2019 ರಲ್ಲಿ ಶೇ. 55 ಮತಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ : ಸಮೀಕ್ಷೆ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 30: 2019ರಲ್ಲಿ ಶೇಕಡಾ 55, ಮತಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯ ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಒಂದೊಮ್ಮೆ ಬಿಜೆಪಿ ಇಷ್ಟು ಮತ ಗಳಿಸಿದ್ದೇ ಆದಲ್ಲಿ ಸ್ವಾತಂತ್ರ್ಯ ನಂತರ ಕೇವಲ ಎರಡನೇ ಬಾರಿಗೆ ಪಕ್ಷವೊಂದು ಶೇಕಡಾ 50ಕ್ಕಿಂತಲೂ ಹೆಚ್ಚಿನ ಮತ ಗಳಿಸಿದಂತಾಗಲಿದೆ.

ಗ್ಯಾಲಪ್ ಎಂಬ ಜಾಗತಿಕ ಸಂಸ್ಥೆಯಿಂದ ಬಿಜೆಪಿ ಸಮೀಕ್ಷೆ ನಡೆಸಿದ್ದು ಅದರ ಪ್ರಕಾರ, "ಶೇಕಡಾ 73ರಷ್ಟು ಭಾರತೀಯರು ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ. ಒಂದಾದ ಮೇಲೊಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತಿದ್ದು 2019ರಲ್ಲಿ ಎನ್ಡಿಎ ಮತಗಳಿಕೆ ಶೇಕಡಾ 55ಕ್ಕೆ ಏರಿಕೆಯಾಗಲಿದೆ. 2014ರಲ್ಲಿ ಗಳಿಸಿದ ಶೇಕಡಾ 42 ಮತಗಳಿಗಿಂತ ಇದು ಹೆಚ್ಚಾಗಿದೆ. ಮಾತ್ರವಲ್ಲ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಶೇಕಡಾ 10ಕ್ಕಿಂತಲೂ ಕಡಿಮೆ ಮತ ಗಳಿಸಲಿದೆ," ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಎಲ್ ನರಸಿಂಹ ರಾವ್ ಹೇಳಿದ್ದಾರೆ.

With 10 pc vote share in 2019, Rahul to be last dynast in Nehru-Gandhi dynasty

ಇದೇ ವೇಳೆ ಅವರು "ಕರ್ನಾಟಕವೂ ಬಿಜೆಪಿ ಕೈಯಲ್ಲೇ ಇದೆ. 2018ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮೂರನೇ ಎರಡು ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದಿದ್ದಾರೆ.

"ಮೋದಿ ನಾಯಕತ್ವ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಧನಾತ್ಮಕ ರಾಜಕಾರಣ ಮತ್ತು ಧನಾತ್ಮಕ ಅಡಳಿತದಿಂದ ಬಿಜೆಪಿ ರಾಷ್ಟ್ರಾದ್ಯಂತ ವ್ಯಾಪಿಸಿಕೊಳ್ಳುತ್ತಿದೆ,' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

BJP Filed Complaint Against Rs 65 Crore Indira Canteen Scam | Oneindia Kannada

ಇದೇ ವೇಳೆ ಅವರು ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪೂರ್ತಿ ನೆಲಕಚ್ಚಲಿದೆ ಎಂದರಲ್ಲದೆ, ರಾಹುಲ್ ಗಾಂಧಿ ನೆಹರೂ-ಗಾಂಧಿ ಕುಟುಂಬದ ಕೊನೆಯ ಕುಡಿ," ಎಂದು ಹೇಳಿದ್ದಾರೆ. ಅಲ್ಲದೆ ಇವತ್ತು ಎನ್.ಡಿ.ಎ ನಲ್ಲಿ 33 ಪಕ್ಷಗಳಿವೆ. ಬಿಜೆಪಿ ಜತೆಗಿನ ಸಖ್ಯದಿಂದ ಲಾಭ ಇದೆ ಎಂಬ ಕಾರಣಕ್ಕೆ ಎನ್.ಡಿ.ಎ ಜತೆ ಪಕ್ಷಗಳು ಗುರುತಿಸಿಕೊಂಡಿವೆ," ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An analysis conducted by the BJP suggests that the party would bag 55 per cent of the vote share in the 2019 Lok Sabha elections. If this feat is achieved that it would be only the second time since independence that a party would get over 50 per cent of the vote share.
Please Wait while comments are loading...