Get Updates
Get notified of breaking news, exclusive insights, and must-see stories!

Tirupati Laddu row: ಆಂಧ್ರ ಮಾಜಿ ಸಿ.ಎಂ ಜಗನ್ ಮೋಹನ್‌ ರೆಡ್ಡಿಗೆ ಸ್ವಪಕ್ಷದಿಂದಲೇ ಮುಜುಗರ

ತಿರುಪತಿಯ ಪ್ರಸಾದವಾದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವನ್ನು ಬಳಸಲಾಗಿದೆ ಎನ್ನುವ ಗಂಭೀರ ಆರೋಪ ಇದೆ. ಇದಕ್ಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿಯೇ ಕಾರಣ, ಅವರ ನಿರ್ಲಕ್ಷ್ಯದಿಂದಲೇ ಈ ತಪ್ಪು ನಡೆದಿದೆ. ವೈಎಸ್ಆರ್ ಕಾಂಗ್ರೆಸ್‌ ಆಡಳಿತದಲ್ಲೇ ಈ ತಪ್ಪು ನಡೆದಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಆರೋಪಿಸಿದ್ದಾರೆ. ಈ ನಡುವೆ ಅವರ ಪಕ್ಷದಿಂದಲೇ ಜಗನ್‌ಗೆ ಮುಜುಗರ ಎದುರಾಗಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ವೈಎಸ್‌ ಜಗನ್‌ಮೋಹನ್‌ ರೆಡ್ಡಿ ಅವರು ಸ್ವಪಕ್ಷದವರಿಂದಲೇ ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕಿ, ಆಂಧ್ರಪ್ರದೇಶದ ಮಾಜಿ ಸಚಿವೆ ಹಾಗೂ ನಟಿ ರೋಜಾ ಅವರು ಮಾಡಿರುವ ಪೋಸ್ಟ್‌ನಿಂದಾಗಿ ಇದೀಗ ಜಗನ್‌ ಮೋಹನ್‌ ರೆಡ್ಡಿ ಅವರು ಮುಜುಗರ ಎದುರಿಸುವಂತಾಗಿದೆ. ರೋಜಾ ಅವರು, ಆರ್‌ಕೆ ರೋಜಾ ಸೆಲ್ವಮಣಿ ಎನ್ನುವ ಯೂಟ್ಯೂಬ್‌ ಚಾನೆಲ್‌ನಿಂದ ಮಾಡಿರುವ ಪೋಸ್ಟ್‌ (ಕಮ್ಯೂನಿಟಿ ಪೋಸ್ಟ್‌)ನಿಂದ ಜಗನ್‌ ಮೋಹನ್‌ ರೆಡ್ಡಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗಿದೆ. ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯವಾದ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಬಳಸುವ ತುಪ್ಪದಲ್ಲಿ ಹಸು, ಹಂದಿಯ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಎನ್ನುವ ಆರೋಪದ ನಡುವೆ ರೋಜಾ ಅವರು ಮಾಡಿರುವ ಪೋಸ್ಟ್‌ ಅವರಿಗೆ ಹಾಗೂ ಅವರ ಪಕ್ಷಕ್ಕೆ ತಿರುಗುಬಾಣವಾಗಿದೆ.

Tirupati Laddu row Former Andhra CM Jagan Mohan Reddy is embarrassed by his own party

ಮೂರು ಪೋಸ್ಟ್‌ನಿಂದ ಮುಜುಗರ

ನಟಿ ಹಾಗೂ ಮಾಜಿ ಸಚಿವೆ ರೋಜಾ ಅವರು ಯೂಟ್ಯೂಬ್‌ ಚಾನೆಲ್‌ನಲ್ಲಿ ತಿರುಪತಿ ಪ್ರಸಾದವಾದ ಲಡ್ಡಿನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಪೋಸ್ಟ್‌ಗಳಿಗೆ ಜನ ಚಂದ್ರಬಾಬು ನಾಯ್ಡು ಅವರ ಪರವಾಗಿಯೇ ಹೆಚ್ಚು ಮತ ಚಲಾಯಿಸಿದ್ದಾರೆ. ತಿರುಮಲ ದೇವಸ್ಥಾನದ ನಿರ್ವಹಣೆಯನ್ನು ಆಂಧ್ರಪ್ರದೇಶದ ಯಾವ ಮುಖ್ಯಮಂತ್ರಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಆಯ್ಕೆಯಾಗಿ ಜಗನ್‌ ಮೋಹನ್‌ ರೆಡ್ಡಿ ಹಾಗೂ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ತಿರುಪತಿ ದೇವಸ್ಥಾನವನ್ನು ಚಂದ್ರಬಾಬು ನಾಯ್ಡು ಅವರ ಆಡಳಿತ ಅವಧಿಯಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಶೇಕಡ 74ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಉಳಿದ 24ರಷ್ಟು ಜನ ಮಾತ್ರ ಜಗನ್‌ ಪರವಾಗಿ ಮತ ಚಲಾಯಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ತಿರುಪತಿ ಲಡ್ಡು ವಿವಾದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಆಯ್ಕೆಯಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದಕ್ಕೂ ಜನ ತಿರುಗೇಟು ನೀಡಿದ್ದಾರೆ. ಇದರಲ್ಲಿ ಪವನ್‌ ಕಲ್ಯಾಣ್‌ ಹೊಣೆ ಎಂದು ಶೇ 8ರಷ್ಟು ಜನ, ಚಂದ್ರಬಾಬು ನಾಯ್ಡು ಕಾರಣ ಎಂದು 21 ಪ್ರಮಾಣದಷ್ಟು ಜನ ಹಾಗೂ ಜಗನ್‌ ಮೋಹನ್‌ ರೆಡ್ಡಿ ಅವರೇ ಕಾರಣ ಎಂದು ಶೇ 71ರಷ್ಟು ಜನ ಅಭಿಪ್ರಾಯ ತಿಳಿಸಿದ್ದಾರೆ. ಈ ಎಲ್ಲ ಪೋಸ್ಟ್‌ಗಳಲ್ಲೂ ಜಗನ್‌ ಮೋಹನ್‌ ರೆಡ್ಡಿಗೆ ಹಿನ್ನಡೆ ಆಗಿದೆ.

ಡಿಲೀಟ್‌ ಮಾಡುವಂತೆ ಮನವಿ

ರೋಜಾ ಅವರು ಯೂಟ್ಯೂಬ್‌ನಲ್ಲಿ ಮಾಡುತ್ತಿರುವ ಪೋಸ್ಟ್‌ಗಳಿಂದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಈ ಸೂಕ್ಷ್ಮ ಸಂದರ್ಭದಲ್ಲಿ ಈ ರೀತಿಯ ಪೋಸ್ಟ್‌ ಅಭಿಪ್ರಾಯ ಅನವಶ್ಯಕವಾಗಿತ್ತು. ದಯವಿಟ್ಟಯ ಈ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಜನ ವಿರೋಧಿ ಅಭಿಪ್ರಾಯ ಸಂಗ್ರಹವಾದರೂ, ಈ ಪೋಸ್ಟ್‌ಗಳನ್ನು ರೋಜಾ ಅವರು ಅಳಿಸಿಲ್ಲ. ಇನ್ನು ಕೆಲವರು ಈ ಪೋಸ್ಟ್‌ ಅನ್ನು ದಯವಿಟ್ಟು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿ ಎಂದು ಸಹ ವ್ಯಂಗ್ಯವಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+