India Tv-CNX Exit Poll: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನ, ಸೋಲುಂಡ ಪಕ್ಷಗಳ ಸ್ಥಾನವೆಷ್ಟು, ಮಾಹಿತಿ
ನವದೆಹಲಿ, ನವೆಂಬರ್ 30: ಪಂಚರಾಜ್ಯಗಳ ಪೈಕಿ ಒಂದಾದ ತೆಲಂಗಾಣದಲ್ಲಿ ಇಂದು ಮತದಾನ ಸುಸೂತ್ರವಾಗಿ ನಡೆದಿದ್ದು, ಇಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸುಳಿವು, ಮತದಾರರ ನಾಡಿಮಿಡಿತ ಏನೆಂದು ಬಹಿರಂಗವಾಗಿದೆ. ಎರಡು ಬಾರಿ ನಿರಂತರ ಆಡಳಿತ ಕೊಟ್ಟ ಭಾರತ್ ರಾಷ್ಟ್ರೀಯ ಸಮಿತಿ (BRS) ಆಡಳಿತ ವಿರೋಧಿ ಅಲೆ ಎದುರಿಸಿದೆ ಎಂಬುದು ಇಂಡಿಯಾ ಟಿವಿ ಸಿಎನ್‌ಎಸ್ (India Tv-CNX Exit Poll) ಸಮೀಕ್ಷೆಯಿಂದ ಗೊತ್ತಾಗಿದೆ.
India Tv-CNX Exit Poll ಸಮೀಕ್ಷೆ ಪ್ರಕಾರ, ತೆಲಂಗಾಣದಲ್ಲಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಕನಸನ್ನು ಕಾಂಗ್ರೆಸ್ ನುಚ್ಚು ನೂರು ಮಾಡಿದೆ. ಏಕೆಂದರೆ ಒಟ್ಟು 119 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ ಗೂ(60) ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಹೀಗಾಗಿ ಬಿಆರ್‌ಎಸ್ ಸೋಲುಣಬೇಕಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಇಲ್ಲಿ ಕಾಂಗ್ರೆಸ್‌ಗೆ ಒಟ್ಟು 63-79 ಸ್ಥಾನ ದೊರೆಯಲಿದೆ. ಇಷ್ಟು ಸ್ಥಾನಗಳು ಅಧಿಕಾರ ಹಿಡಿಯಲು ಸಾಕಾಗುತ್ತದೆ. ಆದರೆ ಕಾಂಗ್ರೆಸ್ ಸವಾಲಿನ ಮಧ್ಯೆ ತೀವ್ರ ಪೈಪೋಟಿ ಎದುರಿಸಿದ್ದ ಬಿಆರ್‌ಎಸ್ 31-47 ಸ್ಥಾನ ಪಡೆದುಕೊಳ್ಳಲಿದೆ. ಈ ಮೂಲಕ ಹ್ಯಾಟ್ರಿಕ್ ಭಾರಿಸಲು ಸಜ್ಜಾಗಿದ್ದ ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಭಾರಿ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ.
ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರೀಯ ಸಮಿತಿ (BRS) ಚುನಾವಣೆ ಸ್ಪರ್ಧೆ ಮಧ್ಯೆ ಬಿಜೆಪಿ ಮತ್ತು ಎಐಎಂಐಎಂ ಮತ್ತಿತರ ಪಕ್ಷಗಳು ಸೊರಗಿವೆ. ಅಂದರೆ ತೆಲಂಗಾಣದಲ್ಲಿ ಈ ಬಾರಿಗೆ ಬಿಜೆಪಿಗೆ ಕೇವಲ 2-4 ಸ್ಥಾನ, ಎಐಎಂಐಎಂ ಪಕ್ಷಕ್ಕೆ 5-7 ಸ್ಥಾನ ಧಕ್ಕಲಿವೆ ಎಂದು ಇಂಡಿಯಾ ಟಿವಿ ಸಿಎನ್‌ಎಸ್ ಯ ಅಂಶಗಳು ಮಾಹಿತಿ ನೀಡಿವೆ.












Click it and Unblock the Notifications