ಜು.16 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು.16: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.10: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಆರ್ ಎಸ್ ಪುರ ಸೆಕ್ಟರ್ ಅಂತಾರಾಷ್ಟ್ರೀಯ ಗಡಿಯಲ್ಲಿ ಮೂವರು ಭಾರತೀಯ ಗಡಿ ಭದ್ರತಾ ಯೋಧರ ಹತ್ಯೆ
4.45: ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ವೈಷ್ಣೋದೇವಿಯ ದರ್ಶನಕ್ಕೆ ತೆರಳುವ ಯಾತ್ರಿಗಳ ಅನುಕೂಲಕ್ಕೆ ಆರಂಭಗೊಂಡ ಶ್ರೀ ಶಕ್ತಿ ಎಕ್ಸ್ಪ್ರೆಸ್ ರೈಲು ಇಂದು ಅರ್ಧ ದಾರಿಯಲ್ಲೇ ಕೆಟ್ಟು ನಿಂತ ಘಟನೆ ನಡೆದಿದೆ. ಕಾತ್ರಾ ನಿಲ್ದಾಣದ ಬಳಿಯ ಸುರಂಗ ತಲುಪಿದಾಗ ರೈಲಿನ ಎಂಜಿನ್ ಕೈಕೊಟ್ಟು ನಿಂತಿತ್ತು.
3.45: ಕೇದಾರನಾಥ್, ಬದ್ರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
11.20: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಕೊಂಚ ಶಾಕ್ ತಗುಲಲಿದೆ. ಕಿರು ಅವಧಿಯ ನಿಗದಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಎಸ್ ಬಿಐ ಶೇ 7.5 ರಿಂದ ಶೇ 7ಕ್ಕಿಳಿಸಿದೆ. ನೂತನ ದರ ಜು.18ರಿಂದ ಜಾರಿಗೆ ಬರಲಿದೆ.

11.00: 'ಕಾಶ್ಮೀರ ಪ್ರತ್ಯೇಕ ರಾಜ್ಯ ಎಂದು ನಾನು ಹೇಳಿಲ್ಲ' ರಾಮದೇವ್ ವೇದ್ ಪ್ರತಾಪ್ ವೈದಿಕ್ ಪುನರುಚ್ಚಾರ.
10.30 : ಗಾಜಾದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಿಂದ ಮೃತರ ಸಂಖ್ಯೆ 200ಕ್ಕೇರಿದೆ.
10.15: ಮುಂಬೈನ ಭಾರಿ ಮಳೆಗೆ ಕಟ್ಟಡದ ಒಂದು ಭಾಗ ಕುಸಿದು ಇಬ್ಬರು ಮೃತ ಪಟ್ಟಿದ್ದಾರೆ.
10.00: ಬ್ರೆಜಿಲ್ಲಿನಲ್ಲಿ ನಡೆದಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ನಿರ್ಮೂಲನೆ ನಮ್ಮ ಗುರಿ ಎಂದಿದ್ದಾರೆ.












Click it and Unblock the Notifications