ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದೆ ಗುಜರಾತ್ ಫಲಿತಾಂಶ?

ಬೆಂಗಳೂರು, ಡಿಸೆಂಬರ್ 18 : ಗುಜರಾತ್ ಚುನಾವಣೆ ಬರೀ ಒಂದು ರಾಜ್ಯಕ್ಕೆ ಸೇರಿದ ಚುನಾವಣೆಯಾಗಿರಲಿಲ್ಲ. ಇಡೀ ದೇಶವೇ ಕಣ್ಣು ಬಿಟ್ಟು ನೋಡುತ್ತಿದ್ದಂಥ ಚುನಾವಣೆ ಮುಂಬರುವ ಇತರ ರಾಜ್ಯಗಳ ಚುನಾವಣೆ ಮಾತ್ರವಲ್ಲ, ಮತ್ತೊಂದು ವರ್ಷದಲ್ಲಿ ಬರುವ ಲೋಕಸಭೆ ಚುನಾವಣೆಯ ಮೇಲೂ ಪ್ರಭಾವ ಬೀರುವಂಥದ್ದು.

ಗುಜರಾತ್ ಮಾಡೆಲ್ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಬೀಗುತ್ತಿದ್ದುದು, ಅಪನಗದೀಕರಣದ ಸೈಡ್ ಎಫೆಕ್ಟ್ ಗಳು, ವರ್ತಕರಿಗೆ ಜಿಎಸ್‌ಟಿ ನೀಡಿದ್ದ ದೊಡ್ಡ ಹೊಡೆತ, ಸಾಲಸೋಲದಿಂದ ಕಂಗಾಲಾಗಿದ್ದ ರೈತರ ಆತ್ಮಹತ್ಯೆ, ಪಾಟಿದಾರ್ ಸಮುದಾಯದ ಮೀಸಲಾತಿ ಚಳವಳಿಯನ್ನು ಎದುರಿಸುವುದು ಮೋದಿಗೆ ಭಾರೀ ಸವಾಲಿನದಾಗಿತ್ತು.

ಚುನಾವಣೆ ಅಂದುಕೊಂಡಷ್ಟು ಸರಳವೂ ಆಗಿರಲಿಲ್ಲ, ಗೆಲ್ಲುವುದು ಸುಲಭವೂ ಆಗಿರಲಿಲ್ಲ. ಇಲ್ಲದಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಚಳಿಗಾಲದ ಅಧಿವೇಶನವನ್ನೇ ಮುಂದೂಡಿ ತಮ್ಮಿಡೀ ಸಮಯವನ್ನು ಗುಜರಾತ್ ನಲ್ಲಿ ಪ್ರಚಾರಕ್ಕೆ ಮೀಸಲಿಡುತ್ತಿರಲಿಲ್ಲ.

ಮೀಸಲಾತಿಗಾಗಿ ಪಾಟಿದಾರರು ಸಿಟ್ಟಿಗೆದ್ದಿದ್ದರು, ಹತ್ತಿ ಕೃಷಿಕರು ಆಕ್ರೋಶಿತರಾಗಿದ್ದರು, ಉದ್ಯೋಗವಿಲ್ಲದೆ ಯುವಕರು ಕಂಗಾಲಾಗಿದ್ದರು. ಕಬ್ಬಿಣ ಕಾದಾಗಲೇ ಬಡಿಯಬೇಕೆಂಬುದನ್ನು ಅರಿತಿದ್ದ ಕಾಂಗ್ರೆಸ್, ಸಮಯ ನೋಡಿಕೊಂಡು ಈ ಸಂತ್ರಸ್ತರನ್ನು ಓಲೈಸಲು ಸಾಕಷ್ಟು ಪ್ರಯತ್ನ ಮಾಡಿತ್ತು.

ಗುಜರಾತಿನಲ್ಲಿ ಬಿಜೆಪಿ ಹೆಚ್ಚೂಕಡಿಮೆ ಗೆಲ್ಲುವ ಹಂತದಲ್ಲಿದ್ದು, ಉಸ್ಸಪ್ಪ ಅಂತ ನಿಟ್ಟುಸಿರು ಬಿಟ್ಟಿದೆ. ಕಾಂಗ್ರೆಸ್ ಮುಖದಲ್ಲಿ ನಿರಾಶೆ ಕಂಡರೂ ಅತ್ಯುತ್ತಮ ಹೋರಾಟ ನೀಡಿದ ಸಾರ್ಥಕ ಭಾವವಿದೆ. ಹಲವಾರು ವರ್ಷಗಳ ಚುನಾವಣೆ, ಘಟಾನುಘಟಿಗಳ ಹೋರಾಟ ನೋಡಿ ಯಾರು ಗೆದ್ದವರು, ಯಾರು ಸೋತವರು ಮತದಾರರೇ ನಿರ್ಧರಿಸಬೇಕು.

ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವುದೆ?

ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವುದೆ?

ಇವೆಲ್ಲ ಸಂಗತಿಗಳು 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರುವುದೆ? ದೇಶದಲ್ಲಿ ಕರ್ನಾಟಕವೂ ಸೇರಿದಂತೆ 2018ರಲ್ಲಿ ಎಂಟು ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಬೇಕಿವೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಇದೇ ರೀತಿ ಪ್ರತಿಭಟನೆ ತೋರಿದರೆ, ಬಿಜೆಪಿ ಏದುಸಿರುಬಿಡುವಂತಾದರೆ, ಲೋಕಸಭೆ ಚುನಾವಣೆಯ ಮೇಲೂ ನಿಸ್ಸಂಶಯವಾಗಿ ಅಡ್ಡ ಪರಿಣಾಮ ಬೀರೇ ಬೀರುತ್ತದೆ.

ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ದೇಶದ ಜನ

ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ದೇಶದ ಜನ

2014ರಲ್ಲಿ ನಡೆದಿದ್ದ ಕಳೆದ ಚುನಾವಣೆಯಲ್ಲಿ, ದೇಶದ ಜನತೆ ಕಾಂಗ್ರೆಸ್ಸಿನ 10 ವರ್ಷಗಳ ಅಭಿವೃದ್ಧಿ ರಹಿತ, ಭ್ರಷ್ಟಾಚಾರದಿಂದ ಕಳಂಕಿತ ಆಡಳಿತದಿಂದ ಕಂಗೆಟ್ಟಿದ್ದರು. ಅದೇ ಸಮಯದಲ್ಲಿ, ಗುಜರಾತಿನಲ್ಲಿ ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದ ಕಳಂಕರಹಿತ ಮೋದಿ, ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದು, ಭಾರತದ ಮತದಾರರಿಗೆ ಬಯಸದೇ ಬಂದ ಭಾಗ್ಯವಾಗಿತ್ತು.

ಮೋದಿಯವರಿಗೆ ಉಘೇ ಉಘೇ ಅಂದ ಜನರು

ಮೋದಿಯವರಿಗೆ ಉಘೇ ಉಘೇ ಅಂದ ಜನರು

ಹೀಗಾಗಿ, ನರೇಂದ್ರ ಮೋದಿಯವರಿಗೆ ಉಘೇ ಉಘೇ ಅಂದ ಜನರು, ಬಿಜೆಪಿಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟರು. 272 ಸೀಟುಗಳ ಗುರಿ ಬೆನ್ನತ್ತಿದ್ದ ಬಿಜೆಪಿ ಮತ್ತು ಮೈತ್ರಿಕೂಟಗಳು 543 ಕ್ಷೇತ್ರಗಳಲ್ಲಿ 336ರಲ್ಲಿ ಗೆದ್ದು ಜಯದ ಉದ್ಘೋಷ ಕೂಗಿದ್ದವು. ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿಪಕ್ಷಗಳು, ಕಾಂಗ್ರೆಸ್ಸಿನ 44 ಸ್ಥಾನ ಸೇರಿ ಕೇವಲ 60 ಸ್ಥಾನಗಳನ್ನಷ್ಟೇ ಗಳಿಸಿದ್ದವು.

ಸಿಂಹದ ಗುಹೆಯಲ್ಲಿ ಕುರಿಗೆ ಸಿಕ್ಕ ಜಯ

ಸಿಂಹದ ಗುಹೆಯಲ್ಲಿ ಕುರಿಗೆ ಸಿಕ್ಕ ಜಯ

ಗುಜರಾತಿನಲ್ಲಿ 2012ರಲ್ಲಿ ಕೇವಲ 61 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 2017ರಲ್ಲಿ 80ರ ಆಸುಪಾಸು ಸ್ಥಾನಗಳನ್ನು ಗೆಲ್ಲುವ ಹವಣಿಕೆಯಲ್ಲಿದೆ. ಇದು ಸಿಂಹದ ಗುಹೆಯಲ್ಲಿ ಕುರಿಗೆ ಸಿಕ್ಕಂಥ ಭರ್ಜರಿ ಗೆಲವೇ ಆಗಿದೆ. ಇದೇ ಓಘವನ್ನು ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರಿದರೆ, ಬಿಜೆಪಿ ಪ್ರತಿ ರಾಜ್ಯದಲ್ಲಿ ತೇಕಬೇಕಾಗುತ್ತದೆ, ಒಂದೊಂದು ಸೀಟಿಗೂ ಹೊಡೆದಾಡಬೇಕಾಗುತ್ತದೆ.

ಕರ್ನಾಟಕದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ

ಕರ್ನಾಟಕದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ

ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸುವುದು ಬಿಜೆಪಿಗೆ ಅಷ್ಟು ಸುಲಭವಲ್ಲ. ಇದು ನರೇಂದ್ರ ಮೋದಿಯವರಿಗೂ ಗೊತ್ತು, ಅಮಿತ್ ಶಾ ಅವರಿಗೂ ಗೊತ್ತು. ಒಂದು ವೇಳೆ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದೇ ಆದಲ್ಲಿ, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಆದರೆ, ಆಗುತ್ತಾ? ಕರ್ನಾಟಕದ ಜನರು ಯಡಿಯೂರಪ್ಪನವರನ್ನು ಗೆಲ್ಲಿಸುವರಾ? ಕಾಲವೇ ಉತ್ತರಿಸಲಿದೆ.

ರಾಹುಲ್ ಪ್ರಭಾವ ವಿಸ್ತರಿಸುತ್ತಾ ಸಾಗಿದ್ದಾರೆ

ರಾಹುಲ್ ಪ್ರಭಾವ ವಿಸ್ತರಿಸುತ್ತಾ ಸಾಗಿದ್ದಾರೆ

ಒಂದೆಡೆ ಮೋದಿ ಸರಕಾರದ ನೀತಿಗಳ ಬಗ್ಗೆ ಕೆಲ ಅಸಮಾಧಾನಗಳಿದ್ದರೆ, ಮತ್ತೊಂದೆಡೆ ರಾಹುಲ್ ಗಾಂಧಿಯವರು ಏಕಾಂಗಿಯಾಗಿ ತಮ್ಮ ಪ್ರಭಾವವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ. ಇನ್ನೂ 47 ವರ್ಷದ ರಾಹುಲ್ ಗಾಂಧಿಯವರ ಸುತ್ತ ಎಂಥದೇ ಯುದ್ಧ ಗೆಲ್ಲಬಹುದಂಥ ಯುವ ಸೇನಾನಿಗಳ ಪಡೆಯೇ ಇದೆ. ಈ ಶಕ್ತಿಯನ್ನು ರಾಹುಲ್ ಗಾಂಧಿಯವರು ಸಮರ್ಥವಾಗಿ ಬಳಸಿಕೊಂಡರೆ, ನರೇಂದ್ರ ಮೋದಿಯವರಿಗೆ ಲೋಕಸಭೆ ಚುನಾವಣೆ ಹೂವಿನ ಹಾಸು ಆಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+