ದೆಹಲಿಯಲ್ಲಿ ಭಾನುವಾರ ಮೋದಿ ರೋಡ್ ಶೋ, ಗೆಲುವಿನ ಭಾಷಣ

Posted By:
Subscribe to Oneindia Kannada

ನವದೆಹಲಿ, ಮಾರ್ಚ್. 12 : ಪಂಚರಾಜ್ಯಗಳ ಚುನಾವಣೆಯಲ್ಲಿ ಅಭೂತ ಪೂರ್ವ ಜಯ ದೊರಕಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಭಾನುವಾರ ಸಂಜೆ ದೆಹಲಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಸಂಜೆ 4.30ರ ವೇಳೆಗೆ ದೆಹಲಿಯ ಲಿ ಮೆರಿಡಿಯನ್ ಹೋಟೆಲ್‍ ನಿಂದ ಪಕ್ಷದ ಕಚೇರಿಯವರೆಗ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ರೋಡ್ ಶೋ ನಡೆಸಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡುವ ಸಾಧ್ಯತೆಯಿದೆ.

ಹಾಗೂ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಭಾನುವಾರ ಪಕ್ಷದ ಹಿರಿಯ ನಾಯಕರು ಸಭೆ ನಡೆಸಲಿದ್ದು, ಈ ವೇಳೆ ಉತ್ತರ ಪ್ರದೇಶದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಉತ್ತರಪ್ರದೇಶಕ್ಕೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಹಲವಾರು ಘಟಾನುಘಟಿಗಳ ಹೆಸರುಗಳು ತೇಲಾಡುತ್ತಿವೆ. ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದು ಭಾನುವಾರದ ಸಭೆಯಲ್ಲಿ ನಿರ್ಧಾರವಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈ ಕೆಳಗಿನ ಹೆಸರುಗಳು ಕೇಳಿಬರುತ್ತಿದೆ.

ಗೃಹ ಸಚಿವ ರಾಜನಾಥ್ ಸಿಂಗ್

ಗೃಹ ಸಚಿವ ರಾಜನಾಥ್ ಸಿಂಗ್

ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶವನ್ನು ಬಿಜೆಪಿಯ ಭದ್ರಕೋಟೆ ಮಾಡಿಕೊಳ್ಳಲು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಕೇಂದ್ರದಲ್ಲಿ ಗೃಹ ಖಾತೆ ನಿಭಾಹಿಸುತ್ತಿರುವ ರಾಜನಾಥ್ ಸಿಂಗ್ ಅವರನ್ನು ಆಯ್ಕೆ ಮಾಡಬೇಕೆಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಕೇಶವ್ ಪ್ರಸಾದ್ ಮೌರ್ಯ

ಕೇಶವ್ ಪ್ರಸಾದ್ ಮೌರ್ಯ

ಉತ್ತರ ಪ್ರದೇಶ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಕೇಶವ್ ಪ್ರಸಾದ್ ಮೌರ್ಯ ಪ್ರಭಾವಶಾಲಿ ವ್ಯಕ್ತಿಯಾಗಿದ್ದರಿಂದ ಒಂದು ಕಡೆ ಇವರ ಹೆಸರುಗಳು ಕೇಳಿಬುತ್ತಿವೆ.

ಯೋಗಿ ಆದಿತ್ಯಾನಂದ

ಯೋಗಿ ಆದಿತ್ಯಾನಂದ

ಮಧ್ಯಪ್ರದೇಶದ ಗೋರಖ್ ಪುರದಿಂದ ಹಿಂದೆ ಸಂಸದರಾಗಿದ್ದ ಯೋಗಿ ಆದಿತ್ಯಾನಂದ ಉತ್ತರ ಪ್ರದೇಶ ವಿಧಾನಸಭೆ ಚುನವಾಣೆಯಲ್ಲಿ ಜಯಗಳಿಸಿದ್ದು ತಾವು ಕೂಡ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿದ್ದಾರೆ. ಏನಾಗುತ್ತೋ ಕಾದು ನೋಡಬೇಕಿದೆ.

ದಿನೇಶ್ ಶರ್ಮಾ

ದಿನೇಶ್ ಶರ್ಮಾ

ಉತ್ತರಪ್ರದೇಶದಲ್ಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ದಿನೇಶ್ ಶರ್ಮಾ ಬ್ರಾಹ್ಮಣ, ಆರೆಸ್ಸೆಸ್ ಕಟ್ಟಾಳು. ತೆರೆಯ ಹಿಂದೆಯೇ ಕೆಲಸ ಮಾಡುವಲ್ಲಿ ಸಿದ್ಧಹಸ್ತರಾಗಿರುವ ದಿನೇಶ್, ಪ್ರಚಾರ ಗಿಟ್ಟಿಸುವಲ್ಲಿ ಹಿಂದೆಯೆ. ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದ್ದರಿಂದ ಇವರಿಗೆ ಮುಖ್ಯಮಂತ್ರಿ ಮಾಡಿದರೂ ಅಶ್ಚರ್ಯ ಪಡಬೇಕಿಲ್ಲ.

ಮನೋಜ್ ಸಿನ್ಹಾ

ಮನೋಜ್ ಸಿನ್ಹಾ

ಹಿಂದೆ ಕೇಂದ್ರ ರೈಲು ಇಲಾಖೆ ಸಹಾಯಕ ಸಚಿವರಾಗಿದ್ದ ಮನೋಜ್ ಸಿನ್ಹಾ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಸಿಎಂ ಅಭ್ಯರ್ಥಿಗಳಲ್ಲಿ ಇವರ ಹೆಸರು ಕೇಳಿ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bharatiya Janata Party has won stunning election victories in Uttar Pradesh and Uttarakhand, PM Modi may lead roadshow in Delhi to celebrate UP election win on March 12.
Please Wait while comments are loading...