Telanagana Exit Poll 2023: ಮತದಾನೋತ್ತರ 'ತೆಲಂಗಾಣದ' ಒಟ್ಟು ಚಿತ್ರಣ ಹೇಗಿದೆ, ಯಾರಿಗೆ ಜೈಕಾರ? ವಿವರ

ನವದೆಹಲಿ, ನವೆಂಬರ್ 30: ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಸದ್ದು ಮಾಡಿದ್ದ ತೆಲಂಗಾಣದಲ್ಲಿಂದು ಮತದಾನ ಪೂರ್ಣಗೊಳ್ಳುತ್ತಿದ್ದಂತೆ ವಿವಿಧ ಸಂಸ್ಥೆಗಳಿಂದ ಚುನಾವಣೋತ್ತರ ಸಮೀಕ್ಷೆಗಳು ಬಿಡುಗಡೆಗೊಂಡಿವೆ. ಇದೆಲ್ಲವುಗಳ ಅಂಕಿ ಅಂಶ ನೋಡಿದರೆ ತೆಲಂಗಾಣದಲ್ಲಿ ಬಿಆರ್‌ಎಸ್‌ ಅನ್ನು ಕಾಂಗ್ರೆಸ್‌ ಮೀರಿಸುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿ ಪಕ್ಷವಾದ ಭಾರತ್ ರಾಷ್ಟ್ರ ಸಮಿತಿ (BRS) ಗಿಂತ ಸ್ಪಷ್ಟವಾದ ಮುನ್ನಡೆ ಸಾಧಿಸಿದೆ ಎಂಬುದನ್ನು ಬಹುತೇಕ ಎಲ್ಲ ಸಮೀಕ್ಷೆಗಳೂ ಸೂಚಿಸಿವೆ. ಈ ಮೂಲಕ ಕರ್ನಾಟಕದ ಕಾಂಗ್ರೆಸ್ ನಾಯಕರ ಪ್ರಯತ್ನಗಳಿಗೆ ಫಲ ದಕ್ಕಿತಂತಾಗಿದ್ದು, ಅಧಿಕೃತ ಫಲಿತಾಂಶಕ್ಕಾಗಿ ಡಿಸೆಂಬರ್ 3ರವರೆಗೂ ಕಾಯಬೇಕಿದೆ. ಭಾನುವಾರ ಚುನಾವಣೆ ಆಯೋಗವೇ ಯಾರಿಗೆ ಗೆಲುವು ಎಂಬುದನ್ನು ಖಚಿತಪಡಿಸಿವೆ.

Telangana Election Exit Polls 2023: Corngess got Mejority in State Against BRS, Check all Exit Poll Results

ತೆಲಂಗಾಣದಲ್ಲಿ ಬಿಆರ್‌ಎಸ್ ಮುಖ್ಯಸ್ಥ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (KCR) ಪಕ್ಷವನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್‌ಗಳ ಪ್ರಕಾರ 119 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 63-79 ಸ್ಥಾನಗಳನ್ನು ಗೆಲ್ಲಬಹುದು, ಬಿಆರ್‌ಎಸ್ 31-47 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ.


ವಿವಿಧ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಅಗ್ರಸ್ಥಾನ

ಜನ್ ಕಿ ಬಾತ್‌ನ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 48-64, ಬಿಆರ್‌ಎಸ್ ಪಕ್ಷವು 40-55 ಸ್ಥಾನ ಪಡೆದರೆ ಬಿಜೆಪಿ 7-13 ಸ್ಥಾನಗಳನ್ನು ಪಡೆಯಬಹುದು ಎಂದು ಮುನ್ಸೂಚನೆ ನೀಡಿದೆ.

ಟಿವಿ9 ಭಾರತ್ ವರ್ಷ್-ಪೋಲ್‌ಸ್ಟ್ರಾಟ್ ನಿರ್ಗಮನ ಸಮೀಕ್ಷೆಯನ್ನು ನೋಡುವುದಾದರೆ, ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗೆ ಕ್ರಮವಾಗಿ 49-59 ಮತ್ತು 48-58 ಸ್ಥಾನಗಳ ಗಳಿಸಬಹುದು ಎಂದು ಮಾಹಿತಿ ನೀಡಿವೆ.

ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ 58-68 ಸ್ಥಾನಗಳನ್ನು ಗೆಲ್ಲಲಿದೆ. ಬಿಆರ್‌ಎಸ್ ಕನಿಷ್ಠ 46-56 ಸ್ಥಾನಗಳನ್ನು ಪಡೆಯುವ ಸಾಧ್ಯೆಗಳು ಇವೆ.

ಇತ್ತ ನ್ಯೂಸ್ 24-ಟುಡೇಸ್, ಚಾಣಕ್ಯ ಸಂಸ್ಥೆಗಳು ಸಹ ಮತದಾನೋತ್ತರ ಸಮೀಕ್ಷೆ ಪ್ರಕಟಿಸಿದ್ದು, ಇದರಲ್ಲಿ ಕಾಂಗ್ರೆಸ್ 71 ಸ್ಥಾನಗಳ ಬೃಹತ್ ಬಹುಮತ ನೀಡಿದೆ. ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಪಕ್ಷವು ಸುಮಾರು 33 ಸ್ಥಾನಗಳನ್ನು ಗೆಲ್ಲುವ ಲಕ್ಷಣಗಳು ಇವೆ ಎಂದು ತಿಳಿಸಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ 07 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ದಕ್ಷಿಣ ರಾಜ್ಯದಲ್ಲಿ ಕಾಂಗ್ರೆಸ್, ಕೆಸಿಆರ್ ಅವರ ಬಿಆರ್‌ಎಸ್ ಮತ್ತು ಬಿಜೆಪಿ ಪ್ರಮುಖ ಸ್ಪರ್ಧಿಗಳಾಗಿವೆ. ಅದರಲ್ಲಿ ತೆಲಂಗಾಣದಲ್ಲಿ ಮಾತ್ರ ಎರಡು ಭಾರಿ ಗೆದ್ದಿದ್ದ ಬಿಆರ್‌ಎಸ್‌ ಪಕ್ಷಕ್ಕೆ ಕಾಂಗ್ರೆಸ್ ಪ್ರಬಲ ಸವಾಲೊಡ್ಡಿತ್ತು. ಅದರಂತೆ ಇಂದು ಕೈ ಪಡೆ ಅಧಿಕಾರ ಪಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಅಧಿಕೃತ ಫಲಿತಾಂಶಕ್ಕೆ ಇನ್ನೂ ಎರಡು ದಿನ ಕಾಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+