ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಗೆಲುವಿನ ಓಟ ಮುಂದುವರಿಯಲಿದೆಯೇ?

By Pathikrit Payne
|
Google Oneindia Kannada News

ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಕಮಲ ಅರಳುವ ಮೂಲಕ ಮೋದಿ ಅಲೆ ಮಾಯವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮಿತ್ ಶಾ ಮತ್ತು ಇತರ ನಾಯಕರ ಸಂಘಟಿತ ಪ್ರಯತ್ನದ ಆಧಾರಲ್ಲಿ ಬಿಜೆಪಿ ಹರ್ಯಾಣದಲ್ಲಿ ಅಧಿಕಾರ ಹಿಡಿದರೆ ಮಹಾರಾಷ್ಟ್ರದಲ್ಲಿ ಗದ್ದುಗೆ ಸಮೀಪ ಬಂದು ನಿಂತಿದೆ.

ತಿಂಗಳ ಹಿಂದೆ ಉತ್ತರ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನೇನೂ ಮಾಡಿರಲಿಲ್ಲ, ಮೋದಿ ಅಲೆ ಮಾಯವಾಯಿತು ಎಂದೇ ರಾಜಕೀಯ ಚಿಂತಕರು ವಿಶ್ಲೇಷಿಸಿದ್ದರು. ಆದರೆ ಫಲಿತಾಂಶ ಮತ್ತೊಮ್ಮೆ ಬಿಜೆಪಿ ಪರವಾಗಿ ಬಂದಿದೆ. ಮೋದಿ ಮ್ಯಾಜಿಕ್ ಮಾಯವಾಗಿದೆ ಎಂಬ ಟೀಕಾಕಾರರ ಮಾತಿಗೂ ಬ್ರೇಕ್ ಬಿದ್ದಿದೆ.

bjp

ಲೋಕಸಭಾ ಚುನಾವಣೆಗೂ ಮತ್ತು ವಿಧಾನಸಭೆ ಚುನಾವಣೆಗೂ ಪರಿಸ್ಥಿತಿ ಭಿನ್ನವಾಗಿರುತ್ತದೆ, ಆದರೂ ಬಿಜೆಪಿ ಗೆಲುವು ಸಾಧಿಸಿದೆ. ಇದು ಕೇಂದ್ರ ನಾಯಕತ್ವ ಮತ್ತು ಪ್ರಚಾರಕ್ಕೆ ಬಳಸಿಕೊಂಡ ಅಂಶಗಳಿಂದ ಸಾಧ್ಯವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.[ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ?]

ಹರ್ಯಾಣದಲ್ಲಿ ಇತಿಹಾಸ ನಿರ್ಮಾಣ
2009 ರಲ್ಲಿ ಕೇವಲ 4 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 47 ಕ್ಷೇತ್ರಗಳಲ್ಲಿ ಜಯಗಳಿಸಿ ಗದ್ದುಗೆ ಏರಿದೆ. ರಾಜ್ಯ ಮತ್ತು ಕೇಂದ್ರದ ಗಟ್ಟಿ ನಾಯಕತ್ವವೇ ಇದಕ್ಕೆ ಕಾರಣ. ದೆಹಲಿಯಂಥದ್ದೇ ಪರಿಸ್ಥಿತಿ ಹರ್ಯಾಣದಲ್ಲಿದ್ದರೂ ಅಮಿತ್ ಷಾ ಮತ್ತು ನರೇಂದ್ರ ಮೋದಿ ತೋರಿದ ವಿಶೇಷ ಆಸಕ್ತಿ ಬಿಜೆಪಿಗೆ ಜನ ಮತ ನೀಡುವಂತೆ ಮಾಡಿತು ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷ
ಶಿವಸೇನೆಯೊಂದಿಗಿನ ಮೈತ್ರಿ ಕಳೆದುಕೊಂಡು ಅಖಾಡಕ್ಕಿಳಿದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಲ್ಲದೇ ಕಾಂಗ್ರೆಸ್ ಮತ್ತು ಎನ್ ಸಿಪಿಯ ಬಹುತೇಕ ಸ್ಥಾನಗಳನ್ನು ಕಸಿದುಕೊಂಡಿತು. ಎರಡನೇ ದೊಡ್ಡ ಪಕ್ಷವಾಗಿ ಮೂಡಿಬಂದ ಶಿವಸೇನೆ ಕೇಸರಿ ಪಾಳಯಕ್ಕೆ ಸೇರಿದ್ದು ಎಂಬುದು ಗಮನಿಸಬೇಕಾದ ಅಂಶ. ಕಳೆದ ಎರಡು ದಶಕದಲ್ಲೇ ಬಿಜೆಪಿ ಕಂಡರಿಯದ ಸಾಧನೆ ಮಾಡಿತು.[ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಇಲ್ಲಿದೆ]

ಬೇಷರತ್ ಬೆಂಬಲ ನೀಡುತ್ತೇನೆ ಎಂದ ಎನ್ ಸಿಪಿ
ಕೇಸರಿ ಪಾಳಯದ ಕಡು ವಿರೋಧಿಯಾಗಿದ್ದ ಎನ್ ಸಿಪಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೇಷರತ್ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದು ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಎನ್ ಸಿಪಿ ಮುಖಂಡರ ಮೇಲಿರುವ ಹಗರಣ ಆರೋಪಗಳು, ಆ ಪಕ್ಷದ ಇತಿಹಾಸ ಅದು ಇಲ್ಲಿಯವರೆಗೆ ನಡೆದುಕೊಂಡು ಬಂದ ರೀತಿ ಎಲ್ಲವೂ ಬಿಜೆಪಿ ಸಖ್ಯಕ್ಕೆ ಅಡ್ಡಗಾಲಾಗಿ ಪರಿಣಮಿಸಿತು.

ಲೋಕಸಭಾ ಗೆಲುವು ಆಕಸ್ಮಿಕವಲ್ಲ
ಈ ಎರಡು ರಾಜ್ಯಗಳ ಫಲಿತಾಂಶ ಬಿಜೆಪಿಯ ಲೋಕಸಭಾ ಚುನಾವಣೆಯ ಅಭೂತಪೂರ್ವ ಗೆಲುವು ಆಕಸ್ಮಿಕವಲ್ಲ ಅಥವಾ ಕೇವಲ ಮೋದಿ ಅಲೆಯಿಂದ ಆಗಿದ್ದಲ್ಲ ಎಂಬುದನ್ನೂ ಸ್ಪಷ್ಟಪಡಿಸಿದವು. ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ಚುನಾವಣೆಗಳು ಇನ್ನೇನು ಹತ್ತಿರ ಬರುತ್ತಿವೆ. ಅಲ್ಲದೇ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲೂ ಚುನಾವಣೆ ಎದುರಾಗಲಿದೆ. ಅಲ್ಲಿಯೂ ರಾಷ್ಟ್ರೀಯ ಪಕ್ಷವೇ ಪಾರುಪತ್ಯ ಮೆರೆದರೆ ಆಶ್ಚರ್ಯವಿಲ್ಲ.

ಹಾಗಾದರೆ ಕಾಂಗ್ರೆಸ್ ಪರಿಸ್ಥಿತಿ ಏನು?
ಇತ್ತ ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಫಲಿತಾಂಶ ಹೊರಬಿದ್ದಿದ್ದರೆ ಅದೆ ಸಮಯಕ್ಕೆ ಸರಿಯಾಗಿ ರಾಹುಲ್ ಗಾಂಧಿ ಹುಡ್ ಹುಡ್ ಸಂತ್ರಸ್ತರ ಭೇಟಿಗೆ ತೆರಳಿದ್ದರು. ಅಷ್ಟೂ ದಿನ ನೆನಪಾಗದ ಸಂತ್ರಸ್ತರು ಇದ್ದಕ್ಕಿದ್ದಂತೆ ಜ್ಞಾಪಕಕ್ಕೆ ಬಂದಿದ್ದು ಯಾಕೆ? ಉತ್ತರ ಸರಳ ಚುನಾವಣಾ ಸೋಲಿಗೆ ಪ್ರತಿಕ್ರಿಯೆ ನೀಡುವಷ್ಟು ಚೈತನ್ಯ ರಾಹುಲ್ ಬಳಿ ಇರಲಿಲ್ಲ. ನಾಯಕತ್ವ ಕೊರತೆ, ಒಳಜಗಳಗಳು, ಸ್ಪಷ್ಟ ಸಿದ್ಧಾಂತಗಳಿಲ್ಲದಿದ್ದರೆ ಪಕ್ಷ ಸಂಘಟನೆ ಕಷ್ಟ ಸಾಧ್ಯ ಎಂಬ ಸಂಗತಿ ಕಾಂಗ್ರೆಸ್ ನಾಯಕರಿಗೆ ಆದಷ್ಟು ಬೇಗ ಮನವರಿಕೆಯಾಗಬೇಕಿದೆ.

ಮೋದಿ ಮುಂದಿನ ನಡೆ ಏನು?
ನರೇಂದ್ರ ಮೋದಿ ಸರ್ಕಾರ ಇನ್ನಷ್ಟು ಆರ್ಥಿಕ ಸುಧಾರಣೆ ಕ್ರಮಗಳನ್ನು ತೆಗೆದುಕೊಂಡರೆ ಆಶ್ಚರ್ಯವಿಲ್ಲ. ಯೋಜನೆಗಳನ್ನು ಜಾರಿ ಮಾಡುವುದು ಅಷ್ಟೇ ಅಲ್ಲದೇ ಮೋದಿ ಸರ್ಕಾರ ಅವುಗಳ ಪ್ರಚಾರ ಮತ್ತು ಅನುಷ್ಠಾನಕ್ಕೆ ವಿಶೇಷ ಒತ್ತು ನೀಡುತ್ತಿದೆ. ಪರಿಣಾಮ ಎಂಬಂತೆ ತೈಲ ಬೆಲೆ ಇಳಿಕೆ ಕಂಡಿದ್ದು, ಹಣದುಬ್ಬರದಲ್ಲೂ ಸುಧಾರಣೆಯಾಗಿದೆ. ಇನ್ನೊಂದೆಡೆ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಅಮಿತ್ ಶಾ ಮತ್ತು ಅವರ ತಂಡ ಈಗಾಗಲೇ ರಣತಂತ್ರ ಹೆಣೆಯಲು ಆರಂಭಿಸಿದೆ.

English summary
Only a month back by-elections for 11 assembly seats had taken place in Uttar Pradesh and for a few seats in Rajasthan and Gujarat. Many political analysts were gleefully writing obituaries of Modi-led BJP after it did not fare all too well in those by-elections with the party barely winning 3 out of the 11 assembly seats in UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X