ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ಸುದ್ದಿ: ಡೆಡ್ಲಿ ಕೊರೊನಾನ ಬಗ್ಗುಬಡಿದು, ಸಾವನ್ನೇ ಗೆದ್ದ 113 ರ ಅಜ್ಜಿ!

|
Google Oneindia Kannada News

ಮ್ಯಾಡ್ರಿಡ್, ಮೇ 13: ಮಾರಣಾಂತಿಕ ಕೊರೊನಾ ವೈರಸ್ ಗೆ ವಿಶ್ವದಾದ್ಯಂತ ಇಲ್ಲಿಯವರೆಗೂ 2,92,893 ಮಂದಿ ಬಲಿಯಾಗಿದ್ದಾರೆ. 43,42,685 ಜನರಿಗೆ ಈವರೆಗೂ ಸೋಂಕು ತಗುಲಿದೆ. ಕೋವಿಡ್-19 ನಿಂದ ಮೃತಪಟ್ಟವರ ಪೈಕಿ 60 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚು ಎಂದು ಹೇಳಲಾಗಿದೆ.

Recommended Video

ತುಮಕೂರಿನ ಗಾರ್ಮೆಂಟ್ಸ್‌ ಕಾರ್ಖಾನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಹಲ್ಲೆ | Tumkur | Oneindia Kannada

ಹೀಗಿದ್ದರೂ, ಸ್ಪೇನ್ ನಲ್ಲಿ ಒಂದು ಅಚ್ಚರಿ ನಡೆದಿದೆ. ಹೇಳಿ ಕೇಳಿ ಸ್ಪೇನ್ ಡೆಡ್ಲಿ ಕೊರೊನಾ ವೈರಸ್ ನಿಂದ ಜರ್ಜರಿತವಾಗಿದೆ. ಸ್ಪೇನ್ ನಲ್ಲಿ ಇಲ್ಲಿಯವರೆಗೂ 26,920 ಮಂದಿ ಕೋವಿಡ್-19 ನಿಂದ ಜೀವ ಬಿಟ್ಟಿದ್ದಾರೆ. ಅಂಥದ್ರಲ್ಲಿ 113 ವರ್ಷ ವಯಸ್ಸಿನ ಓರ್ವ ಅಜ್ಜಿ, ಕೊರೊನಾ ವೈರಸ್ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ.!

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

ಹೌದು, ಹಾಗ್ನೋಡಿದ್ರೆ ಈ 113 ವರ್ಷದ ಅಜ್ಜಿ ಸ್ಪೇನ್ ನಲ್ಲಿ ವಾಸಿಸುತ್ತಿರುವ ಅತ್ಯಂತ ಹಿರಿಯ ಜೀವ. ಇಳಿವಯಸ್ಸಿನಲ್ಲೂ ಆರೋಗ್ಯ ಕಾಪಾಡಿಕೊಂಡು ಕೊರೊನಾ ವೈರಸ್ ಅನ್ನೇ ಬಗ್ಗುಬಡಿದಿದ್ದಾರೆ ಈ ಅಜ್ಜಿ.!

ಸಾವು-ಬದುಕಿನ ಹೋರಾಟದಲ್ಲಿ ಗೆದ್ದ ಅಜ್ಜಿ.!

ಸಾವು-ಬದುಕಿನ ಹೋರಾಟದಲ್ಲಿ ಗೆದ್ದ ಅಜ್ಜಿ.!

ಅಂದ್ಹಾಗೆ, ಕೋವಿಡ್-19 ರೋಗ ಗೆದ್ದ 113 ವರ್ಷ ವಯಸ್ಸಿನ ಅಜ್ಜಿಯ ಹೆಸರು ಮಾರಿಯಾ ಬ್ರಾನ್ಯಾಸ್. 'Santa Maria Del Tura' ಕೇರ್ ಹೋಮ್ ನಲ್ಲಿ ವಾಸಿಸುತ್ತಿದ್ದ ಮಾರಿಯಾ ಬ್ರಾನ್ಯಾಸ್ ಗೆ ಏಪ್ರಿಲ್ ತಿಂಗಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿತ್ತು. ವಾರಗಳ ಕಾಲ ಐಸೊಲೇಷನ್ ರೂಮ್ ನಲ್ಲಿದ್ದು, ಚಿಕಿತ್ಸೆ ಪಡೆದಿದ್ದ ಮಾರಿಯಾ ಬ್ರಾನ್ಯಾಸ್ ಇದೀಗ ಕೋವಿಡ್-19 ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!

ಕೊರೊನಾ ಹೋರಾಟದಲ್ಲಿ ಯಶ ಕಂಡ ಮಾರಿಯಾ ಬ್ರಾನ್ಯಾಸ್

ಕೊರೊನಾ ಹೋರಾಟದಲ್ಲಿ ಯಶ ಕಂಡ ಮಾರಿಯಾ ಬ್ರಾನ್ಯಾಸ್

ಅಸಲಿಗೆ, 'Santa Maria Del Tura' ಕೇರ್ ಹೋಮ್ ನಲ್ಲಿ ವಾಸಿಸುತ್ತಿದ್ದ ಹಲವರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಕೊರೊನಾ ವೈರಸ್ ವಿರುದ್ಧ ಹೋರಾಡಲು ಆಗದೆ, ಕೇರ್ ಹೋಮ್ ನಲ್ಲಿದ್ದ ಹಲವು ಹಿರಿಯರು ಮೃತಪಟ್ಟಿದ್ದರು. ಜೊತೆಯಲ್ಲಿ ವಾಸಿಸುತ್ತಿದ್ದ ಅನೇಕರು ಮೃತಪಟ್ಟರೂ, 113 ವರ್ಷ ವಯಸ್ಸಿನ ಮಾರಿಯಾ ಬ್ರಾನ್ಯಾಸ್ ಕಂಗಡೆಲಿಲ್ಲ. ಗಟ್ಟಿ ಮನಸ್ಸು ಮಾಡಿದ ಮಾರಿಯಾ ಬ್ರಾನ್ಯಾಸ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಶ ಕಂಡಿದ್ದಾರೆ.

'ಅದೃಷ್ಟವಂತೆ' ಮಾರಿಯಾ

'ಅದೃಷ್ಟವಂತೆ' ಮಾರಿಯಾ

ತಮ್ಮ ದೀರ್ಘ ಆಯಸ್ಸಿನ ರಹಸ್ಯವೇನು ಅಂತ ಕೇಳಿದರೆ, ''ಉತ್ತಮ ಆರೋಗ್ಯ ಪಡೆದಿರುವ ನಾನು ಅದೃಷ್ಟವಂತೆ'' ಎನ್ನುತ್ತಾರಂತೆ ಮಾರಿಯಾ ಬ್ರಾನ್ಯಾಸ್. ''ಸದ್ಯಕ್ಕೆ ರೋಗದಿಂದ ಚೇತರಿಸಿಕೊಂಡು ಮಾರಿಯಾ ಬ್ರಾನ್ಯಾಸ್ ಆರೋಗ್ಯವಾಗಿದ್ದಾರೆ. ಕಳೆದ ವಾರ ಪರೀಕ್ಷೆ ಮಾಡಿದಾಗ, ಅವರಲ್ಲಿ ಕೋವಿಡ್-19 ನೆಗೆಟಿವ್ ಕಂಡುಬಂದಿದೆ'' ಎಂದು ಕೇರ್ ಹೋಮ್ ನವರು ತಿಳಿಸಿದ್ದಾರೆ.

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

20 ವರ್ಷಗಳಿಂದ ಕೇರ್ ಹೋಮ್ ನಲ್ಲಿ ವಾಸ

20 ವರ್ಷಗಳಿಂದ ಕೇರ್ ಹೋಮ್ ನಲ್ಲಿ ವಾಸ

1907, ಮಾರ್ಚ್ 4 ರಂದು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಹುಟ್ಟಿದ ಮಾರಿಯಾ ಬ್ರಾನ್ಯಾಸ್, ಕುಟುಂಬದ ಜೊತೆಗೆ ಮೊದಲನೇ ಮಹಾಯುದ್ಧದ ಸಮಯದಲ್ಲಿ ಸ್ಪೇನ್ ಗೆ ಆಗಮಿಸಿದ್ದರು. 1918-1919 ನಲ್ಲಿ ಬಂದ ಮಾರಣಾಂತಿಕ ಸ್ಪಾನಿಶ್ ಫ್ಲೂ ಮತ್ತು 1936-39 ವರೆಗೂ ನಡೆದ ಸಿವಿಲ್ ವಾರ್ ಸನ್ನಿವೇಶವನ್ನ ಮಾರಿಯಾ ಬ್ರಾನ್ಯಾಸ್ ಕಣ್ಣಾರೆ ಕಂಡಿದ್ದಾರೆ. ಮೂವರು ಮಕ್ಕಳ ತಾಯಿ ಆಗಿರುವ ಮಾರಿಯಾ ಬ್ರಾನ್ಯಾಸ್, ಕಳೆದ 20 ವರ್ಷಗಳಿಂದ ಕೇರ್ ಹೋಮ್ ನಲ್ಲಿ ವಾಸಿಸುತ್ತಿದ್ದಾರೆ.

English summary
113 year old Spanish Woman Maria Branyas survives Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X