ತೆರಿಗೆ ತಪ್ಪಿಸಿದ 3-4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಜಮೆ

Posted By:
Subscribe to Oneindia Kannada

ನವದೆಹಲಿ, ಜನವರಿ 10: ಅಪನಗದೀಕರಣ ಘೋಷಣೆಯಾದ ನವೆಂಬರ್ 8ರ ನಂತರ ಕೇಂದ್ರ ಸರಕಾರ ಅಂದಾಜಿಸಿರುವ ಪ್ರಕಾರ 3ರಿಂದ 4 ಲಕ್ಷ ಕೋಟಿ ರುಪಾಯಿ ತೆರಿಗೆ ತಪ್ಪಿಸಿದ ಹಣವು ಬ್ಯಾಂಕ್ ಗಳಿಗೆ ಜಮೆಯಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ತೆರಿಗೆ ಕಟ್ಟದ ಮೂರ್ನಾಲ್ಕು ಲಕ್ಷ ಕೋಟಿ ರುಪಾಯಿ ಹಣದ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಐಟಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

"ನಮ್ಮ ಬಳಿ ಈಗ ಟ್ರಂಕ್ ಗಟ್ಟಲೆ ಮಾಹಿತಿ ಇದೆ. ಅಪನಗದೀಕರಣದ ನಂತರ ಎರಡು ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಅರವತ್ತು ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದೆ. ಈ ಖಾತೆಗಳಲ್ಲಿ 7.34 ಲಕ್ಷ ಕೋಟಿ ರುಪಾಯಿ ಹೆಚ್ಚು ಹಣ ಜಮೆಯಾಗಿದೆ. ನವೆಂಬರ್ 9ರ ನಂತರ 10,700 ಕೋಟಿಗೂ ಹೆಚ್ಚು ಹಣ ಈಶಾನ್ಯ ಭಾರತದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದೆ.[ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!]

Tax evasion suspected 3-4 lakh crore deposits after Nov 8th

ಕೋ ಅಪರೇಟಿವ್ ಬ್ಯಾಂಕ್ ಗಳಲ್ಲಿ ಜಮೆಯಾಗಿರುವ 16 ಸಾವಿರ ಕೋಟಿ ರುಪಾಯಿ ಹಣದ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಕಣ್ಣಿರಿಸಿದೆ. 500, 1000 ರುಪಾಯಿ ನೋಟುಗಳ ನಿಷೇಧವಾದ ನಂತರ 80 ಸಾವಿರ ಕೋಟಿ ರುಪಾಯಿ ಸಾಲವನ್ನು ಹಿಂತಿರುಗಿಸಲಾಗಿದೆ.

2ರಿಂದ 2.5 ಲಕ್ಷ ರುಪಾಯಿ ಜಮೆ ಮಾಡಿದ ಮೊತ್ತದ ಪೈಕಿ ಅನುಮಾನಾಸ್ಪದ ಎನಿಸುವಂಥ 42 ಸಾವಿರ ಕೋಟಿ ರುಪಾಯಿ ಇದೆ. ಅವುಗಳೆಲ್ಲ ಒಂದೇ ಪ್ಯಾನ್ ಕಾರ್ಡ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ಅಥವಾ ವಿಳಾಸ ಹೊಂದಿವೆ ಅವುಗಳ ಬಗ್ಗೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.[500, 1000 ರು. ನೋಟು ನಿಷೇಧ ಸರ್ಕಾರದ್ದು, ಆರ್ ಬಿಐನದ್ದಲ್ಲ!]

ಪ್ಯಾನ್ ಕಾರ್ಡ್ ಸಂಖ್ಯೆ ಹಾಕದೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡಿದ ಬ್ಯಾಂಕ್ ಖಾತೆದಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As it analyses bank deposits post- demonetisation, the government has found that an estimated Rs 3-4 lakh crore of tax-evaded income could have been deposited during 50-day window provided to get rid of junked Rs 500/1000 notes.
Please Wait while comments are loading...