Get Updates
Get notified of breaking news, exclusive insights, and must-see stories!

Omar Abdullah Profile: ಜಮ್ಮು & ಕಾಶ್ಮೀರದ ನೂತನ ಸಿ.ಎಂ ಒಮರ್ ಅಬ್ದುಲ್ಲಾ, ಕುಟುಂಬದ ಮೂರನೇ ಮುಖ್ಯಮಂತ್ರಿ!

ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಆಯ್ಕೆಯಾಗುವುದು ಬಹುತೇಕ ಕನ್ಫರ್ಮ್‌ ಆಗಿದೆ. ಈ ಬಗ್ಗೆ ಒಮರ್‌ ಅವರ ತಂದೆ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರೇ ಘೋಷಿಸಿದ್ದು. ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಶೀಘ್ರ ಒಮರ್‌ ಅಬ್ದುಲ್ಲಾ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಒಮರ್‌ ಅಬ್ದುಲ್ಲಾ ಯಾರು, ಅವರ ರಾಜಕೀಯ ಹಿನ್ನೆಲೆ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಒಮರ್‌ ಅಬ್ದುಲ್ಲಾ ಅವರು ಅನುಭವಿ ರಾಜಕಾರಣಿ. ಕಣಿವೆ ರಾಜ್ಯದಲ್ಲಿ ರಾಜಕೀಯ ಛಾಪು ಮೂಡಿಸಿದ್ದಾರೆ. ಒಮರ್ ಅವರು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಭಾವಿ ರಾಜಕಾರಣಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಇನ್ನು ಒಮರ್ ಅವರು ಎರಡನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಾರೆ. ಈ ಹಿಂದೆ ಅಂದರೆ 2009ರಿಂದ 2015ರ ವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಇದೀಗ ಅವರಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ.

What is the political background of the new CM Omar Abdullah of Jammu amp amp Kashmir

ಒಮರ್‌ ಅಬ್ದುಲ್ಲಾ ನೇತೃತ್ವ: ಜಮ್ಮು ಮತ್ತು ಕಾಶ್ಮೀರದಲ್ಲಿ 10 ವರ್ಷಗಳ ನಂತರ ವಿಧಾನಸಭೆ ಚುನಾವಣೆ ನಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌- ಸಿ) ಪಕ್ಷವನ್ನು ಮುನ್ನಡೆಸುವ ನಿಟ್ಟಿನಲ್ಲಿ ಒಮರ್ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಕಾಂಗ್ರೆಸ್‌ ಪಕ್ಷ ಉತ್ತಮ ಸಾಧನೆ ಮಾಡಿವೆ. ದಶಕದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನವನ್ನು ರದ್ದು ಮಾಡಿದ ನಂತರ ಆಯ್ಕೆಯಾಗುವ ಮೊದಲ ಮುಖ್ಯಮಂತ್ರಿಯಾಗಿ ಒಮರ್‌ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಒಮರ್‌ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಪ್ರಭಾವಿ ರಾಜಕೀಯ ಹಾಗೂ ಮುಸ್ಲಿಂ ಕುಟುಂಬದ ಹಿನ್ನಲೆಗೆ ಸೇರಿದವರಾಗಿದ್ದಾರೆ.

ಮೂರು ತಲೆಮಾರಿನ ರಾಜಕೀಯ: ಒಮರ್‌ ಅವರ ಕುಟುಂಬ ಮೂರು ತಲೆಮಾರಿನ ರಾಜಕೀಯ ಹಿನ್ನಲೆಯನ್ನು ಹೊಂದಿದೆ. ಹೀಗಾಗಿ, ಒಮರ್‌ ಅವರಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಆಳವಾದ ಜ್ಞಾನವಿದೆ. ಇದೇ ಕಾರಣಕ್ಕೆ ಅವರು, ನಾನು ಎಕ್ಸಿಟ್‌ ಪೋಲ್‌ ವರದಿಗಳನ್ನು ನಂಬುವುದಿಲ್ಲ. ಈ ಎಕ್ಸಿಟ್‌ ಪೋಲ್‌ ವರದಿಗಳೆಲ್ಲವೂ ಬರೀ ಟೈಂಪಾಸ್‌ ನಾನು ಅಕ್ಟೋಬರ್‌ 8ರಂದು ಪ್ರಕಟವಾಗುವ ಫಲಿತಾಂಶವನ್ನು ಮಾತ್ರ ನಾನು ನಂಬುತ್ತೇನೆ ಎಂದು ಹೇಳಿದ್ದರು. ಎಕ್ಸಿಟ್‌ ಪೋನ್‌ನ ವರದಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು.

What is the political background of the new CM Omar Abdullah of Jammu amp amp Kashmir

ಒಮರ್‌ ಅವರ ಅಜ್ಜ ಶೇಖ್ ಮುಹ್ಮದ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ನ ಸಂಸ್ಥಾಪಕರಾಗಿದ್ದಾರೆ. ಮುಹ್ಮದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಇನ್ನು ಒಮರ್‌ ಅವರ ತಂದೆ ಹಾಗೂ ಈಗಿನ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಅಧ್ಯಕ್ಷರಾದ ಫಾರೂಕ್ ಅಬ್ದುಲ್ಲಾ ಅವರು ಸಹ ಮೂರು ಬಾರಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಫಾರೂಕ್‌ ಅವರು 1982 ರಿಂದ 2002ರ ವರೆಗೆ ಸಿ.ಎಂ ಆಗಿದ್ದರು. ಈ ರೀತಿ ರಾಜಕೀಯದ ಅಖಾಡದಲ್ಲೇ ಬೆಳೆದ ಒಮರ್‌ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿದ್ದಾರೆ.

ಒಮರ್‌ ಅವರು ಯುನಿವರ್ಸಿಟಿ ಆಫ್‌ ಬಾಂಬೆ (ಇಂದಿನ ಮುಂಬೈ)ಯಲ್ಲಿ ಬ್ಯುಸಿನೆಸ್‌ ಬ್ಯಾಚುಲರ್‌ ಡಿಗ್ರಿ ಮಾಡಿದ್ದಾರೆ. ಅಲ್ಲದೇ ಸ್ಕಾಟಿಷ್ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಪದವಿ ಪೂರೈಸಿದ್ದಾರೆ.

ಒಮರ್‌ ಅಬ್ದುಲ್ಲಾ ರಾಜಕೀಯ ಹಿನ್ನೆಲೆ

28ನೇ ವಯಸ್ಸಿನಲ್ಲೇ ಒಮರ್‌ ಅವರು ರಾಜಕೀಯ ಅಖಾಡಕ್ಕೆ ಧಮುಕಿದ್ದರು. ತಮ್ಮ 28ನೇ ವಯಸ್ಸಿನಲ್ಲೇ ಅವರು ಲೋಕಸಭೆಗೆ ಪ್ರವೇಶಿಸಿದ್ದರು. ಒಂದು ವರ್ಷದ ನಂತರ ನ್ಯಾಷನಲ್ ಡೆಮಾಕ್ರಟಿಕ್ ಮೈತ್ರಿ (NDA) ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ದಂತಹ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು. 2001 ಅವರು ಭಾರತದ ಅತ್ಯಂತ ಕಿರಿಯ ವಿದೇಶಾಂಗ ವ್ಯವಹಾರಗಳ ಸಚಿವರಾದರು. ಆದರೆ, 17 ತಿಂಗಳಿನಲ್ಲಿ ಈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದರು.

ಒಮರ್ ಅವರು 2002ರಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌- ಸಿ)ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಆ ವರ್ಷ ನಡೆದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿ ಪಕ್ಷವು ಅರ್ಧಕ್ಕಿಂತಲೂ ಹೆಚ್ಚು ಸ್ಥಾನವನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು. ಅಲ್ಲದೇ ಅಲ್ಲಿನ ಪಿಡಿಪಿ ಪಕ್ಷದ ಅಭ್ಯರ್ಥಿಯ ಮುಂದೆ ಒಮರ್‌ ಸೋಲು ಅನುಭವಿಸಿದ್ದರು. 2004 ರಲ್ಲಿ ಲೋಕಸಭೆ ಚುನಾವಣೆಗೆ ಆಯ್ಕೆಯಾದರು.

2008ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಅಮೋಘ ಗೆಲುವು ಸಾಧಿಸಿದ್ದರು. ಎನ್‌ಸಿ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ 38ನೇ ವಯಸ್ಸಿಗೆ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅವರ ಅಧಿಕಾರದ ಅವಧಿಯಲ್ಲಿ ಹಲವು ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಕೇಳಿ ಬಂದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+