ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪೀಡಿತ ನಗರಕ್ಕೆ 3 ತಿಂಗಳ ನಂತರ ಹೊರಟಿದ್ದೇಕೆ ಆ ನಾಯಕ?

|
Google Oneindia Kannada News

ಬೀಜಿಂಗ್, ಮಾರ್ಚ್.10: ಕೊರೊನಾ ವೈರಸ್.. ಈ ಹೆಸರು ಕೇಳುತ್ತಿದ್ದಂತೆ ಮೊದಲ ಬಾರಿಗೆ ನೆನಪಿಗೆ ಬರುವುದೇ ಚೀನಾದ ವುಹಾನ್ ನಗರ. ಇದೇ ನಗರದಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಅದಾಗಿ 3 ತಿಂಗಳ ನಂತರದಲ್ಲಿ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಲಿದ್ದಾರೆ.

ಮಂಗಳವಾರ ಚೀನಾದಲ್ಲಿ 17 ಮಂದಿ ಕೊರೊನಾ ವೈರಸ್ ನಿಂದಾಗಿ ಪ್ರಾಣ ಬಿಟ್ಟಿದ್ದು, ಇದುವರೆಗೂ ಚೀನಾದಲ್ಲಿ ಮಾರಕ ಸೋಂಕಿಗೆ 3,136 ಮಂದಿ ಮೃತಪಟ್ಟಿದ್ದಾರೆ ಎಂದು ಚೀನಾದ ಆರೋಗ್ಯ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!

ಮಂಗಳವಾರ ಹುಬೈ ರಾಜಧಾನಿ ವುಹಾನ್ ನಗರಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಲಿದ್ದು, ಮೊದಲಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಗರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಕ್ಸಿಂಹುವಾ ಸುದ್ದಿಸಂಸ್ಥೆಯು ವರದಿ ಮಾಡಿದೆ.

Coronavirus: China President Xi Jinping First Visit To Wuhan City

ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ ಸರ್ವರಿಗೂ ಅಭಿನಂದನೆ:

ಚೀನಾದ ವುಹಾನ್ ನಗರದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸಿದ ಮತ್ತು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಸೇನಾಧಿಕಾರಿಗಳು ಮತ್ತು ಯೋಧರು, ಸಂಘ-ಸಂಸ್ಥೆಗಳ ಕಾರ್ಯಕರ್ತರು, ಪೊಲೀಸ್ ಅಧಿಕಾರಿಗಳು ಹಾಗೂ ಸ್ವಯಂತ ಸೇವಕರನ್ನು ಭೇಟಿ ಮಾಡಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎಲ್ಲರಿಗೂ ಅಭಿನಂದನೆ ಸಲ್ಲಿಸಲಿದ್ದಾರೆ.

ಚೀನಾದಲ್ಲಿ ಸೋಮವಾರದ ಅಂಕಿ-ಅಂಶಗಳ ಪ್ರಕಾರ 80,754 ಮಂದಿ ಸೋಂಕಿತರಿದ್ದು, 3,136 ಮಂದಿ ಕೊರೊನಾ ವೈರಸ್ ಗೆ ಪ್ರಾಣ ಬಿಟ್ಟಿದ್ದಾರೆ. 17, 721 ಸೋಂಕಿತರಿಗೆ ಐಸೋಲೆಟೆಡ್ ವಾರ್ಡ್ ಗಳಲ್ಲಿಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಇದುವರೆಗೂ ಚೀನಾದಲ್ಲಿ 59, 897 ಮಂದಿ ಕೊರೊನಾ ವೈರಸ್ ಪೀಡಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

English summary
China President Xi Jinping First Visit To Wuhan City After Coronavirus Outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X