Peoples Plus exit poll of Telangana 2023: ಕಾಂಗ್ರೆಸ್‌ಗೆ ಗೆಲುವು, ಫಲಿತಾಂಶ ತಿರಸ್ಕರಿಸಿದ ಬಿಜೆಪಿ, ಬಿಆರ್‌ಎಸ್?
ನವದೆಹಲಿ, ನವೆಂಬರ್ 30: ತೆಲಂಗಾಣ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗಿದೆ. ಅಂದಾಜಿನ ಪ್ರಕಾರ ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಒಟ್ಟು ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 62-72ಸ್ಥಾನ ಪಡೆದು ಗೆಲ್ಲಲಿದೆ ಎಂದು ಪೀಪಲ್ಸ್ ಪ್ಲಸ್ (Peoples Plus) ಸಂಸ್ಥೆಯ ಸಮೀಕ್ಷೆಗಳು ತಿಳಿಸಿವೆ.
ಪೀಪಲ್ಸ್ ಪ್ಲಸ್ (Peoples Plus) ಚುನಾವಣೋತ್ತರ ಫಲಿತಾಂಶದಲ್ಲಿ ಭಾರತ್ ರಾಷ್ಟ್ರೀಯ ಸಮಿತಿಗೆ (ಬಿಆರ್‌ಎಸ್) 35ರಿಂದ 46 ಸೀಟು ಗೆಲ್ಲಬಹುದು. ಈ ಮೂಲಕ ಅರ್ಧಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದುಕೊಂಡು ಸೋಲುಣ್ಣುವ ಸಾಧ್ಯತೆಗಳು ಇವೆ ಎಂದಿದೆ.

ಉಳಿದಂತೆ ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕರೆತಂದು ಅಬ್ಬರದ ಪ್ರಚಾರ ಮಾಡಿದ್ದ, ಮತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ತಿಳಿಸಿದ್ದ ಬಿಜೆಪಿಗೆ ಕೇವಲ 3ರಿಂದ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಎಂಐಎಂಐಎಂಗೆ 6-7 ಸ್ಥಾನ, ಇತರೆ 1-2 ಸ್ಥಾನ ಗೆಲ್ಲಿಲಿವೆ ಎಂದು ಮಾಹಿತಿ ನೀಡಿದೆ.
ತೆಲಂಗಾಣ ಸೇರಿದಂತೆ ವಿವಿಧ ಇತರ ರಾಜ್ಯಗಳ ವಿಧಾನಸಭಾ ಚುನಾವಣೋತ್ತರ ಫಲಿತಾಂಶವನ್ನು ಬಿಜೆಪಿ ತಿರಸ್ಕರಿಸಿದೆ. ಈ ಸಮೀಕ್ಷೆ ಅಂಶಗಳು ಸತ್ಯವಲ್ಲ. ನಾವೇ ಕೆಲವೆಡೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಅಸಲಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಪಕ್ಷಗಳ ಮಧ್ಯೆ ಭಾರಿ ಪೈಫೋಟಿ ಉಂಟಾಗಿತ್ತು. ಪರಸ್ಪರ ಯೋಜನೆಗಳ ಘೋಷಣೆ ಮಟ್ಟಿಗೆ ಸ್ಪರ್ಧೆಗೆ ಇಳಿದಿದ್ದವು. ಇದೀಗ ಕಾಂಗ್ರೆಸ್‌ಗೆ ನಿರೀಕ್ಷೆಯಂತೆ ಸ್ಥಾನ ಲಭಿಸಿವೆ ಎಂದು ಈ ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.












Click it and Unblock the Notifications