ಟ್ರಂಪ್ ಮುಖಕ್ಕೆ ಮಸಿ ಬಳೆದ ನ್ಯಾಯಾಲಯ, 'ಟ್ರಾವೆಲ್ ಬ್ಯಾನ್'ಗೆ ತಡೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 17: 6 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶ ನಿರ್ಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆದೇಶಕ್ಕೆ ಅಲ್ಲಿನ ನ್ಯಾಯಾಲಯ ತಡೆ ಒಡ್ಡಿದೆ. ಈ ಮೂಲಕ ಅಲ್ಲಿನ ಅಧ್ಯಕ್ಷರಿಗೇ ನ್ಯಾಯಾಲಯ ಸಡ್ಡು ಹೊಡೆದಿದೆ.

ಹವಾಯಿ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಗುರುವಾರ ಅಮೆರಿಕಾ ಅಧ್ಯಕ್ಷರ ಟ್ರಾವೆಲ್ ಬ್ಯಾನ್ ಗೆ ತಡೆ ನೀಡಿದ್ದಾರೆ. ಈ ಕುರಿತು 43 ಪುಟಗಳ ಆದೇಶ ನೀಡಿದ ನ್ಯಾಯಾಧೀಶ ಡೆರಿಕ್ ವಾಟ್ಸನ್ ಟ್ರಂಪ್ ವಿರುದ್ಧ ಚಾಟಿ ಬೀಸಿದ್ದಾರೆ. [ಭಾರತದ ಮುಸ್ಲಿಂ ಧರ್ಮಗುರುಗಳನ್ನು ಬಂಧಿಸಿದ ಪಾಕಿಸ್ತಾನ]

Donald Trumps's travel ban reeks of religious bias: Judge

ಡೊನಾಲ್ಡ್ ಟ್ರಂಪ್ ಹೇಳಿಕೆಗಳು ಧಾರ್ಮಿಕ ತಾರತಮ್ಯದಿಂದ ಕೂಡಿವೆ ಎಂದು ಆದೇಶ ನೀಡುವ ವೇಳೆ ನ್ಯಾಯಧೀಶರು ಉಲ್ಲೇಖಿಸಿದ್ದಾರೆ. ಮಾತ್ರವಲ್ಲ ಟ್ರಾವೆಲ್ ಬ್ಯಾನ್ ವಿಚಾರದಲ್ಲಿ ಸರಕಾರದ ಧೋರಣೆಗಳು ತರ್ಕಹೀನ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ವಾಷಿಂಗ್ಟನ್ ನ್ಯಾಯಾಲಯ ಕೂಡಾ ಟ್ರಾವೆಲ್ ಬ್ಯಾನ್ ಗೆ ತಡೆ ಒಡ್ಡಿತ್ತು. ಆ ಸಂದರ್ಭದಲ್ಲಿ ಅದು ಕೂಡಾ ಇದೇ ವಿಚಾರವನ್ನು ಉಲ್ಲೇಖಿಸಿತ್ತು.

ವಾಷಿಂಗ್ಟನ್ ಆದೇಶದ ನಂತರ ಸ್ವಲ್ಪ ಮಟ್ಟಿಗೆ ಟ್ರಾವೆಲ್ ಬ್ಯಾನ್ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಅಮೆರಿಕಾದ ಶಾಶ್ವತ ನಿವಾಸಿಗಳಾದ ಮುಸ್ಲಿಮರಿಗೆ ಮತ್ತು ಈಗಾಗಲೇ ವೀಸಾ ಹೊಂದಿರುವವರಿಗೆ ಈ ನಿಷೇಧ ಅನ್ವಯವಾಗುವುದಿಲ್ಲ ಎಂದು ಮಾರ್ಪಾಡು ಮಾಡಲಾಗಿತ್ತು. ಜತೆಗೆ ಇರಾಕನ್ನು ಇದರಿಂದ ಹೊರಗಿಡಲಾಗಿತ್ತು.

ಆದರೆ ಇದೀಗ ಪರಿಷ್ಕೃತ ನಿಯಮಕ್ಕೂ ಕೋರ್ಟ್ ತಡೆ ನೀಡಿದ್ದು ಟ್ರಂಪ್ ಗೆ ಭಾರಿ ಹಿನ್ನಡೆಯಾಗಿದೆ. ಇನ್ನೇನು ಟ್ರಾವೆಲ್ ಬ್ಯಾನ್ ಜಾರಿಯಾಗಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿ ಅಧ್ಯಕ್ಷರನ್ನು ಮುಖಭಂಗಕ್ಕೀಡು ಮಾಡಿದೆ. [ದೆವ್ವಗಳ ಕಾಟಕ್ಕೆ ಹೆದರಿ ಅಧಿಕೃತ ನಿವಾಸ ತೊರೆದ ಬ್ರೆಜಿಲ್ ಅಧ್ಯಕ್ಷ!!]

ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ನಂತರ ಇರಾಕ್, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ನಾಗರಿಕರಿಗೆ ದೇಶಕ್ಕೆ ಪ್ರವೇಶ ನಿರ್ಬಂಧಿಸಿದ್ದರು. ನಂತರ ಈ ಪಟ್ಟಿಯಿಂದ ಇರಾಕನ್ನು ಹೊರಗಿಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Donald Trump's comments suggests religious bias, a federal judge had said while lifting the travel ban. A federal judge in Hawaii on Thursday blocked US president Donald Trump's new travel ban. The order came up hours before the ban was set to go into effect.
Please Wait while comments are loading...