Israel: ಗಾಜಾ ವಿರುದ್ಧ ಮತ್ತೆ ಕೆಂಗಣ್ಣು ಬೀರಿದ ಇಸ್ರೇಲ್ ಸೇನೆ!
ಗಾಜಾ ಪಟ್ಟಿ ಮತ್ತೊಮ್ಮೆ ನಲುಗಿ ಹೋಗಿದ್ದು, ಇಸ್ರೇಲ್ ಮಿಲಿಟರಿ ತನ್ನ ದಾಳಿಯನ್ನ ಇನ್ನಷ್ಟು ಭೀಕರಗೊಳಿಸಿದೆ ಎಂದು ಆರೋಪ ಮಾಡಲಾಗಿದೆ. ಕಳೆದ ಹತ್ತು ತಿಂಗಳಿಂದ ಇದೇ ರೀತಿ ಗಾಜಾ ಹಾಗೂ ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಹೀಗಿದ್ದಾಗಲೇ ಇಸ್ರೇಲ್ ಸೇನೆ ತನ್ನ ದಾಳಿಯ ಸ್ವರೂಪವನ್ನ ಮತ್ತಷ್ಟು ಭೀಕರಗೊಳಿಸಿದ್ದು, ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗಾಜಾ ಪಟ್ಟಿ ಜನರಿಗೆ ಜೀವ & ಜೀವನದ ಮೇಲೆ ನಂಬಿಕೆಯೇ ಕಳೆದು ಹೋಗಿದೆ. ಯಾಕಂದ್ರೆ ಹಮಾಸ್ & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಗಾಜಾ ನಗರವೇ ನಾಶವಾಗಿ ಹೋಗುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ, ಮತ್ತೊಮ್ಮೆ ಭೀಕರ ದಾಳಿ ಆರಂಭ ಮಾಡಿದೆ ಇಸ್ರೇಲ್ ಸೇನೆ. ಗಾಜಾ ಪಟ್ಟಿ ನಗರದ ಬೇರೆ ಬೇರೆ ಭಾಗ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿರುವ ಇಸ್ರೇಲ್ ಸೇನೆ, ಸಾವಿರಾರು ಜನರ ಸಾವಿಗೂ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಯುದ್ಧವು ಭಾರಿ ಸಂಚಲನ ಸೃಷ್ಟಿ ಮಾಡುತ್ತಿದೆ.

ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ?
ಇಸ್ರೇಲ್ & ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಅಮೆರಿಕದ ಬುಡಕ್ಕೂ ನಡುಕ ತಂದಿದೆ. ಯಾಕಂದ್ರೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಒಂದು ರೀತಿ ನಿಲುವು ಹೊಂದಿರುವ ಇದೇ ಅಮೆರಿಕ, ಇದೀಗ ಇಸ್ರೇಲ್ & ಗಾಜಾ ಯುದ್ಧದಲ್ಲಿ ಮಾತ್ರ ಬೇರೆ ರೀತಿ ವರ್ತಿಸುತ್ತಿದೆ ಎಂಬ ಆರೋಪ ಇದೆ. ಈ ಕಾರಣಕ್ಕೆ ಅಮೆರಿಕ ವಿರುದ್ಧ ಆರೋಪಗಳು ಹಾಗೂ ಆಕ್ರೋಶ ಕೂಡ ಕೇಳಿಬರುತ್ತಿದೆ. ಇಂತಹ ಸಮಯದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಧ್ಯಪ್ರಾಚ್ಯಕ್ಕೆ ಓಡೋಡಿ ಬಂದಿದ್ದಾರೆ ಎನ್ನಲಾಗಿದೆ.
ಯುದ್ಧ ನಿಲ್ಲಿಸಲು ಸರ್ವ ಪ್ರಯತ್ನ
ಇಸ್ರೇಲ್ & ಗಾಜಾ ನಡುವಿನ ಯುದ್ಧ ನಿಲ್ಲಿಸಿದರೆ ಒಂದಷ್ಟು ಸಮಸ್ಯೆ ತಣ್ಣಗಾಗುತ್ತೆ. ಇದೇ ಕಾರಣಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದು, ಶೀಘ್ರದಲ್ಲೇ ಶಾಂತಿ ಮಾತುಕತೆ ಮಾಡಿಸಿ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. ಜಾಗತಿಕವಾಗಿ ಕೂಡ ಈ ಯುದ್ಧ ಭಾರಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ.
ಹೀಗಾಗಿ ಇಸ್ರೇಲ್ & ಗಾಜಾ ಯುದ್ಧಕ್ಕೆ ಬ್ರೇಕ್ ಹಾಕಿ ಶಾಂತಿ ಕಾಪಾಡಿದರೆ ಸಮಸ್ಯೆ ಬಗೆಹರಿಯುತ್ತೆ ಎಂಬ ಚಿಂತನೆ ಇದೆ. ಹೀಗಾಗಿಯೇ ಅಮೆರಿಕ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಆದರೆ ಯುದ್ಧ ನಿಲ್ಲಿಸಲು ಇಸ್ರೇಲ್ ಮತ್ತು ಹಮಾಸ್ ಒಪ್ಪಿಕೊಳ್ಳುತ್ತವಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೂ ವೇದಿಕೆ ಒದಗಿಸಿದೆ.












Click it and Unblock the Notifications