ವೀನು ಪಾಲಿವಾಲ್, ಜನಪ್ರಿಯ ಮಹಿಳಾ ಬೈಕರ್ ಇನ್ನಿಲ್ಲ

Posted By:
Subscribe to Oneindia Kannada

ಭೋಪಾಲ್, ಏಪ್ರಿಲ್ 12: ಸಾಹಸ ಪ್ರಿಯೆ, ದೇಶದ ಜನಪ್ರಿಯ ಮಹಿಳಾ ಬೈಕರ್ ವೀನು ಪಾಲಿವಾಲ್ ಅವರು ಸೋಮವಾರ ಸಂಜೆ ದುರಂತ ಸಾವನ್ನಪ್ಪಿದ್ದಾರೆ. ಬೈಕ್ ಚಾಲನೆಯಲ್ಲಿ ಪರಿಣಿತರಾಗಿದ್ದ ವೀನು ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.[ಎನ್ ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿ]

44ವರ್ಷ ವಯಸ್ಸಿನ ವೀನು ಪಾಲಿವಾಲ್ ಅವರು ರಾಷ್ಟ್ರವ್ಯಾಪಿ ಪ್ರವಾಸ ಹಮ್ಮಿಕೊಂಡು ತಮ್ಮ ನೆಚ್ಚಿನ ಹಾರ್ಲೆ ಡೇವಿಡ್ಸನ್ ಬೈಕ್ ಏರಿ ಹೊರಟ್ಟಿದ್ದರು. ಆದರೆ, ಸೋಮವಾರ ಸಂಜೆ ಸಾಗರ್ ಪ್ರಾಂತ್ಯದಿಂದ ಭೋಪಾಲ್ ಕಡೆಗೆ ತೆರಳುವಾಗ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವೀನು ಅವರ ಜೊತೆ ಬೈಕರ್ ದಿಪೇಶ್ ತನ್ವರ್ ಅವರು ಕೂಡಾ ಇದ್ದರು.[ಬೆಂಗಳೂರಿನಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚು!]

https://www.oneindia.com/india/veenu-paliwal-india-s-top-woman-biker-dies-road-accident-2067907.html

ಭೋಪಾಲ್ ನಿಂದ 100 ಕಿ.ಮೀ ದೂರ ಇರುವ ಗ್ಯಾರಸ್ಪುರ್ ಎಂಬಲ್ಲಿ ವಿನು ಇದ್ದ ಬೈಕ್ ಸ್ಕಿಡ್ ಆಗಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣವೇ ವಿನು ಅವರನ್ನು ವಿದಿಶಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಡಾಕ್ಟರ್ ಗಳು ಘೋಷಿಸಿದ್ದಾರೆ.[ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?]

ಜೈಪುರ ಮೂಲದ ವಿನು ಅವರು ಎರಡು ಮಕ್ಕಳ ತಾಯಿಯಾಗಿದ್ದು, ರಾಷ್ಟ್ರವ್ಯಾಪಿ ಸಂಚರಿಸಿ ಬೈಕ್ ಸವಾರಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುವ ಕನಸು ಕಂಡಿದ್ದರು. ಇತ್ತೀಚೆಗಷ್ಟೇ ಆಕೆಗೆ 'ಲೇಡಿ ಆಫ್ ಹಾರ್ಲೆ 2016' ಎಂದು ಪ್ರಶಸ್ತಿ ನೀಡಲಾಗಿತ್ತು. ಮಹಿಳಾ ಬೈಕರ್ ಸಾವಿನ ಸುದ್ದಿ ಬಗ್ಗೆ ವಿಡಿಯೋ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a tragic incident, one of the top woman bikers in the country, Veenu Paliwal died in road accident on Monday evening.
Please Wait while comments are loading...