ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲೇ! ಚೀನಾ, ಅಮೆರಿಕವನ್ನು ಹಿಂದಿಕ್ಕಿದ ಭಾರತ

By Srinath
|
Google Oneindia Kannada News

World investment destination India steps ahead of US and China
ನವದೆಹಲಿ, ನ.25: ಅನೇಕ ರಾಜಕೀಯ ಅಪವ್ಯಸನ/ ಭ್ರಷ್ಟಾಚಾರಗಳ ನಡುವೆಯೂ ಭಾರತ ಮುಂಚೂಣಿಯಲ್ಲಿದೆ. ಅದರಲ್ಲೂ ಆರ್ಥಿಕಾಭಿವೃದ್ಧಿಗೆ ಪೂರಕವಾದಂತಹ ಚೇತೋಹಾರಿ ಸಮೀಕ್ಷಾ ವರದಿಯೊಂದು ಹೊರಬಿದ್ದಿದ್ದು, ಬಲಾಢ್ಯ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಅಮೆರಿಕವನ್ನು ಹಿಂದಿಕ್ಕಿದ ಭಾರತವು ವಿಶ್ವದ ಆಕರ್ಷಕ ಹೂಡಿಕೆಯ ತಾಣವಾಗಿ ಹೊರಹೊಮ್ಮಿದೆ.

ಜಾಗತಿಕ ಸಲಹಾ ಸಂಸ್ಥೆ Ernst & Young (EY) ನಡೆಸಿರುವ ಸಮೀಕ್ಷೆಯಿಂದ ಈ ಅಂಶ ದೃಢಪಟ್ಟಿದೆ. ಭಾರತದ ನಂತರ ಬ್ರೆಜಿಲ್ ಮತ್ತು ಚೀನಾ ಕ್ರಮವಾಗಿ ನಂತರದ ಸ್ಥಾನಗಳನ್ನು ಅಲಂಕರಿಸಿವೆ. ಕೆನಡಾ ನಾಲ್ಕನೇ ಸ್ಥಾನದಲ್ಲಿದ್ದರೆ ಅಮೆರಿಕಕ್ಕೆ 5ನೇ ಸ್ಥಾನ!

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯದ ತೀವ್ರ ಕುಸಿತದ ನಡುವೆಯೂ ವಿವಿಧ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರಿಗೆ ಭಾರತ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ ಎಂದು 'ಅರ್ನೆಸ್ಟ್ ಅಂಡ್ ಯಂಗ್' ಸಮೀಕ್ಷಾ ವರದಿ ತಿಳಿಸಿದೆ.

ಇದಕ್ಕೆ ತದ್ವಿರುದ್ಧವಾಗಿ, ಭಾರತದ ಕಂಪನಿಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳತ್ತ ಮುಖ ಮಾಡುತ್ತಿವೆ. ಭಾರತೀಯ ಕಂಪನಿಗಳ ಸಂಭಾವ್ಯ ಹೂಡಿಕೆಯ ಪಟ್ಟಿಯಲ್ಲಿ ಬ್ರಿಟನ್ ಮತ್ತು ಜರ್ಮನಿಯ ಹೆಸರುಗಳಿವೆ.

ಬೆಂಚ್‌ ಮಾರ್ಕ್ ಸೆನ್ಸೆಕ್ಸ್ ಭಾರಿ ಕುಸಿತ: ಆದರೆ ಮುಂಬಯಿ ಷೇರು ಮಾರುಕಟ್ಟೆಯ ಕಳೆದ ವಾರದ ವಹಿವಾಟಿನಲ್ಲಿ ಟಿಸಿಎಸ್, ಐಟಿಸಿ ಮತ್ತು ಕೋಲ್ ಇಂಡಿಯಾ ನೇತೃತ್ವದಲ್ಲಿ 7 ಕಂಪನಿಗಳು ಒಟ್ಟಾರೆ 19,266 ಕೋಟಿ ರೂ. ನಷ್ಟ ಅನುಭವಿಸಿವೆ. ಬೆಂಚ್‌ ಮಾರ್ಕ್ ಸೆನ್ಸೆಕ್ಸ್ ಕಳೆದ ವಾರ ಶೇ.0.9ರಷ್ಟು ಕುಸಿತ ದಾಖಲಿಸಿದ್ದೇ ಈ ಬ್ಲೂಚಿಪ್ ಕಂಪನಿಗಳ ಮಾರುಕಟ್ಟೆ ಬಂಡವಾಳ ಕುಸಿಯಲು ಕಾರಣವಾಗಿದೆ.

ಕಳೆದ ಆಗಸ್ಟಿನಲ್ಲಿ ಕೇಂದ್ರ ಸರಕಾರ ದೂರಸಂಪರ್ಕ, ಬಹು ಬ್ರಾಂಡ್ ಬಿಡಿಭಾಗ ಮಾರಾಟ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯ ನಿಯಮಗಳನ್ನು ಸಡಿಲಿಸಿತ್ತು.

ಭಾರತದಲ್ಲಿನ ಸದ್ಯದ ಬೃಹತ್ ಅರ್ಥ ವ್ಯವಸ್ಥೆಯ ಒತ್ತಡ ಮತ್ತು ಭಾರಿ ಸಾಲದ ಹೊರೆಯಿಂದಾಗಿ ಹಲವಾರು ಭಾರತೀಯ ಕಂಪನಿಗಳು ಬಂಡವಾಳ ಹಿಂತೆಗೆಯಲು ಗಮನ ಹರಿಸುತ್ತಿವೆ. ಹೀಗಾಗಿ ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆಗೆ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆ ಹೇಳಿದೆ. ಭಾರತದಲ್ಲಿ ಹೂಡಿಕೆಯ ವಿಷಯಕ್ಕೆ ಬಂದಾಗ ಇಲ್ಲಿನ ಆಟೊಮೊಬೈಲ್, ತಂತ್ರಜ್ಞಾನ, ಜೀವ ವಿಜ್ಞಾನ ಮತ್ತು ಗ್ರಾಹಕ ಉತ್ಪನ್ನಗಳ ವಲಯಗಳು ಹೂಡಿಕೆಯ ಆಕರ್ಷಕ ಕ್ಷೇತ್ರಗಳಾಗಿವೆ.

English summary
World investment destination India steps ahead of US and China. Global consultancy firm Ernst & Young (EY) has said that India is the most attractive investment destination, ahead of China and the US, after the government recently relaxed the policy on foreign investment. The government had in August announced relaxation of foreign direct investment (FDI) norms in several sectors that such as multi-brand retail and telecom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X