ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ಅನ್ನು ಚೀನಾದಲ್ಲಿ ತೋರಿಸಿದ ವಿವಾದಕ್ಕೆ ಅಸಮರ್ಪಕ ಉತ್ತರ ನೀಡಿದ ಟ್ವಿಟ್ಟರ್

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಲಡಾಖ್‌ಅನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗ ಎಂದು ತೋರಿಸಿದ್ದ ಟ್ವಿಟ್ಟರ್ ಇಂಡಿಯಾ, ತಾನು ಎಸಗಿದ ಪ್ರಮಾದಕ್ಕೆ ಕೇಳಲಾದ ಸ್ಪಷ್ಟನೆಗೆ ಅಸಮರ್ಪಕ ಉತ್ತರ ನೀಡಿದೆ ಎಂದು ದತ್ತಾಂಶ ಸಂರಕ್ಷಣೆ ಸಂಬಂಧದ ಸಂಸದರ ಸಮಿತಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರವನ್ನು ಚೀನಾದ ಭಾಗವೆಂದು ತನ್ನ ನೇರ ಪ್ರಸಾರದ ಆಯ್ಕೆಯಲ್ಲಿ ತೋರಿಸಿದ್ದ ಟ್ವಿಟ್ಟರ್ ಇಂಡಿಆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಮೂಲದ ಚಿಂತಕರ ಚಾವಡಿ ಅಬ್ಸರ್ವರ್ ರೀಸರ್ಚ್ ಫೌಂಡೇಷನ್ ಟ್ವಿಟ್ಟರ್ ಎಸಗಿದ್ದ ತಪ್ಪನ್ನು ತೋರಿಸಿತ್ತು. ಇದು ವಿವಾದ ಕೆರಳಿಸುತ್ತಿದ್ದಂತೆಯೇ ಟ್ವಿಟ್ಟರ್‌ಗೆ ನೋಟಿಸ್ ನೀಡಿದ್ದ ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಸದೀಯ ಜಂಟಿ ಸಮಿತಿ, ಟ್ವಿಟ್ಟರ್ ಇಂಡಿಯಾದ ಅಧಿಕಾರಿಗಳನ್ನು ಪ್ರಶ್ನಿಸಿತ್ತು.

ಜಮ್ಮು & ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್ ವಿರುದ್ಧ ಆಕ್ರೋಶಜಮ್ಮು & ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್ ವಿರುದ್ಧ ಆಕ್ರೋಶ

ಇದಕ್ಕೆ ಟ್ವಿಟ್ಟರ್ ನೀಡಿರುವ ವಿವರಣೆ ಅಸಮಪರ್ಕವಾಗಿದೆ ಎಂದು ಸಮಿತಿ ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಸಮಿತಿ ಅಧ್ಯಕ್ಷೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ. ಲಡಾಖ್ ಅನ್ನು ಚೀನಾದ ಭಾಗವೆಂದು ತೋರಿಸಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಏಳು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

 Twitter Inadequate Explanation On Showing Ladakh As part Of China

ಭಾರತದ ಭಾವನೆಗಳನ್ನು ಗೌರವಿಸುವುದಾಗಿ ಟ್ವಿಟ್ಟರ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅದು ಅಸಮರ್ಪಕವಾಗಿದೆ. ಇದು ಭಾವನೆಗಳ ಪ್ರಶ್ನೆಯಲ್ಲ. ಇದು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ವಿರುದ್ಧವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ಇಂಡಿಯಾದ ಸಾರ್ವಜನಿಕ ನೀತಿಯ ಹಿರಿಯ ವ್ಯವಸ್ಥಾಪಕ ಶಗುಫ್ತಾ ಕಮ್ರಾನ್, ಕಾನೂನು ಸಲಹೆಗಾರ್ತಿ ಆಯುಷಿ ಕಪೂರ್, ನೀತಿ ಸಂವಹನ ವಿಭಾಗದ ಪಲ್ಲವಿ ವಾಲಿಯಾ ಮತ್ತು ಕಾರ್ಪೊರೇಟ್ ಭದ್ರತೆಯ ಮನ್ವಿಂದರ್ ಬಾಲಿ ಸಮಿತಿಯ ಮುಂದೆ ಹಾಜರಾಗಿದ್ದರು.

ಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರಲೇಹ್ ಚೀನಾಕ್ಕೆ ಸೇರಿದೆ ಎಂದ ಟ್ವಿಟ್ಟರ್‌ಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ

ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ ವಿಚಾರದಲ್ಲಿ ಟ್ವಿಟ್ಟರ್ ಸಿಇಒ ಜಾಕ್ ಡೋರ್ಸಿ ಅವರಿಗೆ ಕೆಲವು ದಿನಗಳ ಹಿಂದೆ ಪತ್ರ ಬರೆದಿದ್ದ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಗೌರವ ತೋರಿಸುವ ಟ್ವಿಟ್ಟರ್‌ನ ಯಾವುದೇ ರೀತಿಯ ಪ್ರಯತ್ನಗಳನ್ನು ಭಾರತ ಒಪ್ಪುವುದಿಲ್ಲ ಎಂದು ಖಾರವಾಗಿ ಹೇಳಿತ್ತು.

ಭಾರತದ ಪ್ರಜೆಗಳ ಭಾವನೆಯನ್ನು ಟ್ವಿಟ್ಟರ್ ಗೌರವಿಸಬೇಕು ಎಂದು ಸಲಹೆ ನೀಡಿರುವ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಅಜಯ್ ಸಾವ್ನಿ, 'ನಕ್ಷೆಗಳ ಮೂಲಕವೂ ಪ್ರತಿಬಿಂಬಿಸುವ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಟ್ವಿಟ್ಟರ್‌ನ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಒಪ್ಪುವಂತಹದ್ದಲ್ಲ. ಇದು ಕಾನೂನುಬಾಹಿರ ಕೂಡ' ಎಂದಿದ್ದರು.

English summary
Palriamentary Joint Committee On Data Protection said Twitter's explanation on showing Ladakh as part of China is inadequate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X