Infosys Narayana Murthy: ಕೆಲಸದ ಅವಧಿಯ ಬಗ್ಗೆ ಇನ್ಫೋಸಿಸ್ ನಾರಾಯಣ ಮೂರ್ತಿ ಹೊಸ ಹೇಳಿಕೆ!
Infosys Narayana Murthy: ನಿಮಗೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಿಕೊಳ್ಳಿ.. ನನ್ನನ್ನ ಬಿಟ್ಟು ಬಿಡಿ ಎನ್ನುವಂತೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಮಾತನಾಡಿದ್ದಾರೆ. ಕೆಲಸದ ಅವಧಿಯ ಬಗ್ಗೆ ಅವರು ಮಾತನಾಡಿದ್ದ ಮಾತುಗಳು ಭಾರೀ ವೈರಲ್ ಆಗಿದ್ದವು. ಇದು ವಿವಾದ ಹಾಗೂ ಟ್ರೋಲ್‌ಗೂ ಕಾರಣವಾಗಿತ್ತು. ವಾರಕ್ಕೆ ಕನಿಷ್ಠ 70 ಗಂಟೆಯಾದರೂ ಕೆಲಸ ಮಾಡಬೇಕು ಅಂತ ಹೇಳಿದ್ದಕ್ಕೆ ಜನ ಕೆಂಡಾಮಂಡಲರಾಗಿದ್ದರು. ಇದೀಗ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಅವರ 70 ಗಂಟೆ ಕೆಲಸದ ಅವಧಿ ಹೇಳಿಕೆಯಿಂದ ಏಕಾಏಕಿ ಯೂಟರ್ನ್ ತೆಗೆದುಕೊಂಡಿದ್ದು. ಕೆಲಸದ ಅವಧಿಯ ಬಗ್ಗೆ ಹೊಸ ಹೇಳಿಕೆ ಕೊಟ್ಟಿದ್ದಾರೆ. ಇದು ಮಜವಾಗಿದೆ.. ಜನ ಕೂಡ ಇದು ಇದು ಚೆನ್ನಾಗಿರೋದು ಅಂತಿದ್ದಾರೆ. ಇಷ್ಟಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಕೆಲಸದ ಅವಧಿಯ ಹೊಸ ಹೇಳಿಕೆಯಲ್ಲಿ ಏನಿದೆ ನೋಡೋಣ..
ವಾರಕ್ಕೆ 70 ಗಂಟೆಗಳ ಕೆಲಸ ಮಾಡಿ ಅಂತ ಹೇಳುವ ಮೂಲಕ ಯುವಕ ಹಾಗೂ ಯುವತಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್ ನಾರಾಯಣ ಮೂರ್ತಿ ಅವರು ಕೊನೆಗೂ ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡಿದ್ದಾರೆ. ಯಾರಿಗೂ ಕೂಡ ಜಾಸ್ತಿ.. ಜಾಸ್ತಿ ಕೆಲಸ ಮಾಡಿ ಅಂತ ಹೇಳುವುದಕ್ಕೆ ಆಗಲ್ಲ. ಎಷ್ಟು ಸಮಯ ಕೆಲಸ ಮಾಡಬೇಕು ಅನ್ನೋದು ಅವರವರ ವಿವೇಚನೆ ಹಾಗೂ ಆಸಕ್ತಿಗೆ ಬಿಟ್ಟಿದ್ದು ಅಂತ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಾರಾಯಣ ಮೂರ್ತಿ ಅವರು 70 ಗಂಟೆ ವಾರಕ್ಕೆ ಕೆಲಸ ಮಾಡಬೇಕು ಅಂತ ಹೇಳುವ ಹೇಳಿಕೆಯಿಂದ ಈಗ ಏಕಾಏಕಿ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಅಂತ ಹೇಳುವುದಕ್ಕೆ ಅವರ ಹೇಳಿಕೆಗೆ ವ್ಯಕ್ತವಾದ ವಿರೋಧ. ಅಲ್ಲದೆ ಟ್ರೋಲ್‌ಗಳೇ ಕಾರಣ ಅಂತಲೂ ಹೇಳಲಾಗುತ್ತಿದೆ. ಯಾಕೆಂದರೆ ಇತ್ತೀಚೆಗೆ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ನಾನು ಸಾಯುವವರೆಗೂ ಇದನ್ನೇ ಹೇಳುತ್ತೇನೆ ಎಂದೆಲ್ಲ ಹೇಳಿದ್ದರು. ಆದರೆ ಇದೀಗ ಯೂಟರ್ನ್ ತೆಗೆದುಕೊಂಡಿದ್ದಾರೆ.
ನಾನು 40 ವರ್ಷ ಹಿಂಗೇ ಕೆಲಸ ಮಾಡಿದ್ದೆ!
ಇನ್ನು ಅವರು ಒಂದೇ ಸಲ ನಿಮಗೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಿ ಅಂತ ಸುಮ್ಮನೆ ಹೇಳಿಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಂತಲೂ ಹೇಳಿದ್ದಾರೆ. ಈ ಮೂಲಕ ಅವರು ನಿಮ್ಮ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಮುಂದುವರಿದು ನಾನು ಬರೋಬ್ಬರಿ 40 ವರ್ಷ ವಾರದಲ್ಲಿ 70 ಇಲ್ಲ ಅದಕ್ಕಿಂತ ಜಾಸ್ತಿನೇ ಕೆಲಸ ಮಾಡಿದ್ದೇನೆ. ಬೆಳಗ್ಗೆ ಹೋದರೆ ನಾನು ಮನೆಗೆ ಬರ್ತಿದಿದ್ದು ರಾತ್ರಿಗೇ. ಈಗ ಅದೆಲ್ಲ ಚರ್ಚೆ ಮಾಡುವ ವಿಷಯವೇ ಅಲ್ಲ ಎಂದಿದ್ದಾರೆ.

ನೀವು ಇದನ್ನು ಮಾಡಬೇಕು, ಅದನ್ನು ಮಾಡಬಾರದು ಅಂತ ಹೇಳುವುದಕ್ಕೆ ಯಾರಿಂದಲೂ ಆಗಲ್ಲ. ಆ ರೀತಿ ಹೇಳುವವರು ಯಾರೂ ಇಲ್ಲ. ಆದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಎಲ್ಲರೂ ಜಾಸ್ತಿ ಕೆಲಸ ಮಾಡಿ ಅಂತ ಹೇಳೋಕೆ ಆಗಲ್ಲ. ಆದರೆ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಠಿಣ ಪರಿಶ್ರಮ ಯಾಕೆ ಬೇಕು ಅಂತ ಅರ್ಥ ಮಾಡಿಕೊಂಡರೆ ಸಾಕು ಅಂತ ಅವರ ಭಾಷಣದ ಕೊನೆಯಲ್ಲಿ ಸೇರಿಸಿದ್ದಾರೆ. ಈ ಮೂಲಕ ಅವರು ಒಲ್ಲದ ಮನಸ್ಸಿನಿಂದ ಹಾಗೂ ಒತ್ತಾಯದಿಂದ ಅವರ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ ಅಂತ ಜನ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಜನ ಸ್ವಾಗತಿಸಿದ್ದಾರೆ.
ಟ್ರೋಲ್‌ನಿಂದ ಬೇಸತ್ತಿದ್ದರು: ಇನ್ನು ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಯುವಕರು ವಾರಕ್ಕೆ ಕನಿಷ್ಠ 70 ಗಂಟೆ ಕೆಲಸ ಮಾಡಬೇಕು ಎನ್ನುವ ಹೇಳಿಕೆ ಕೊಟ್ಟ ಮೇಲೆ ಭಾರೀ ಟ್ರೋಲ್ ಹಾಗೂ ಟೀಕೆಗೆ ಗುರಿಯಾಗಿದ್ದರು. ಇದೀಗ 90 -70 ಗಂಟೆ ಕೆಲಸ ಮಾಡಬೇಕು ಎನ್ನುವ ಚರ್ಚೆಗಳ ನಡುವೆ ಅವರು ಈ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.












Click it and Unblock the Notifications