ಐಎಸ್ಐಎಸ್ ಸರ್ವನಾಶಕ್ಕೆ ಸಿದ್ಧರಾಗಿ: ಒಬಾಮಾ ಕರೆ
ವಾಷಿಂಗ್ಟನ್, ಜ.21: ಅಮೆರಿಕ ಸಂಯುಕ್ತ ಸಂಸ್ಥಾನದ 6ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅಧ್ಯಕ್ಷ ಬರಾಕ್ ಒಬಾಮಾ ಅವರು ಇರಾಕಿ ಉಗ್ರ ಸಂಘಟನೆ ವಿರುದ್ಧ ಕಿಡಿಕಾರಿದ್ದಾರೆ. ಐಎಸ್ಐಎಸ್ ಬಗ್ಗುಬಡಿಯಲು ಸನ್ನದ್ಧರಾಗಿ, ಉಗ್ರರ ಸರ್ವನಾಶ ಅಮೆರಿಕದ ಮೊದಲ ಗುರಿ ಎಂದು ಒಬಾಮಾ ಘೋಷಿಸಿದ್ದಾರೆ.
ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಸದೆಬಡಿಯಲು ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಜತೆ ಕೈ ಜೋಡಿಸಲು ಮುಂದೆ ಬರಬೇಕೆಂದು ಎಂದು ಒಬಾಮಾ ಕರೆ ನೀಡಿದರು. ಉಗ್ರ ಸಂಘಟನೆಯನ್ನು ಬೇರು ಸಮೇತ ಕಿತ್ತುಹಾಕಲು ಪಣ ತೊಟ್ಟಿರುವುದಾಗಿ ಹೇಳಿದ ಒಬಾಮಾ ತಮ್ಮ ಭಾಷಣದಲ್ಲಿ ಹೆಚ್ಚಿನ ಕಾಲ ಉಗ್ರರನ್ನು ಮಟ್ಟ ಹಾಕುವುದರ ಬಗ್ಗೆ ಹೇಳಿದರು. [ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ]
ಉಗ್ರರ ವಿರುದ್ಧ ಹೊಸ ಕಾನೂನು: ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಮೆರಿಕ ಕಾಂಗ್ರೆಸ್ ಹೊಸ ಕಾನೂನು ರೂಪಿಸಲಿ ಸಿದ್ಧವಾಗಿದೆ. ಈ ಬಗ್ಗೆ ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಇತರೆ ಸಂತ್ರಸ್ತ ರಾಷ್ಟ್ರಗಳ ನೆರವು ಅಗತ್ಯ. ಎಲ್ಲರೂ ಒಗ್ಗೂಟಿ ಈ ಪಿಡುಗನ್ನು ದೂರ ಮಾಡಬೇಕಿದೆ ಎಂದರು.

ಉಳಿದಂತೆ ಒಬಾಮಾ ಭಾಷಣದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಹೆಚ್ಚಳ, ಆರ್ಥಿಕ ನೀತಿ, ಶೈಕ್ಷಣಿಕ ಸಾಲ, ನಾಗರಿಕರ ಭದ್ರತೆ, ವಲಸೆ ನೀತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಹೊಸ ಯೋಜನೆಗಳು ಕೇಳಿ ಬಂದಿತು. [ಒಬಾಮಾ ವಾಪಸ್ ಹೋದ ಮೇಲೆ ದಾಳಿ ನಡೆಸಬಹುದೇ?]
ಆರ್ಥಿಕ ಭದ್ರತೆ: ಇಂಧನ, ಪವನ ವಿದ್ಯುತ್ ಸೇರಿದಂತೆ ನಾವು ಇಂದು ಹಲವು ಕ್ಷೇತ್ರಗಳಲ್ಲಿ ವಿಶ್ವದಲ್ಲೇ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡಿದೆ. ಅದರೆ, ಇಂಧನ ಹಾಗೂ ತೈಲ ಬೆಲೆ ವಿಷಯದಲಿ ಇನ್ನೂ ಸ್ವಾವಲಂಬನೆ ಸಾಧಿಸಿಲ್ಲ. ಹೊಸ ಆವಿಷ್ಕಾರ ಹಾಗೂ ಪರ್ಯಾಯ ಇಂಧನ ಬಳಕೆ ಹೆಚ್ಚಳ ಮೂಲಕ ಆರ್ಥಿಕ ಭದ್ರತೆ ಕಾಯ್ದುಕೊಳ್ಳಬಹುದು.
ನಿರುದ್ಯೋಗ ಇನ್ನಿಲ್ಲ: 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ನಿವಾರಣೆ ಮಾಡುವ ಆಶ್ವಾಸನೆ ಕೊಟ್ಟ ಒಬಾಮಾ ಅವರು ಕಾರ್ಮಿಗ ವರ್ಗಕ್ಕೆ ಹೊಸ ಯೋಜನೆ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಾಲ ಘೋಷಿಸಿದರು. [ಭಾರತದಲ್ಲಿ ಐಎಸ್ಐಎಸ್ ನಿಷೇಧ ಅಗತ್ಯವಿಲ್ಲವೇ?]
ವಿದೇಶಾಂಗ ವ್ಯವಹಾರ: ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳೊಂದಿಗೆ ಅಮೆರಿಕ ಉತ್ತಮ ವ್ಯವಹಾರ ಸಂಬಂಧ ಹೊಂದಿದೆ. ಇದರಲ್ಲಿ ವ್ಯಾಪಾರ ಮಾತ್ರವಲ್ಲ, ಸಾಂಸ್ಕೃತಿಕ, ಶೈಕ್ಷಣಿಕ ಸಂಬಂಧವೂ ಇದೆ. ಈ ಎರಡು ಖಂಡಗಳಲ್ಲಿ ಸೈಬರ್ ಅಪರಾಧಗಳು ಈಗ ಎಲ್ಲೆಡೆ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಬೇಕಾದ ತಾಂತ್ರಿಕ ನೆರವನ್ನು ನಾವು ನೀಡಲು ಸಿದ್ಧ ಎಂದರು.












Click it and Unblock the Notifications