ಸಹೋದರನ ಕಣ್ಣೆದುರಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ರಾಂಪುರ(ಉತ್ತರ ಪ್ರದೇಶ), ಅಕ್ಟೋಬರ್ 31: ಸಹೋದರನೊಬ್ಬನ ಕಣ್ಣೆದುರಲ್ಲೇ ಬಾಲಕಿಯೊಬ್ಬಳ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿದ ವಿಕೃತ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ಅ.30 ರಂದು ನಡೆದಿದೆ.
ಸಹೋದರಿಯೊಂದಿಗೆ ಬೈಕೊನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದು, ಆತನ ಮೇಲೆ ಗುಂಡಿನ ದಾಳಿ ನಡೆದ ಕಿಡಿಗೇಡಿಗಳು ಗಾಯಗೊಂಡು ನಿತ್ರಾಣನಾಗಿದ್ದ ಆತನೆದುರಲ್ಲೇ ಆತನ ಸಹೋದರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ನಾಲ್ವರು ಅತ್ಯಾಚಾರಿಗಳಲ್ಲಿ ಇಬ್ಬರು, ಸಂತ್ರಸ್ಥೆಯ ಸಂಬಂಧಿಕರು ಎಂಬುದು ಸಂತ್ರಸ್ಥೆಯ ಹೇಳಿಕೆಯಿಂದ ತಿಳಿದುಬಂದಿದ್ದು ಉಳಿದವರ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ರಾಂಪುರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.












Click it and Unblock the Notifications