ಉತ್ತರ ಪ್ರದೇಶ: ಬೀದಿ ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿ
ಸೀತಾಪುರ, ಮೇ 01: ಬೀದಿ ನಾಯಿಗಳ ಗುಂಪೊಂದು ಕಚ್ಚಿದ ಪರಿಣಾಮ ಇಬ್ಬರು ಮಕ್ಕಳು ಮೃತರಾದ ಘಟನೆ ಉತ್ತರ ಪ್ರದೇಶದ ಸಿತಾಪುರದಲ್ಲಿ ನಡೆದಿದೆ.
ಇಲ್ಲಿನ ಖೈರಾಬಾದ್ ಎಂಬಲ್ಲಿ ಬೀದಿ ನಾಯಿಗಳು ರಸ್ತೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ಕಚ್ಚಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿ ಕಡಿತದಿಂದ ಸಂಭವಿಸಿದ ಅತ್ಯಂತ ಹೀನಾಯ ಘಟನೆ ಇದಾಗಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಆಂಧ್ರಪ್ರದೇಶದ ಬಲಿಜಿಪೇಟೆ ಎಂಬಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ಬೀದಿನಾಯಿ ಕಡಿತದಿಂದ ಮೃತಪಟ್ಟಿದ್ದ.












Click it and Unblock the Notifications