ಬಿಜೆಪಿ-ಟಿಡಿಪಿ ಬಿಕ್ಕಟ್ಟು: ಚಂದ್ರಬಾಬು ನಾಯ್ಡು ಹೊಸ ವರಸೆ
Recommended Video

ಗುಂಟೂರು, ಮಾರ್ಚ್ 30: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡ ಟಿಡಿಪಿ(ತೆಲುಗು ದೇಶಂ ಪಕ್ಷ) ಇದೀಗ ಹೊಸ ವರಸೆ ಆರಂಭಿಸಿದೆ. ಆಂಧ್ರ ವಿಭಜನೆಯ ಸಮಯದಲ್ಲಿ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಬಹುಶಃ 15 ಕ್ಕೂ ಹೆಚ್ಚು ಹೆಚ್ಚುವರಿ ಕ್ಷೇತ್ರಗಳಲ್ಲಿ ಜಯಗಳಿಸುತ್ತಿದ್ದೆವು ಎನ್ನುವ ಮೂಲಕ ಬಿಜೆಪಿ ಮೇಲೆ ಮತ್ತೊಮ್ಮೆ ಗೂಬೆ ಕೂರಿಸಿದೆ!
"ಆಂಧ್ರ ವಿಭಜನೆಯ ನಂತರ ನಾವು ಬಿಜೆಪಿ ಜೊತೆ ಮೈತ್ರಿ ಸಾಧಿಸಿದ್ದೆವು. ಅದು ರಾಜಕೀಯ ಉದ್ದೇಶದಿಂದ ಅಲ್ಲ. ಆದರೆ ಆಂಧ್ರದ ಅಭಿವೃದ್ಧಿಯ ಉದ್ದೇಶದಿಂದ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೆವು. ಅವರೊಂದಿಗೆ ಮೈತ್ರಿ ಸಾಧಿಸದೆ ಇದ್ದಲ್ಲಿ ನಾವು 15 ಹೆಚ್ಚುವರಿ ಸ್ಥಾನ ಗಳಿಸುತ್ತಿದ್ದೆವು. ನಮಗೆ ವಿಶೇಷ ಸ್ಥಾನಮಾನ ನೀಡುತ್ತೇವೆ ಎಂದು ಅವರು ನಮಗೆ ಮೋಸ ಮಾಡಿಬಿಟ್ಟರು" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಗುಂಟೂರಿನಲ್ಲಿ ನಡೆದ ಟಿಡಿಪಿಯ 37 ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಆರೋಪಿಸಿದ ಅವರು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇನೆಂದ ಕೇಂದ್ರ ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ತಾನೇ ಎನ್ ಡಿಎ ಮೈತ್ರಿಕೂಟದಿಂದ ಮೈತ್ರಿ ಕಡಿದುಕೊಂಡ ಟಿಡಿಪಿ ದಿನ ದಿನವೂ ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ವಾಗ್ಸಮರ ನಡೆಸುತ್ತಿದೆ.












Click it and Unblock the Notifications