C-PAC Telangana Exit Poll 2023: ಕಾಂಗ್ರೆಸ್‌ಗೆ ಗೆಲವು, ಬಿಆರ್‌ಎಸ್‌ಗೆ ಸೋಲು, ಬಿಜೆಪಿಗೆ ಮುಖಭಂಗ?
ನವದೆಹಲಿ, ನವೆಂಬರ್ 30: ತೆಲಂಗಾಣದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ಹಲವು ಸುದ್ದಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡಿವೆ. ಅದೇ ರೀತಿ 'ಸಿ-ಪ್ಯಾಕ್' ಸಂಸ್ಥೆ ಸಮೀಕ್ಷೆಯು ತೆಲಂಗಾಣದಲ್ಲಿ ಈ ಹಿಂದಿನ ಆಡಳಿತ ಪಕ್ಷಕ್ಕೆ ಬಿಆರ್‌ಎಸ್‌ಗೆ ಸೋಲಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಚುನಾವಣೋತ್ತರ C-PAC ಸಮೀಕ್ಷೆ ಉಲ್ಲೇಖಿಸಿರುವಂತೆ, ಬಿಆರ್‌ಎಸ್‌ಗೆ 41 ಸೀಟು, ಕಾಂಗ್ರೆಸ್‌ಗೆ 65 ಸ್ಥಾನ ಲಭಿಸಲಿವೆ ಎಂದು ತಿಳಿಸಿರುವುದು ಕಾಂಗ್ರೆಸ್ ನಾಯಕರ ಸಂತಸಕ್ಕೆ ಕಾರಣವಾಗಿದೆ. ಇನ್ನೂ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿ ಕೇಸರಿ ಪಡೆಗೆ ಕೇವಲ 4 ಸ್ಥಾನ ಸಿಗಬಹುದು ಎಂದು ತಿಳಿಸಲಾಗಿದೆ. ಎಂಐಎಂಐಎಂಗೆ 5 ಸೀಟು ಮತ್ತು ಇತರೆ ಪಕ್ಷಗಳು 4 ಸೀಟು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಒಟ್ಟಾರೆ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಬಿಆರ್‌ಎಸ್ ಸೇರಿದಂತೆ ಬಿಜೆಪಿ, ಇತರೆ ಪಕ್ಷಗಳನ್ನು ಧೂಳಿಪಟ ಮಾಡಿದೆ. ಹೀಗಿದ್ದರೂ ಬಿಆರ್‌ಎಸ್ ಕೆಲವು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ.
ಚನಾವಣೋತ್ತರ ಸಮೀಕ್ಷೆಗಳು ಅಂತಿಮವಲ್ಲ. ಇದು ಅಂತಿಮ ಫಲಿತಾಂಶಯನ್ನು ಊಹಿಸಲು ಸಾಧ್ಯವಾಗುವಂತೆ ಒಂದಷ್ಟು ಸಮೀಕ್ಷೆಗಳು, ಅಂಶಗಳನ್ನು ನೀಡುತ್ತವೆ. ಇದರಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಆಗಿದ್ದು, ಬಿಆರ್‌ಎಸ್‌ಗೆ ಭಾರಿ ಹಿನ್ನಡೆ ಆಗುವ ಸಂಭವವಿದೆ.
ಒಟ್ಟು 119 ಕ್ಷೇತ್ರಗಳಲ್ಲಿ ಬಿಆರ್‌ಎಸ್ ಸ್ಫರ್ಧಿಸಿತ್ತು. ಕಾಂಗ್ರೆಸ್ 118ರಲ್ಲಿ ಸ್ಫರ್ಧಿಸಿತ್ತು. ಕಾಮರೆಡ್ಡಿ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ವಿರುದ್ಧ ಕಾಂಗ್ರೆಸ್‌ನಿಂದ ರೇವಂತ್ ರೆಡ್ಡಿ ಸ್ಪರ್ಧಿಸಿದ್ದರು. ಇದೀಗ ತೆಲಂಗಾಣದಲ್ಲಿ ಕೈ ನಾಯಕರು ಮಂದಹಾಸ ಮೂಡಿದ್ದು, ಅಂತಿಮ ಫಲಿತಾಂಶ ಡಿಸೆಂಬರ್ 3ರಂದು ಹೊರ ಬೀಳಲಿದೆ.












Click it and Unblock the Notifications