ಜೈಲಿಂದ 15,000 ಕೈದಿಗಳು ಎಸ್ಕೇಪ್, Gen Z ಹೋರಾಟದ ಮಧ್ಯೆ ಓಡಿ ಹೋದ ಕಳ್ಳರು & ಕ್ರಿಮಿನಲ್ಸ್! Nepal Protest
ನೇಪಾಳ ಹೊತ್ತಿ ಉರಿಯುತ್ತಿದ್ದು, ಶ್ರೀರಾಮನ ಪತ್ನಿ ಸೀತಾಮಾತೆ ತವರು ಇದೀಗ ಹಿಂಸಾಚಾರದ ಬೆಂಕಿ ಹಿನ್ನೆಲೆ ನಲುಗಿ ಹೋಗಿದೆ. ಒಂದು ಕಡೆ ನೇಪಾಳ ಭ್ರಷ್ಟಾಚಾರದ ವಿರುದ್ಧ ಅಲ್ಲಿನ ಯುವತಿ & ಯುವಕರು ಹೋರಾಟ ಶುರು ಮಾಡಿದ ನಂತರ, ಪ್ರಧಾನಿ ಹಾಗೂ ರಾಷ್ಟ್ರಪತಿ ಕೂಡ ರಾಜೀನಾಮೆ ನೀಡಿದ್ದಾರೆ. ಈ ಘಟನೆ ನಂತರ ನೇಪಾಳ ತಣ್ಣಗೆ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ನೇಪಾಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಹೋಗಿದ್ದು, ಪ್ರತಿಭಟನೆ ನಡೆಸುತ್ತಿದ್ದವರು ನೇಪಾಳ ಸಂಸತ್ ಕಟ್ಟಡಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದರು. ಮತ್ತೊಂದು ಕಡೆ ನೇಪಾಳದ ಜೈಲಿಗೆ ಕೂಡ ನುಗ್ಗಿ ಅವಾಂತರ ಸೃಷ್ಟಿಸಿದ್ದಾರೆ.
ಅಂದಹಾಗೆ ನೇಪಾಳ ನೆಲದಲ್ಲಿ ಬೃಹತ್ ಹೋರಾಟ ಶುರು ಮಾಡಿದ್ದ Gen Z ತಲೆಮಾರಿನ ಯುವಕ & ಯುವತಿಯರು ಕಂಡ ಕಂಡ ಜಾಗದಲ್ಲಿ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದರು. ಅದರಲ್ಲೂ ಮಾಜಿ ಪ್ರಧಾನಿ ಹಾಗೂ ಮಾಜಿ ಸಚಿವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಹಾಲಿ ಜನಪ್ರತಿನಿಧಿಗಳ ಪಾಡು ಯಾರಿಗೂ ಬೇಡ ಎನ್ನುವಂತೆ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಘೋರ ಘಟನೆ ಕೂಡ, ಇದೀಗ ನೇಪಾಳದಲ್ಲಿ ಸಂಭವಿಸಿದೆ. ಪ್ರತಿಭಟನೆಯ ನಡುವೆ ಸುಮಾರು 15,000 ಕೈದಿಗಳು ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

15,000 ಕೈದಿಗಳು ಜೈಲಿಂದ ಎಸ್ಕೇಪ್!
ಹೌದು, ನೇಪಾಳ ದೇಶದಲ್ಲಿ ಪ್ರತಿಭಟನೆ ಶುರು ಮಾಡಿದ್ದ ಹೋರಾಟಗಾರರು ಜೈಲುಗಳನ್ನು ಕೂಡ ಬಿಟ್ಟಿಲ್ಲ. ಹೀಗಿದ್ದಾಗ ನೇರವಾಗಿ ಜೈಲಿಗೆ ನುಗ್ಗಿ ಅಲ್ಲಿದ್ದ ಕೈದಿಗಳನ್ನು ಕೂಡ ರಿಲೀಸ್ ಮಾಡಿದ್ದಾರೆ. ಕಳ್ಳರು, ಕೊಲೆಗಾರರು, ಕ್ರಿಮಿನಲ್ ಹಿನ್ನೆಲೆ ಇರುವ ಸುಮಾರು 15,000 ಕೈದಿಗಳು ಇದೇ ಸಮಯವನ್ನ ಬಳಸಿಕೊಂಡು ಇದೀಗ ನೇಪಾಳದ ಜೈಲುಗಳಿಂದ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಓಡಿ ಹೋಗಿರುವ ಜೈಲು ಹಕ್ಕಿಗಳ ಹುಡುಕಾಟಕ್ಕೆ ಇದೀಗ ಅಲ್ಲಿನ ಸೇನೆ ಮುಂದಾಗಿದೆ.
ಹೆಲಿಕಾಪ್ಟರ್ ಹತ್ತಿಕೊಂಡು ಸಚಿವ ಎಸ್ಕೇಪ್!
ಹೌದು, ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹಿಂಸಾಚಾರ ಪೀಡಿತ ನೇಪಾಳದ ಸಚಿವ ತನ್ನ ಕುಟುಂಬ ರಕ್ಷಣೆ ಮಾಡಿಕೊಳ್ಳಲು ನೇಪಾಳ ಸೇನೆಯ ಮೊರೆ ಹೋಗಿರುವುದು ಕಂಡು ಬಂದಿದೆ. ಇದೇ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಂದಹಾಗೆ ನೇಪಾಳ ದೇಶದ ಕಠ್ಮಂಡು ನಗರದ ಹೋಟೆಲ್ ಮೇಲಿಂದ ಸಚಿವರೊಬ್ಬರ ಕುಟುಂಬವನ್ನು, ನೇಪಾಳ ಸೇನೆಗೆ ಸೇರಿರುವ ಹೆಲಿಕಾಪ್ಟರ್ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುತ್ತಿರುವ ದೃಶ್ಯ ಜಗತ್ತಿನ ಮೂಲೆ ಮೂಲೆಯಲ್ಲೂ ವೈರಲ್ ಆಗುತ್ತಿದೆ. ಹಾಗೇ ಭ್ರಷ್ಟ ರಾಜಕಾರಣಿಗಳಿಗೆ ಇದು ಎಚ್ಚರಿಕೆ ಗಂಟೆಯಾಗಬೇಕು ಎಂಬ ಅಭಿಪ್ರಾಯವನ್ನು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications