CNN Exit Poll of Telangana 2023: ಯಾವ ಪಕ್ಷದವರು ಮ್ಯಾಜಿಕ್ ನಂಬರ್ ಸ್ಥಾನ ಪಡೆದಿಲ್ಲ, ಯಾರಿಗೆ ಎಷ್ಟು ಸೀಟು?

ನವದೆಹಲಿ, ನವೆಂಬರ್ 30: ತೆಲಂಗಾಣದಲ್ಲಿ ಇಂದು ಶಕ್ರವಾರ ನವೆಂಬರ್ 30ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಸಂಜೆ 5 ಗಂಟೆಯವರೆಗೆ ಶೇ.62ರಷ್ಟು ಮತದಾನ ಆಗಿದೆ. ಇದಾದ ಬಳಿಕ ಚುನಾವಣೋತ್ತರ ಫಲಿತಾಂಶ ಹೊರ ಬಿದ್ದಿದೆ. ತೆಲಂಗಾಣ ಸೇರಿದಂತೆ ಒಟ್ಟು ಐದು ರಾಜ್ಯಗಳ ಸಂಭವನೀಯ ಫಲಿತಾಂಶ ಇದಾಗಿದೆ.

ತೆಲಂಗಾಣ ರಾಜ್ ಕುರಿತು ಹೇಳಿದ್ದ ಎಲ್ಲ ಭವಿಷ್ಯಗಳು ಸುಳ್ಳಾಗುವ ಲಕ್ಷಣಗಳು ಕಾಣುತ್ತಿವೆ. CNN (CNN Exit Poll ) ನಡೆಸಿದ ಎಕ್ಸಿಟ್ ಪೋಲ್‌ಗಳಲ್ಲಿ ರಾಜಕೀಯ ಭವಿಷ್ಯ ಯಾರ ಕೈಗು ಸಿಗದಂತೆ ಬದಲಾದ ಸ್ಥಿತಿಯಲ್ಲಿ ಲಭ್ಯವಾಗಿದೆ. ಅಂದರೆ ನಿರೀಕ್ಷೆಗಳು ಸುಳ್ಳಾಗಿದ್ದು, ಇದಕ್ಕೆ ಬಿಆರ್‌ಎಸ್‌ ಅನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

Telangana Election Exit Polls 2023: Corngess vs BRS, Check CNN Exit Poll Prediction

ಸಿಎನ್‌ಎನ್‌ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಅಧಿಕಾರ ಹುದ್ದೆಗೆ ಏರಲು ಬೇಕಾದ ಸ್ಥಾನ ಪಡೆದಿಲ್ಲ. ಆದರೆ ಕಾಂಗ್ರೆಸ್‌ ಅರ್ಹ ಸ್ಥಾನಕ್ಕೆ ಬೇಕಾದ ಅರ್ಹತೆಗೆ ತುಸು ಹತ್ತಿರದ ಸ್ಥಾನ ಪಡೆದಿವೆ. ಅಂದರೆ ಕಾಂಗ್ರೆಸ್- 56 ಸ್ಥಾನ ಪಡೆಯಲಿದೆ ಎಂದಾದರೆ, ಭಾರತ್ ರಾಷ್ಟ್ರ ಸಮಿತಿ (BRS) 48 ಸ್ಥಾನ ಗಳಿಸುವ ಸಂಭವವಿದೆ.

ತೆಲಂಗಾಣದಲ್ಲಿರುವ ಒಟ್ಟು 119 ಸ್ಥಾನಗಳ ಪೈಕಿ ಸರ್ಕಾರ ರಚಿಸಲು ಅಗತ್ಯವಿರುವ 60 ಸ್ಥಾನಗಳನ್ನು ಯಾವುದೇ ಪಕ್ಷ ಪಡೆಯುವುದಿಲ್ಲ ಎಂದು ಸಿಎನ್‌ಎನ್‌ ಸಮೀಕ್ಷೆ ತಿಳಿಸಿದೆ.

ರಾಜ್ಯದಲ್ಲಿ ಬಿಜೆಪಿ 10 ಸ್ಥಾನಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. AIMIM ಅಭ್ಯರ್ಥಿಗಳು ಐದು ಕ್ಷೇತ್ರಗಳಲ್ಲಿ ಗೆಲ್ಲಲಿದ್ದಾರೆ. ಸಿಎನ್ಎನ್ ಎಕ್ಸಿಟ್ ಪೋಲ್ ಪ್ರಕಾರ, ಮಜ್ಲಿಸ್ ಅಭ್ಯರ್ಥಿಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಆದರೆ ಇದ್ಯಾವುದು ಅಂತಿಮವಲ್ಲ ಎಂಬುದನ್ನು ಗಮನಿಸಬೇಕಿದೆ. ಡಿಸೆಂಬರ್ 3ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+