ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ: 558ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ!
ಇಸ್ರೇಲ್ ಇದೀಗ ಲೆಬನಾನ್ ವಿರುದ್ಧ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚು ಮಾಡಿದ್ದು, ಈ ಮೂಲಕ ಹಿಜ್ಬುಲ್ಲಾ ವಿರುದ್ಧ ಸಮರ ಸಾರಿದೆ. ಆದರೆ ಈ ರೀತಿ ಇಸ್ರೇಲ್ ಸೇನೆ ನಡೆಸುತ್ತಿರುವ ಭೀಕರ ವಾಯು ದಾಳಿಗೆ ಸಾಮಾನ್ಯ ಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಇಷ್ಟೆಲ್ಲಾ ಗೊಂದಲಗಳು ಮೂಡಿರುವಾಗ ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು, ಇದೇ ಸಮಯದಲ್ಲಿ ಹಿಜ್ಬುಲ್ಲಾ ಬಂಡುಕೋರರ ಸಂಘಟನೆಯ ಕ್ಷಿಪಣಿ & ರಾಕೆಟ್ ವಿಭಾಗದ ಮುಖ್ಯಸ್ಥನನ್ನ ಇಸ್ರೇಲ್...
ಹೌದು, ಇಸ್ರೇಲ್ ಸಣ್ಣ ಸಣ್ಣ ವಿಚಾರಗಳಿಗೂ ದೊಡ್ಡ ದೊಡ್ಡ ದಾಳಿ ನಡೆಸುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಯಾವುದೋ ದೊಡ್ಡ ಯುದ್ಧಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಯಾಕಂದ್ರೆ ಇತ್ತೀಚೆಗೆ ತಾನೆ ಪೇಜರ್ಸ್ & ವಾಕಿಟಾಕಿ ಸ್ಫೋಟ ಮಾಡಿ ಲೆಬನಾನ್ ಹಾಗೂ ಸಿರಿಯಾಗೆ ಶಾಕ್ ಕೊಟ್ಟಿದ್ದ ಇಸ್ರೇಲ್ ಇದೀಗ ಮತ್ತೆ ದಾಳಿ ಆರಂಭಿಸಿದೆ.

ಲೆಬನಾನ್ ದೇಶದ ನೂರಾರು ಜಾಗಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆ. ಈ ಪೈಕಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಸದಸ್ಯರು ಹಾಗೂ ಮುಖಂಡರ ಕಥೆಯನ್ನೇ ಮುಗಿಸಿ ಹಾಕಲು ಇದೀಗ ಇಸ್ರೇಲ್ ಸಜ್ಜಾದಂತೆ ಕಾಣುತ್ತಿದೆ. ಹೀಗಾಗಿಯೇ ದಾಳಿ ತೀವ್ರತೆಯ ಪಡೆದುಕೊಂಡಿದೆ. ಹೀಗಾಗಿ ನೋಡ ನೋಡುತ್ತಲೇ ಲೆಬನಾನ್ ನೆಲದಲ್ಲಿ ಸಾವಿನ ಸಂಖ್ಯೆಯು 558ಕ್ಕೆ ಏರಿಕೆಯಾಗಿದ್ದು, ಹಿಜ್ಬುಲ್ಲಾದ ಮತ್ತೊಬ್ಬ ಕಮಾಂಡರ್ ಜೀವ ಹೋಗಿದೆ.
ಹಿಜ್ಬುಲ್ಲಾ ಕಮಾಂಡರ್ ಹತ್ಯೆ?
ಇಸ್ರೇಲ್ ಮಂಗಳವಾರ ಕೂಡ ಲೆಬನಾನ್ ದೇಶದ ಹಲವು ಪ್ರದೇಶಗಳ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ರೀತಿ ದಾಳಿ ಮಾಡುವಾಗಲೇ ಹಿಜ್ಬುಲ್ಲಾ ಸಂಘಟನೆಯ ಕಮಾಂಡರ್ ಕೂಡ ಬಲಿಯಾಗಿದ್ದು, ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಕ್ಷಿಪಣಿ & ರಾಕೆಟ್ ವಿಭಾಗದ ಮುಖ್ಯಸ್ಥ ಇಬ್ರಾಹಿಂ ಮೊಹಮ್ಮದ್ ಖಾಸಿ ಹೀಗೆ ಇಸ್ರೇಲ್ ನಡೆಸಿದ ದಾಳಿಗೆ ಬಲಿಯಾಗಿರುವ ಮಾಹಿತಿ ಸಿಕ್ಕಿದೆ. ಈ ಮೂಲಕ ಮತ್ತೊಮ್ಮೆ ಇಡೀ ಮಧ್ಯಪ್ರಾಚ್ಯ ಘೋರ ಗಲಾಟೆಗೆ ಸಿದ್ಧವಾಗಿದೆಯಾ? ಎಂಬ ಮುನ್ಸೂಚನೆ ಸಿಗುತ್ತಿದೆ.
ಜಗತ್ತಿಗೆ ಕಾಡುತ್ತಿದೆ ಯುದ್ಧದ ಭಯ
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಯುದ್ಧವನ್ನು ಬಿಟ್ಟು ಮಾತುಕತೆ ಮೂಲಕ ಶಾಂತಿಯುತ ರೀತಿಯಲ್ಲಿ ಸಮಸ್ಯೆ ಬಗೆಹರಿಯಲಿ ಎಂಬುದು ಜಾಗತಿಕ ಮಟ್ಟದಲ್ಲಿ ಕೇಳಿಬಂದಿರುವ ಒತ್ತಾಯ. ಆದರೆ ಈ ಒತ್ತಾಯಕ್ಕೆ ಯಾವುದೇ ಮನ್ನಣೆ ಸಿಗದೆ ತಿಕ್ಕಾಟ ಬಲು ಜೋರಾಗಿದ್ದು, ಸಾಮಾನ್ಯ ಜನರು ಜೀವ ಬಿಡುತ್ತಿದ್ದಾರೆ ಎಂಬ ಆಕ್ರೋಶ ಕೂಡ ಮೊಳಗುತ್ತಿದೆ. ಹೀಗಾಗಿ ಮುಂದೆ ಇದೇ ವಿಚಾರ ದೊಡ್ಡ ತಿರುವು ಪಡೆದು ಘೋರ ಯುದ್ಧಕ್ಕೆ ನಾಂದಿ ಹಾಡುವ ಭಯ ಕೂಡ ಈಗ ಕಾಡುತ್ತಿದೆ.












Click it and Unblock the Notifications