Train Ticket Booking & Tatkal: ರೈಲು ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಗುಡ್‌ನ್ಯೂಸ್, ಸಮಯ ಬದಲಾವಣೆ
Train ticket booking: ದೇಶದ ರೈಲ್ವೆ ಸೇವೆಯಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಎನ್ನುವುದು ವಿಶೇಷವಾದ ಅವಕಾಶವಾಗಿದೆ. ನೀವು ಕೊನೆಯ ಕ್ಷಣದಲ್ಲಿ ಯಾವುದಾದರೂ ಊರು ಅಥವಾ ಸ್ಥಳಕ್ಕೆ ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ, ತತ್ಕಾಲ್ ಸೇವೆ ಸಹಾಯಕ್ಕೆ ಬರುತ್ತದೆ. ಟಿಕೆಟ್ ಸಿಗದೆ ಹಾಗೂ ಕೊನೆಯ ಕ್ಷಣದಲ್ಲಿ ಟಿಕೆಟ್ ಬೇಕು ಎನ್ನುವವರಿಗೆ ತತ್ಕಾಲ್ ಸೇವೆಯು ಸಹಕಾರಿಯಾಗಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ತತ್ಕಾಲ್‌ನ ಸಮಯದಲ್ಲಿ ಬದಲಾವಣೆ ಮಾಡಿರುವುದು ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಟಿಕೆಟ್ ಪ್ರಕ್ರಿಯೆಗಳು ಸರಳೀಕರಣವಾಗಿದೆ. ಆದರೆ, ಟಿಕೆಟ್ ಸಿಗುವುದು ಕಷ್ಟವಾಗುತ್ತಿದೆ. ಹೀಗಾಗಿ, ಟ್ರೈನ್‌ನಲ್ಲಿ ಪ್ರಯಾಣ ಮಾಡಲು ಬಯಸುವ ಹಲವರು ತತ್ಕಾಲ್ ಮೊರೆ ಹೋಗುತ್ತಿದ್ದಾರೆ.
ಇದೀಗ ಭಾರತೀಯ ರೈಲ್ವೆಯು ಪ್ರಯಾಣ ಮಾಡುವ ಒಂದು ದಿನ ಮುಂಚಿತವಾಗಿ ಟ್ರೈನ್ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಕ್ರಿಯೆಯಾಗಿರುವ ತತ್ಕಾಲ್‌ನ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ತುರ್ತು ಸಮಯದಲ್ಲಿ ಹಾಗೂ ನಾಳೆಯೇ ಪ್ರಯಾಣ ಮಾಡಬೇಕು ಎನ್ನುವವರಿಗೆ ತತ್ಕಾಲ್ ಅತ್ಯಂತ ಸಹಕಾರಿಯಾಗಿದೆ. ದೇಶದಲ್ಲಿ ರೈಲು ಟಿಕೆಟ್‌ಗಳನ್ನು ನಿರ್ದಿಷ್ಟ ಸಮಯದಲ್ಲಿ ತತ್ಕಾಲ್‌ನ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

ತತ್ಕಾಲ್ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ
ಇನ್ನು ಭಾರತೀಯ ರೈಲ್ವೆಯು ತತ್ಕಾಲ್‌ನಲ್ಲಿ ಬದಲಾವಣೆ ಮಾಡಿದೆ. ತತ್ಕಾಲ್‌ನ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವವರ ಸಹಾಯಕ್ಕಾಗಿ ಹಾಗೂ ಸಮಯವನ್ನು ಸರಿಹೊಂದಿಸುವ ಕಾರಣದಿಂದ ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ಪ್ರಕ್ರಿಯೆಯನ್ನು ಅಪ್‌ಗ್ರೇಡ್ ಮಾಡಲಾಗಿದೆ. ಇದರಿಂದ ತತ್ಕಾಲ್ ಬುಕ್ಕಿಂಗ್ ಹೆಚ್ಚಿನ ಸಮಯ ಸಿಗಲಿದೆ. ದೇಶದಲ್ಲಿ ಇದೀಗ ತತ್ಕಾಲ್ ಟೈಮಿಂಗ್ಸ್ ಕೊಟ್ಟಿದ್ದರೂ ಕೆಲವೇ ನಿಮಿಷಗಳಲ್ಲಿ ತತ್ಕಾಲ್ ಮುಗಿದು ಹೋಗುತ್ತೆ. ಅಲ್ಲದೆ ತತ್ಕಾಲ್ (ತಾತ್ಕಾಲಿಕವಾಗಿ ಹಾಗೂ ತುರ್ತಾಗಿ ಸಿಗುವ ಟಿಕೆಟ್) ಸಮಯದಲ್ಲಿ ಸಿಕ್ಕಾಪಟ್ಟೆ ಒತ್ತಡ ಹಾಗೂ ಹೆಚ್ಚು ಜನ ಏಕಕಾಲಕ್ಕೆ ಲಾಗಿನ್ ಆಗಿ ಸರ್ವರ್ ಸಮಸ್ಯೆ ಆಗುವುದೂ ಇದೆ. ಈ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮುಂದಾಗಿದೆ.
ಇನ್ಮುಂದೆ ನೀವು ಎಸಿ ಕ್ಲಾಸ್‌ಗೆ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬೇಕೆಂದರೆ ಬೆಳಗ್ಗೆ 10:10 ರಿಂದಲೇ ಈ ಸೇವೆ ಪ್ರಾರಂಭವಾಗಲಿದೆ. ಇನ್ನು ನಾನ್ ಎಸಿ ಕ್ಲಾಸ್‌ನಲ್ಲಿ ತತ್ಕಾಲ್ ಬುಕಿಂಗ್ ಮಾಡುವ ಸಮಯವು ಬೆಳಗ್ಗೆ 11:10 ರಿಂದ ಒಪನ್ ಆಗಲಿದೆ.

ಯಾವುದಕ್ಕೆ ಯಾವಾಗ: AC ಕ್ಲಾಸ್‌ಗಳಿಗೆ (1A/2A/3A/CC/EC/3E) ತತ್ಕಾಲ್ ಟಿಕೆಟ್‌ಗಳನ್ನು ಬೆಳಿಗ್ಗೆ 10 ರಿಂದ ಹಾಗೂ ನಾನ್ ಎಸಿ ಕ್ಲಾಸ್ (SL/FC/2S) ತತ್ಕಾಲ್ ಟಿಕೆಟ್‌ಗಳನ್ನು ಬೆಳಗ್ಗೆ 11ರಿಂದ ಬುಕ್ ಮಾಡಿಕೊಳ್ಳಲು ಅವಕಾಶ ಇರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ತತ್ಕಾಲ್ ಬುಕ್ಕಿಂಗ್‌ನಲ್ಲಿನ ಒತ್ತಡ ಹಾಗೂ ಜನರಿಗೆ ಇನ್ನಷ್ಟು ಜನ ಸ್ನೇಹಿ ಸೇವೆಯನ್ನು ನೀಡುವ ಉದ್ದೇಶದಿಂದ ರೈಲ್ವೆ ಈ ರೀತಿಯ ಮಹ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ತತ್ಕಾಲ್ ಬುಕ್ಕಿಂಗ್ ಪ್ರಕ್ರಿಯೆ ಸರಳೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹೊಸ ಬದಲಾವಣೆಯಿಂದ ನಿಮಗೆ ತತ್ಕಾಲ್ ಬುಕ್ಕಿಂಗ್‌ನಲ್ಲಿ ಹೆಚ್ಚಿನ ಸಮಯ ಸಿಗಲಿದೆ ಎಂದು ಹೇಳಲಾಗಿದೆ.

ನಿಯಮ ಹೇಳುವುದೇನು ?
ತತ್ಕಾಲ್‌ನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆಯಾದರೂ, ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಇನ್ನು ಪಿಎನ್ಆರ್ಗೆ (Passenger Name Record) PNR ಗರಿಷ್ಠ ನಾಲ್ವರು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವುದಕ್ಕೆ ಅವಕಾಶ ಇರುತ್ತದೆ. ಇನ್ನು ಈ ಬುಕ್ಕಿಂಗ್ ಮಾಡುವಾಗ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಸೇರಿದಂತೆ ಯಾವುದಾರೂ ಪ್ರಮುಖ ಗುರುತಿನ ಪುರಾವೆಗಳು ಬೇಕಾಗುತ್ತವೆ. ಇನ್ನು ರೈಲು ಕ್ಯಾನ್ಸಲ್ ಆದರೆ ಮಾತ್ರ ತತ್ಕಾಲ್ ಟಿಕೆಟ್‌ಗಳ ಮರುಪಾವತಿ ಸಿಗಲಿದೆ. ಇದರ ಹೊರತಾಗಿ ಹಣ ವಾಪಸ್ ಬರಲ್ಲ.












Click it and Unblock the Notifications