸ್ತುಗಳ ವಿನಿಮಯ, ಹಣದುಬ್ಬರ ಮತ್ತು ನಗದಿನ ಕೊರತೆ ವೆನಿಜುವೆಲಾದ ಶ್ರೀಮಂತಿಕೆಯನ್ನು ಅಧೋಗತಿಗೆ ಇಳಿಸಿದೆ.
ಲ್ಯಾಟಿನ್ ಅಮೆರಿಕದ ಸಮೃದ್ಧ ದೇಶಗಳಲ್ಲಿ ಒಂದಾಗಿದ್ದ ವೆನಿಜುವೆಲಾದಲ್ಲಿ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಆಡಳಿತದ ಸರ್ಕಾರದ ಅವಧಿಯಲ್ಲಿ ಆರ್ಥಿಕ ಕುಸಿತ ಉಂಟಾಯಿತು. 2015-2017ರ ಅವಧಿಯಲ್ಲಿ ದೇಶದ ಶೇ 3ರಷ್ಟು ಜನರು, ಅಂದರೆ ಸುಮಾರು ಒಂದು ಮಿಲಿಯನ್ ಜನರು ವಲಸೆ ಹೋದರು.
ಅಪಾರ ತೈಲ ನಿಕ್ಷೇಪವಿರುವ ದೇಶದಲ್ಲಿ ಭಾರಿ ಆದಾಯವಿತ್ತು. ಕಳೆದ ಎರಡು ವರ್ಷಗಳಿಂದೀಚೆಗೆ ಪೆಟ್ರೋಲ್ ಬೆಲೆಯಲ್ಲಿ ತೀವ್ರ ಕುಸಿತವಾದ ಕಾರಣ ಅದರ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬಿದ್ದಿದೆ. ಪೆಟ್ರೋಲ್ ದರ ನೆಲಕಚ್ಚುತ್ತಿದ್ದಂತೆಯೇ ಹಣದುಬ್ಬರ ಸೃಷ್ಟಿಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ.
ಭಾರತದಂತೆಯೇ ವೆನಿಜುವೆಲಾ ಕೂಡ ಹಣದ ಅಪನಗದೀಕರಣ ಮಾಡಿತ್ತು. 100 ಬೊಲಿವರ್ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಅಧ್ಯಕ್ಷ ಮಡುರೊ ಬೊಲಿವರ್ ಅನ್ನು ಶೇ 37ರಷ್ಟು ಅಪಮೌಲ್ಯಗೊಳಿಸಿದ್ದರು.
ಈಗ ಅಲ್ಲಿನ ವಸ್ತುಗಳ ಬೆಲೆಗಳು ಶೇ 42,000ದಷ್ಟು ಹೆಚ್ಚಾಗಿದೆ. ಬೊಲಿವರ್ ತನ್ನ ಮೌಲ್ಯವನ್ನು ಶೇ 98ರಷ್ಟು ಕಳೆದುಕೊಂಡಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications