Tirumala Ticket Scam: ತಿರುಮಲ ಟಿಕೆಟ್ ಬಗ್ಗೆ ಭಕ್ತರಿಗೆ ಟಿಟಿಡಿ ಎಚ್ಚರಿಕೆ.. ಹೀಗೆ ಮಾಡಿದರೆ ಹುಷಾರ್!
ಆಂಧ್ರಪ್ರದೇಶ ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ನಿತ್ಯ ಸಾವಿರಾರು ಭಕ್ತರು ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಭೇಟಿ ನೀಡುತ್ತಾರೆ. ಆದರೆ ಅವರಲ್ಲಿ ಹಲವರು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿರುತ್ತಾರೆ. ಇನ್ನು ಕೆಲವರು ಟಿಕೆಟ್ ಬುಕ್ ಮಾಡದೇ ತೆರಳುತ್ತಾರೆ.
ಇನ್ನೂ ಕೆಲವರು ವಿಶೇಷ ಪ್ರವೇಶ ದರ್ಶನಕ್ಕೆ ದೇವಸ್ಥಾನದಲ್ಲೇ ಟೋಕನ್ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಸರತಿ ಸಾಲಿನಲ್ಲಿ ನಿಂತು ಉಚಿತವಾಗಿ ಸ್ವಾಮಿಯ ದರ್ಶನ ಪಡೆಯುತ್ತಾರೆ. ವಿವಿಧ ರಾಜ್ಯಗಳ ಭಕ್ತರಿಗೆ ವಿಶೇಷ ಪ್ರವೇಶ ದರ್ಶನ ಟಿಕೆಟ್ ಮಾರಾಟ ಮಾಡುವ ಮೂಲಕ ಹಲವು ಗ್ಯಾಂಗ್‌ಗಳು ಮೋಸ ಮಾಡುತ್ತಿರುವ ಘಟನೆಗಳನ್ನು ನೋಡುತ್ತಲೇ ಬಂದಿದ್ದೇವೆ.

ಭಕ್ತರು ಇಂತಹ ದಲ್ಲಾಳಿಗಳನ್ನು ಸ್ವಾಮಿಯ ದರ್ಶನಕ್ಕೆ ಸಂಪರ್ಕಿಸಬಾರದು ಎಂದು ಟಿಟಿಡಿ ಮನವಿ ಮಾಡಿದೆ. ಇದಲ್ಲದೆ, ವೆಬ್‌ಸೈಟ್ ಮತ್ತು ಟಿಟಿಡಿ ಕೇಂದ್ರಗಳಿಂದ ಮಾತ್ರ ಟಿಕೆಟ್‌ಗಳನ್ನು ಪಡೆಯಲು ಸೂಚಿಸಲಾಗಿದೆ.
ಹೌದು.. ಇತ್ತೀಚೆಗಿನ ಹೇಳಿಕೆಯೊಂದರಲ್ಲಿ ಶ್ರೀವಾರಿಯ ವಿಶೇಷ ಪ್ರವೇಶ ದರ್ಶನಕ್ಕಾಗಿ ದಲ್ಲಾಳಿಗಳನ್ನು ಸಂಪರ್ಕಿಸಬೇಡಿ ಎಂದು ಟಿಟಿಡಿ ಭಕ್ತರಿಗೆ ಮನವಿ ಮಾಡಿದೆ. ಕೆಲ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ತಿರುಮಲ ದರ್ಶನಕ್ಕೆ ವಿಶೇಷ ಪ್ರವೇಶ ದರ್ಶನ ಟಿಕೆಟ್ ಮಾರಾಟ ಮಾಡುವ ದೂರವಾಣಿ ಸಂಖ್ಯೆ ಸೇರಿದಂತೆ ಮಾಹಿತಿಯೊಂದಿಗೆ ಪ್ರಚಾರ ನಡೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ತಿರುಮಲ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಗ್ಯಾಂಗ್‌ಗಳನ್ನು ನಂಬಬೇಡಿ ಎಂದು ಟಿಟಿಡಿ ಸೂಚಿಸಿದೆ. ವಾಸ್ತವವಾಗಿ, ಟಿಟಿಡಿ ವೆಬ್‌ಸೈಟ್ ಮೂಲಕ ಮಾತ್ರವಲ್ಲದೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳಿಗೂ ಶ್ರೀವಾರಿಯ ವಿಶೇಷ ಪ್ರವೇಶ ದರ್ಶನಕ್ಕಾಗಿ ಟಿಟಿಡಿ ಕೆಲವು ಟಿಕೆಟ್‌ಗಳನ್ನು ನಿಗದಿಪಡಿಸಿದೆ. ಭಕ್ತರು ಈ ಟಿಕೆಟ್‌ಗಳನ್ನು ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಪಡೆಯಬಹುದು ಎಂದು ಟಿಟಿಡಿ ತಿಳಿಸಿದೆ.

ಪ್ರವಾಸೋದ್ಯಮ ಇಲಾಖೆಗಳ ಮೂಲಕ ಬರಲು ಬಯಸುವ ಭಕ್ತರು ಆಯಾ ರಾಜ್ಯ ಪ್ರವಾಸೋದ್ಯಮ ವೆಬ್‌ಸೈಟ್ ಮೂಲಕ ನೇರವಾಗಿ ದರ್ಶನ ಪ್ಯಾಕೇಜ್ ಟಿಕೆಟ್‌ಗಳನ್ನು ಪಡೆಯಲು ಅವಕಾಶವಿದೆ. ಆದರೆ ಕೆಲವು ದಲ್ಲಾಳಿಗಳು ಈ ಟೂರಿಸಂ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿ ಭಕ್ತರಿಂದ ಅಪಾರ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಹೀಗೆ ಭಕ್ತರಿಗೆ ಮೋಸ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಹೇಳಿದೆ. ಇನ್ನೂ ಶ್ರೀವಾರಿ ವಿಶೇಷ ಪ್ರವೇಶ ಶುಲ್ಕ 300 ರೂಪಾಯಿ ಕಡಿತಗೊಳಿಸಲಾಗುತ್ತಿದೆ, ಲಡ್ಡು ಪ್ರಸಾದ ಬೆಲೆಯಲ್ಲೂ ಇಳಿಕೆ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಇದು ಸತ್ಯವಲ್ಲ ಎಂದು ಟಿಟಿಡಿ ಹೇಳಿದೆ. ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಸಲಹೆ ನೀಡಿದೆ.












Click it and Unblock the Notifications