ಚಿತ್ರ ಸುದ್ದಿ: ನದಿಗಳ ಜೋಡಣೆಗೆ ಜೈ ಎಂದ ಡಿಎಂಕೆ
ಚೆನ್ನೈ, ಮಾ.12: ಸಾಮಾಜಿಕ ನ್ಯಾಯ ಮತ್ತು ಪೆರಿಯಾರ್ ರವರ ತತ್ವಾದರ್ಶಗಳು ಪಕ್ಷದ ಪ್ರಣಾಳಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಹೇಳಿದ್ದಾರೆ. ರಿಟೇಲ್ ವ್ಯಾಪಾರದ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಪಕ್ಷ ವಿರೋಧಿಸಿದೆ. ಮೀನುಗಾರರಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ಒದಗಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ನದಿಗಳ ಜೋಡಣೆ ಮತ್ತು ನದಿ ನೀರು ರಾಷ್ಟ್ರೀಕರಣ, ಖಾಸಗಿ ರಂಗದಲ್ಲಿ ಮೀಸಲಾತಿ ಮತ್ತು ತಮಿಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವುದು-ಇವೇ ಮುಂತಾದ ಪ್ರಸ್ತಾಪಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪಕ್ಷ ಆಗ್ರಹಿಸಿದೆ. ಯುಪಿಎ ಸರಕಾರದ ಅವಧಿಯಲ್ಲಿ ಆರಂಭಿಸಿದ್ದ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಜೊತೆಗೆ ಪಾಂಡಿಚೇರಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಲಭಿಸಬೇಕು ಎಂದು ಪಕ್ಷ ಕೋರಿದೆ. ಈ ನಡುವೆ ಪ್ರಧಾನಿ ಅಭ್ಯರ್ಥಿಗಳಾಗಿ ನರೇಂದ್ರ ಮೋದಿ ಇಲ್ಲವೇ ರಾಹುಲ್‌ಗಾಂಧಿ ಅವರನ್ನು ತಮ್ಮ ಪಕ್ಷ ಬೆಂಬಲಿಸುವುದಿಲ್ಲ ಎಂದು ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಘೋಷಿಸಿದರು.
ಉಳಿದಂತೆ ಚಿತ್ರ ಸುದ್ದಿಗಳಲ್ಲಿ ಆಮ್ ಆದ್ಮಿ ಪಕ್ಷದ ಕರ್ನಾಟಕ ಅಭ್ಯರ್ಥಿಗಳ ಗ್ರೂಪ್ ಫೋಟೊ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಮಂಜು ಆವರಿಸಿ ಹೆದ್ದಾರಿ ಬಂದ್, ರಾಜಸ್ಥಾನದಲ್ಲಿ ಬಂದಿಯಾದ ರಾಗಿಣಿ ಎಂಎಂಎಸ್ 2 ನಾಯಕಿ, ಕಾನ್ ಪುರದಲ್ಲಿ ವಾಯುಸೇನೆ ಸೆಲ್ಯೂಟ್, ಜೈಪುರದ ಲಾಥ್ ಮಾರ್ ಹೋಳಿ, ಛತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂತಾದ ಚಿತ್ರಗಳಿವೆ..

ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಎಂಕೆ
ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಸರಕಾರದ ಅಂಗಪಕ್ಷವಾಗಿ ಡಿಎಂಕೆ ಮಾಡಿರುವ ಒಳ್ಳೆಯ ಕೆಲಸಗಳು ಮತ್ತು ಪಕ್ಷದ ಸಾಧನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಡಿಎಂಕೆ ಪಕ್ಷದ ಪ್ರಣಾಳಿಕೆ
ಡಿಎಂಕೆ ಕೆಲವು ದಲಿತ ಮತ್ತು ಮುಸ್ಲಿಂ ಸಂಘಟನೆಗಳ ಜೊತೆಗೆ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. 2ಜಿ ಹಗರಣದ ಆರೋಪಿಯಾಗಿ ಜೈಲು ಸೇರಿದ್ದ ಮಾಜಿ ಕೇಂದ್ರ ಸಚಿವ ಎ. ರಾಜಾ, ಬಾಲು, ಪುತ್ರಿ ಕನ್ನಿಮೋಳಿ, ಸ್ಟಾಲಿನ್ ಅವರು ಕರುಣಾನಿಧಿ ಜತೆ ಉಪಸ್ಥಿತರಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಮಂಜು
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಮಂಜು ಆವರಿಸಿದ್ದು ಶ್ರೀನಗರ-ಜಮ್ಮು ಹೆದ್ದಾರಿ ಬಂದ್ ಆಗಿದೆ. ಹಿಮಪಾತದ ನಡುವೆ ವ್ಯಕ್ತಿಯೊಬ್ಬರು ನಡೆದಾಡುವ ದೃಶ್ಯ PTI Photo by S Irfan

ಜೈಪುರದ ಲಾಥ್ ಮಾರ್ ಹೋಳಿ
ರಾಜಸ್ಥಾನದ ಜೈಪುರದ ಲಾಥ್ ಮಾರ್ ಹೋಳಿ ಅಂಗವಾಗಿ ಗೋವಿಂದ್ ದೇವ್ ಜಿ ದೇಗುಲದಲ್ಲಿ ನಡೆದ ಹಾಡು ನೃತ್ಯ ಕಾರ್ಯಕ್ರಮ

ಛತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ
ಛತ್ತೀಸ್ ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮೆರೆದಿದ್ದು ಅನೇಕ ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣರಾಗಿದ್ದಾರೆ. ರಾಯ್ ಪುರದ ಆಸ್ಪತ್ರೆಗೆ ಯೋಧರನ್ನು ಸಾಗಿಸುವಾಗ ಫೋಟೋ ಜರ್ನಲಿಸ್ಟ್ ಗಳು ಚಿತ್ರ ತೆಗೆಯಲು ಮುಗಿಬಿದ್ದರು. ಛತ್ತೀಸ್ ಗಢದ ನಕ್ಸಲರ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಪಡೆಯನ್ನು ರಾಜ್ಯಕ್ಕೆ ಕಳಿಸಿದೆ. ಏ.10, 17ರಂದು ಇಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಫೋಟೊ
ಆಮ್ ಆದ್ಮಿ ಪಕ್ಷದ ಕರ್ನಾಟಕ ಅಭ್ಯರ್ಥಿಗಳ ಗ್ರೂಪ್ ಫೋಟೊ

ರಾಗಿಣಿ ಎಂಎಂಎಸ್ 2 ನಾಯಕಿ
ರಾಗಿಣಿ ಎಂಎಂಎಸ್ 2 ನಾಯಕಿ ಸನ್ನಿ ಲಿಯೋನ್ ಜೈಪುರದಲ್ಲಿ ಪ್ರಚಾರದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಕಾನ್ ಪುರದಲ್ಲಿ ವಾಯುಸೇನೆ ಸೆಲ್ಯೂಟ್
ಕಾನ್ ಪುರದಲ್ಲಿ ವಾಯುಸೇನೆ ಯೋಧರಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸೆಲ್ಯೂಟ್

ಮೂರು ಮರಿಗಳೊಂದಿಗೆ ಸಿಂಹಿಣಿ
ಪೋಲ್ಯಾಂಡ್ ನ ಜೂನಲ್ಲಿ ಮಂಗಳವಾರ ಕಂಡು ಬಂದ ಮೂರು ಮರಿಗಳೊಂದಿಗೆ ಸಿಂಹಿಣಿ ಇರುವ ಚಿತ್ರ. ಏಪ್ರಿಲ್ ನಂತರ ಸಾರ್ವಜನಿಕರ ದರ್ಶನಕ್ಕೆ ಮರಿಗಳನ್ನು ಬಿಡಲಾಗುತ್ತದೆ AP/ PTI












Click it and Unblock the Notifications