ಚೀನಾದಲ್ಲಿ ರೆಸ್ಟೋರೆಂಟ್ ಕಟ್ಟಡ ಕುಸಿತ, 29 ಮಂದಿ ಸಾವು

ಬೀಜಿಂಗ್, ಆ. 30: ಚೀನಾದ ಕ್ಸಿಯಾಂಗ್ ಫೆನ್ ಕೌಂಟಿಯ ಶಾಂಕ್ಸಿ ಪ್ರಾಂತ್ಯದಲ್ಲಿ ನಾಲ್ಕು ಮಹಡಿ ರೆಸ್ಟೋರೆಂಟ್ ಕಟ್ಟಡದ ಎರಡು ಮಹಡಿ ಕುಸಿದ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೇರಿದೆ ಎಂದು ವರದಿ ಬಂದಿದೆ.

Recommended Video

      China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

      ಕ್ಸಿಯೂವಾ ವರದಿಯಂತೆ ವ್ಯಕ್ತಿಯೊಬ್ಬರ 80ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ರೆಸ್ಟೋರೆಂಟ್ ಬುಕ್ ಮಾಡಲಾಗಿತ್ತು. ಶನಿವಾರದಂದು ಕಟ್ಟಡ ಕುಸಿದಿದ್ದು, ಒಟ್ಟು 29 ಶವಗಳನ್ನು ಹೊರತೆಗೆಯಲಾಗಿದೆ. ಸುಮಾರು 700ಕ್ಕೂ ಅಧಿಕ ಮಂದಿ ಸದ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

      ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಒಟ್ಟು 57 ಮಂದಿಯನ್ನು ರಕ್ಷಿಸಲಾಗಿದೆ. 12 ಮಂದಿ ಗಾಯಗೊಂಡಿದ್ದು, 7 ಮಂದಿ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಸಿಜಿಟಿಎನ್ ವರದಿ ಮಾಡಿದೆ.

      At Least 29 Dead, Dozens Injured After Restaurant Collapses In China

      ಕಟ್ಟಡ ಕುಸಿತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಪ್ರಾಂತ್ಯದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎರಡು ಮಹಡಿಯನ್ನು ಅನುಮತಿ ಇಲ್ಲದೆ ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.

      ಮಾರ್ಚ್ ತಿಂಗಳಿನಲ್ಲಿ ಕ್ವಾಂಝ್ವಾಯು ಪ್ರಾಂತ್ಯದಲ್ಲಿ ಕಟ್ಟಡ ಕುಸಿತವಾಗಿ 29 ಮಂದಿ ಮೃತಪಟ್ಟು, 42 ಮಂದಿ ಗಾಯಗೊಂಡಿದ್ದರು. ಚೀನಾದ ಅಭಿವೃದ್ಧಿ ಆಕಾಂಕ್ಷಿ ಯೋಜನೆಗಳ ಫಲವಿದು, ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+