Get Updates
Get notified of breaking news, exclusive insights, and must-see stories!

Jammu Kashmir Election Results 2024: ಮೈತ್ರಿ ಸರ್ಕಾರಕ್ಕೆ ಮುನ್ನುಡಿ ಬರೆಯಲಿದ್ಯಾ ಕಣಿವೆ ರಾಜ್ಯ?

ಜಮ್ಮು ಕಾಶ್ಮೀರದಲ್ಲಿ ಇಂದು ಮತ ಎಣಿಕೆ ಭರದಿಂದ ಸಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಸದ್ಯ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಕೂಡ ಕಾಂಗ್ರೆಸ್‌ಗೆ ಟಕ್ಕರ್‌ ನೀಡುತ್ತಿದೆ. ಮೊನ್ನೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಜಮ್ಮುಕಾಶ್ಮೀರದ ಫಲಿತಾಂಶದ ಬಗ್ಗೆ ಅತಂತ್ರ ಅಭಿಪ್ರಾಯಗಳು ವ್ಯಕ್ತವಾಗಿತ್ತು.

ಹಾಗಾಗಿ ಈ ಬಾರಿ ಕಣಿವೆ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಬರುವುದು ಅನುಮಾನ. ಬದಲಿಗೆ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಹರಿಯಾಣದಲ್ಲಿ ಕಾಂಗ್ರೆಸ್‌ ಬಹುತೇಕ ಮುನ್ನಡೆಯಲ್ಲಿದ್ದು, ಇತ್ತ ಜಮ್ಮುಕಾಶ್ಮೀರದಲ್ಲೂ ಲೀಡ್‌ ತೆಗೆದುಕೊಂಡಿದೆ.

The Formation Of A Coalition Government In Jammu and Kashmir Is Almost Certain

ಈ ಬಾರಿ ಹೇಗಾದರೂ ಮಾಡಿ ಜಮ್ಮುಕಾಶ್ಮೀರದಲ್ಲಿ ಕೇಸರಿ ಬಾವುಟ ಹಾರಿಸಲೇಬೇಕು ಎಂದಿರುವ ಬಿಜೆಪಿ ಕೂಡ ಕಾಂಗ್ರೆಸ್‌ನ ಹಿಂದೆಯೇ ಇದ್ದು, ಇಂದು ಸಂಜೆ ವೇಳೆಗೆ ಫಲಿತಾಂಶದಲ್ಲಿ ಏರುಪೇರಾಗುವ ಸಾಧ್ಯತೆಯೂ ಇದೆ. ಆದರೆ, ಮೂಲಗಳ ಪ್ರಕಾರ ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದರೂ ಪೂರ್ಣ ಬಹುಮತ ಸಿಗುವುದು ಅನುಮಾನ ಎನ್ನಲಾಗಿದೆ.

ಹಾಗಾಗಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡೇ ಅಧಿಕಾರಕ್ಕೇರಬೇಕು ಎಂದು ಹೇಳಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್‌ ಇನ್ನಿತರೆ ಪಕ್ಷಗಳನ್ನು ಸೇರಿಸಿಕೊಂಡು ತಮ್ಮದೇ ಸರ್ಕಾರವನ್ನು ಅಧಿಕಾರದಲ್ಲಿ ಕೂರಿಸಬೇಕು ಎಂದು ತೆರೆಮರೆಯಲ್ಲಿ ಕಸರತ್ತು ಕೂಡ ನಡೆಸುತ್ತಿದೆಯಂತೆ.

The Formation Of A Coalition Government In Jammu and Kashmir Is Almost Certain

ಭಾರತದ ಮುಕುಟದಂತಿರುವ ಜಮ್ಮು-ಕಾಶ್ಮೀರಕ್ಕೂ ಕಾಂಗ್ರೆಸ್‌ಗೂ ಹಿಂದಿನಿಂದಲೂ ನಂಟಿದೆ. ಹಾಗಾಗಿ ಈ ರಾಜ್ಯವನ್ನು ಗೆದ್ದುಕೊಂಡಿದ್ದೇ ಆದಲ್ಲಿ ಕಾಂಗ್ರೆಸ್‌ಗೆ ಮುಂದಿನ ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ. ಬಿಜೆಪಿಗೆ ಟಕ್ಕರ್‌ ಕೊಡುವಲ್ಲಿ ಜಮ್ಮುಕಾಶ್ಮೀರದ ಗೆಲುವು ಕಾಂಗ್ರೆಸ್‌ಗೆ ಅನಿವಾರ್ಯ ಎನ್ನಲಾಗಿದೆ.

ಜೆಕೆಎನ್‌ಸಿ ಮುಖಂಡ ಹಾಜಿ ಮುಬಾರಕ್ ಗುಲ್ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ರಾಜ್ಯಾದ್ಯಂತ ನ್ಯಾಷನಲ್ ಕಾನ್ಫರೆನ್ಸ್ ಗೆಲ್ಲುವ ವಿಶ್ವಾಸವಿದೆ. ಬೇರೆ ಯಾವುದೇ ಆಯ್ಕೆ ಇದ್ದಿದ್ದರೆ ಜನರು ಆ ಪಕ್ಷಕ್ಕೆ ಮತ ಹಾಕುತ್ತಿದ್ದರು ಎಂದಿದ್ದಾರೆ.

ಜಮ್ಮು ದಕ್ಷಿಣದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮನ್ ಭಲ್ಲಾ ಅವರ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ. ನಾವು ಇದನ್ನು ಮೊದಲೇ ನಿರೀಕ್ಷಿಸಿದ್ದೆವು. ಏಕೆಂದರೆ ನಾವು ಚುನಾವಣೆಗೂ ಮುನ್ನ ನಡೆದ ಸಾರ್ವಜನಿಕ ಪ್ರಚಾರದ ವೇಳೆ ಹೆಚ್ಚಿನ ಜನಸಂದಣಿಯನ್ನು ನೋಡಿದ್ದೇವೆ. ಇದು 2014 ಮತ್ತು 2024ರ ನಡುವೆ ಜಮ್ಮು ಕಾಶ್ಮೀರದ ಜನ ಎಷ್ಟು ನೊಂದಿದ್ದರು ಎಂಬುದನ್ನು ಸಾಕ್ಷಿ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ನಮಗೆ ಬಹುತೇಕ ಖಚಿತವಾಗಿದೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆ. ಬಿಜೆಪಿಯ ಭರವಸೆಗಳು ಹಾಗೂ ಕೆಲಸಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಪ್ರಸ್ತುತ ಬಿಜೆಪಿ ಸರ್ಕಾರವು ಅಲುಗಾಡುತ್ತಿದೆ ಎಂದು ಬಿಷ್ನಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ನೀರಜ್ ಕುಂದನ್ ಹೇಳಿದ್ದಾರೆ.

ಒಟ್ಟಾರೆ ಜಮ್ಮುಕಾಶ್ಮೀರದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗುವುದು ಅನುಮಾನವಾಗಿದ್ದು, ಇಂದು ಸಂಜೆಯವರೆಗೆ ಮತ ಎಣಿಕೆಯ ಹಾವು ಏಣಿ ಆಟ ನಡೆಯಲಿದೆ. ಇಂದೇ ಯಾವ ಪಕ್ಷ ಕಣಿವೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂಬುದು ಬಹುತೇಕ ಖಚಿತವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+